• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದೇವೇಗೌಡರ ಫೋನ್‌ ಕರೆ ಸ್ವೀಕರಿಸಲಿಲ್ಲವೇ ಯಡಿಯೂರಪ್ಪ?

|
Google Oneindia Kannada News
   Yeddyurappa did not pick Deve Gowda's phone call..?

   ಬೆಂಗಳೂರು, ನವೆಂಬರ್ 6: ಸರ್ಕಾರದ ಜೊತೆ ನಾವಿದ್ದೀವಿ ಎಂದು ಅಭಯ ನೀಡಲು ಹಾಗೆಯೇ ಯಾದಗಿರಿ ಸಬ್‌ಇನ್‌ಸ್ಪೆಕ್ಟರ್ ವಿಚಾರ ದೇವೇಗೌಡರು ಕರೆ ಮಾಡಿದ್ದರು ಆದರೆ ಯಡಿಯೂರಪ್ಪ ಕರೆಯನ್ನು ಸ್ವೀಕರಿಸಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ.

   ಸರ್ಕಾರಕ್ಕೆ 100 ದಿನ; ಯಡಿಯೂರಪ್ಪ ಹೇಳಿದ ಸಾಧನೆಗಳುಸರ್ಕಾರಕ್ಕೆ 100 ದಿನ; ಯಡಿಯೂರಪ್ಪ ಹೇಳಿದ ಸಾಧನೆಗಳು

   ಆದರೆ ನನಗೆ ದೇವೇಗೌಡರಿಂದ ಯಾವುದೇ ಕರೆ ಬಂದಿಲ್ಲ, ದೇವೇಗೌಡರು ಕರೆ ಮಾಡಿದ್ದರು ಎನ್ನುವುದರಲ್ಲಿ ಯಾವುದೇ ಸತ್ಯಾಂಶ ಇಲ್ಲ. ದೇವೇಗೌಡರಿಗೆ ಯಾವುದು ಸರಿ ಯಾವುದು ತಪ್ಪು ಎಂದು ತೀರ್ಮಾನ ಮಾಡುವ ಶಕ್ತಿ ಇದೆ, ನಾನು ದೇವೇಗೌಡರ ಹೆಸರನ್ನೂ ಯಾವುದೇ ಸಮಯದಲ್ಲೂ ಪ್ರಸ್ತಾಪ ಮಾಡಿಲ್ಲ ಎಂದು ಹೇಳಿದ್ದಾರೆ.

   ದೇವೇಗೌಡರ ಹೋರಾಟಕ್ಕೆ ಎಚ್ಚೆತ್ತ ಯಡಿಯೂರಪ್ಪ

   ದೇವೇಗೌಡರ ಹೋರಾಟಕ್ಕೆ ಎಚ್ಚೆತ್ತ ಯಡಿಯೂರಪ್ಪ

   ಯಾದಗಿರಿ ಸಬ್‌ ಇನ್ಸ್‌ಪೆಕ್ಟರ್ ವರ್ಗಾವಣೆ ಮಾಡಲಾಗಿದೆ. ಅವರನ್ನು ರಜೆ ಮೇಲೆ ತೆರಳುವಂತೆ ಹೇಳಿದ್ದೇನೆ.ಅವರು ಯಾದಗಿರಿಯನ್ನು ಬಿಟ್ಟು ಬೇರೆ ಕಡೆಗೆ ಹೋಗುತ್ತಾರೆ.

   ದೇವೇಗೌಡರು ನಿರ್ಧಾರವನ್ನು ಒಪ್ಪಿಕೊಳ್ಳುವ ಭರವಸೆ ಇದೆ

   ದೇವೇಗೌಡರು ನಿರ್ಧಾರವನ್ನು ಒಪ್ಪಿಕೊಳ್ಳುವ ಭರವಸೆ ಇದೆ

   ದೇವೇಗೌಡರು ಮಾಜಿ ಪ್ರಧಾನಿಗಳು ನಮ್ಮ ನಿರ್ಧಾರವನ್ನು ಒಪ್ಪಿಕೊಳ್ಳುತ್ತಾರೆ ಎನ್ನುವ ಭರವಸೆ ನನಗಿದೆ. ಯಾದಗಿರಿಯಲ್ಲಿ ಜೆಡಿಎಸ್ ಕಾರ್ಯಕರ್ತರ ಮೇಲೆ ಸಬ್‌ಇನ್‌ಸ್ಪೆಕ್ಟರ್ ದೌರ್ಜ್ಯವೆಸಗಿದ್ದರು ಎಂದು ಹೇಳಲಾಗಿತ್ತು.

   ನವೆಂಬರ್ 15ರಂದು ಸಿಎಂ ಮನೆ ಮುಂದೆ ಪ್ರತಿಭಟನೆಗೆ ನಿರ್ಧರಿಸಿದ್ದರು

   ನವೆಂಬರ್ 15ರಂದು ಸಿಎಂ ಮನೆ ಮುಂದೆ ಪ್ರತಿಭಟನೆಗೆ ನಿರ್ಧರಿಸಿದ್ದರು

   ಜೆಡಿಎಸ್ ಕಾರ್ಯಕರ್ತ ಬಾಯಲ್ಲಿ ಪಿಸ್ತೂಲ್ ಇಟ್ಟು ದೌರ್ಜನ್ಯ ಎಸಗಿರುವ ಯಾದಗಿರಿ ನಗರ ಠಾಣೆ ಸಬ್‌ಇನ್‌ಸ್ಪೆಕ್ಟರ್ ವಿರುದ್ಧ ಕ್ರಮ ತೆಗೆದುಕೊಳ್ಳದಿದ್ದರೆ ಯಡಿಯೂರಪ್ಪ ನಿವಾಸದ ಎದುರು ನವೆಂಬರ್ 15ರಂದು ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದರು.

   ಘಟನೆ ಹಿನ್ನೆಲೆ ಏನು?

   ಘಟನೆ ಹಿನ್ನೆಲೆ ಏನು?

   ಗುರುಮಿಟಕಲ್‌ ಕ್ಷೇತ್ರದ ಜೆಡಿಎಸ್‌ ಪ್ರಧಾನ ಕಾರ್ಯದರ್ಶಿ ಮಾರ್ಕಂಡಪ್ಪ ಮಾನೇಗಾರ್‌ ಅವರನ್ನು ಅಮಾನವೀಯವಾಗಿ ಸಬ್‌ಇನ್‌ಸ್ಪೆಕ್ಟರ್‌ ಬಾಪುಗೌಡ ಥಳಿಸಿದ್ದರು. ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಯಡಿಯೂರಪ್ಪಗೆ ದೇವೇಗೌಡರು ಪತ್ರ ಬರೆದಿದ್ದರು. ಡಿಐಜಿಗೂ ಕರೆ ಮಾಡಿ ವಿಷಯ ತಿಳಿಸಿದ್ದರು. ಇದೀಗ ಯಡಿಯೂರಪ್ಪ ಪೊಲೀಸ್ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ.

   English summary
   There have been rumors former Prime Minister HD Deve Gowda did not Called me said Chief Minister Yediyurappa.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X