ಡಿಕೆಶಿ ರಕ್ಷಣೆಗೆ ಬಸವನಗುಡಿಯಲ್ಲಿ ಒಕ್ಕಲಿಗರಿಂದ ಬೃಹತ್ ಪ್ರತಿಭಟನೆ

Recommended Video

      DK Shivakumar : ಡಿಕೆಶಿ ರಕ್ಷಣೆಗೆ ಒಕ್ಕಲಿಗರಿಂದ ಬೃಹತ್ ಪ್ರತಿಭಟನೆ | Oneindia Kannada

      ಬೆಂಗಳೂರು, ಸೆಪ್ಟೆಂಬರ್ 09: ಜಾರಿ ನಿರ್ದೇಶನಾಲಯ(ಇ.ಡಿ.)ದಿಂದ ಬಂಧನಕ್ಕೊಳಗಾದ ಕಾಂಗ್ರೆಸ್ ನಾಯಕ, ಕನಕಪುರ ಶಾಸಕ ಡಿ.ಕೆ.ಶಿವಕುಮಾರ್ ಅವರ ರಕ್ಷಣೆಗಾಗಿ ಬೃಹತ್ ಪ್ರತಿಭಟನೆ ನಡೆಸಲು ಒಕ್ಕಲಿಗ ಸಂಘ ಸಂಸ್ಥೆಗಳ ಒಕ್ಕೂಟ ಮುಂದಾಗಿದೆ.

      ಸೆಪ್ಟೆಂಬರ್ 11 ರಂದು ಬುಧವಾರ ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೇಜ್ ಮೈದಾನದಿಂದ ರಾಜಭವನದವರೆಗೆ ಬೃಹತ್ ಪ್ರತಿಭಟನಾ rally ನಡೆಸಲು ಒಕ್ಕೂಟ ನಿರ್ಧರಿಸಿದೆ.

      ಈಗಾಗಲೇ ರಾಮನಗರ, ಮಂಡ್ಯ ಮತ್ತು ಬೆಂಗಳೂರಿನ ಹಲವೆಡೆ ಡಿಕೆಶಿ ಅವರ ಬಂಧನವನ್ನು ವಿರೋಧಿಸಿ ಹಲವು ಪ್ರತಿಭಟನೆಗಳು ನಡೆದಿವೆ. ಕನಕಪುರದಲ್ಲಿ ಕಳೆದ ಐದು ದಿನಗಳಿಂದಲೂ ಪ್ರತಿಭಟನೆ ನಡೆಯುತ್ತಲೇ ಇದೆ.

       DK Shivakumar arrest: Various Vokkaliga organisation in Karnataka has decided to protest on Sep 9

      "ಇ.ಡಿ. ಮತ್ತು ಐ.ಟಿ(ಆದಾಯ ತೆರಿಗೆ) ಇಲಾಖೆಗಳ ಮೂಲಕ ಒಕ್ಕಲಿಗ ಜನಾಂಗದ ಪ್ರಭಾವಿ ನಾಯಕರಾದ ಡಿ.ಕೆ.ಶಿವಕುಮಾರ್ ಅವರ ಮೇಲೆ ರಾಜಕೀಯ ಸೇಡನ್ನು ತೀರಿಸಿಕೊಳ್ಳುತ್ತಿರುವ ಒಕ್ಕಲಿಗರ ವಿರೋಧಿ ಕೇಂದ್ರ ಸರ್ಕಾರದ ಇಬ್ಬಗೆಯ ನೀತಿ ಖಂಡಿಸಿ ಬೃಹತ್ ಪ್ರತಿಭಟನಾ rally" ನಡೆಸುವುದಾಗಿ ಒಕ್ಕೂಟದ ಮುಖಂಡರು ತಿಳಿಸಿದ್ದಾರೆ.

      ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರ ದೆಹಲಿ ನಿವಾಸದ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ಜಾರಿ ನಿರ್ದೇಶನಾಲಯ ಸೆ.3ರಂದು ಬಂಧಿಸಿತ್ತು.

      ಅವರನ್ನು ಸೆ.13 ರವರೆಗೆ ಇ.ಡಿ. ವಶಕ್ಕೆ ಒಪ್ಪಿಸಲಾಗಿದೆ. 2017 ರಲ್ಲಿ ಡಿಕೆಶಿ ಅವರ ದೆಹಲಿ ನಿವಾಸದ ಮೇಲೆ ದಾಳಿ ನಡೆಸಿದ್ದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ 8.59 ಕೋಟಿ ರೂ. ನಗದು ಹಣ ದೊರಕಿತ್ತು. ಈ ಪ್ರಕರಣವೇ ಅವರಿಗೀಗ ಮುಳುವಾಗಿದ್ದು, ಅವರ ಬಂಧನಕ್ಕೂ ಕಾರಣವಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+