ಮೊಳಕಾಲ್ಮೂರು ಅಭ್ಯರ್ಥಿಗೆ ದೇಣಿಗೆ ನೀಡಿ ಎಂದ ರಮ್ಯಾ

ಬೆಂಗಳೂರು, ಮೇ 09: ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪರ ಇದೇ ಮೊದಲ ಬಾರಿ ಕಾಂಗ್ರೆಸ್ ಪಕ್ಷದ ಸಾಮಾಜಿಕ ಮಾಧ್ಯಮ ವಿಭಾಗದ ಮುಖ್ಯಸ್ಥೆ ದಿವ್ಯಸ್ಪಂದನ ಅವರು ಪ್ರಚಾರ ಆರಂಭಿಸಿದ್ದಾರೆ.

ಡಾ. ಯೋಗೇಶ್ ಬಾಬು ಅವರಿಗೆ ಚುನಾವಣೆ ಖರ್ಚಿಗೆ ದೇಣಿಗೆ ನೀಡಿ, ಸ್ವಚ್ಛ ರಾಜಕೀಯದಲ್ಲಿ ನೀವು ನಂಬಿಕೆ ಇರಿಸಿಕೊಂಡಿದ್ದರೆ, ದಯವಿಟ್ಟು, ದೇಣಿಗೆ ನೀಡಿ ಎಂದು ಕೇಳಿಕೊಂಡಿದ್ದಾರೆ.

ದೇಣಿಗೆ ಮೊತ್ತ ಸಂಗ್ರಹಕ್ಕಾಗಿ ಪ್ರತ್ಯೇಕ ವೆಬ್ ಸೈಟ್ ಲಿಂಕ್ ಇದ್ದು, ಅದರಲ್ಲಿ ಪ್ರತಿಸ್ಪರ್ಧಿ ಬಿ ಶ್ರೀರಾಮುಲು ಹಾಗೂ ಡಾ. ಯೋಗೇಶ್ ಬಾಬು ಅವರ ಬಗ್ಗೆ ವಿವರಗಳಿವೆ. ಜತೆಗೆ ರಮ್ಯಾ ಸೇರಿದಂತೆ ದೇಣಿಗೆ ನೀಡಿದವರ ವಿವರಗಳಿವೆ.

ಸುಮಾರು 28 ಲಕ್ಷ ರುಗಳ ಗುರಿ ಹೊಂದಲಾಗಿದ್ದು, ಸದ್ಯ ಈ ಸಮಯಕ್ಕೆ (3.42) 7,49,525 ರು ಸಂಗ್ರಹವಾಗಿದೆ. 316ಕ್ಕೂ ಅಧಿಕ ಮಂದಿ ತಮ್ಮ ಕೊಡುಗೆ ನೀಡಿದ್ದಾರೆ.

Divya Spandana campaigns for Yogesh Babu Crowdfunding Fund raising

ಹಾಲಿ ಜಿಪಂ ಸದಸ್ಯ ಡಾ. ಯೋಗೀಶ್ ಬಾಬು ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರೆ, ಹಾಲಿ ಶಾಸಕ ತಿಪ್ಪೇಸ್ವಾಮಿ, ಬಿಎಸ್ಆರ್ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಈ ಬಾರಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿದ್ದಾರೆ. ಮಾಜಿ ಸಚಿವ ಬಿ ಶ್ರೀರಾಮುಲು ಅವರು ಕಣದಲ್ಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+