ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

3 ವರ್ಷದಲ್ಲಿ ಐಐಟಿ ಮಾದರಿಯಲ್ಲಿ ಯುವಿಸಿಇ ಅಭಿವೃದ್ಧಿ: ಸಿಎಂ ಬೊಮ್ಮಾಯಿ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 15: ಮುಂದಿನ 3 ವರ್ಷಗಳಲ್ಲಿ ವಿಶ್ವೇಶ್ವರಯ್ಯ ಕಾಲೇಜ್ ಆಫ್ ಇಂಜಿನಿಯರಿಂಗ್ (ಯುವಿಸಿಇ) ಅನ್ನುಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುವುದು. ಅದಕ್ಕಾಗಿ ಪೂರಕ ಶಿಕ್ಷಕ ವರ್ಗ, ಮೂಲಸೌಕರ್ಯ, ಲ್ಯಾಬ್ ವ್ಯವಸ್ಥೆ ಸೇರಿದಂತೆ ಎಲ್ಲ ವ್ಯವಸ್ಥೆಗಳ ಒದಗಿಸಲು ಸರ್ಕಾರ ಸಹಕರಿಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಗುರುವಾರ ನಗರದ ಯುವಿಸಿಇ ವತಿಯಿಂದ ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯ ಅವರ 162ನೇ ಜನ್ಮ ದಿನೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ 'ಅಭಿಯಂತರರ ದಿನಾಚರಣೆ' ಉದ್ಘಾಟಿಸಿ ಅವರು ಮಾತನಾಡಿದರು. ಸ್ವಾಯತ್ತತೆ ಮತ್ತು ತನ್ನ ಸಂಶೋಧನಾತ್ಮಕ ಹಾಗೂ ಭವಿಷ್ಯದ ಅಭಿವೃದ್ಧಿಗೆ ಅಗತ್ಯವಿದ್ದ ಹಿನ್ನೆಲೆ ಯುವಿಸಿಯನ್ನು ವಿಶ್ವವಿದ್ಯಾಲಯವಾಗಿ ಮಾಡಲಾಯಿತು. ಯುವಿಸಿಇ 105 ವರ್ಷಗಳನ್ನು ಪೂರೈಸಿದೆ. ವಿಶ್ವದಲ್ಲೇ ಅತ್ಯುತ್ತಮ ತಾಂತ್ರಿಕ ವಿಶ್ವವಿದ್ಯಾಲಯವನ್ನಾಗಿ ಮಾಡುವ ಜವಾಬ್ದಾರಿ ಇಲ್ಲಿನ ವಿದ್ಯಾರ್ಥಿಗಳ ಕೈಯಲ್ಲಿದೆ ಎಂದು ತಿಳಿಸಿದರು.

ವಿಶ್ವದಾದ್ಯಂತ ಯುವಿಸಿಇ ಬಂದ ಇಂಜಿನಿಯರ್‌ಗಳು ಸಾಕಷ್ಟು ಸಾಧನೆ ಮಾಡಿದ್ದಾರೆ. ಯುವಿಸಿಇಯ ಶಕ್ತಿಯ ಮೇಲೆ ನನಗೆ ನಂಬಿಕೆಯಿದೆ. ಯುವಿಸಿಇ ಸಂಸ್ಥೆ ಐಐಟಿಯಾಗಲು ಎಲ್ಲ ಬದ್ಧತೆ, ಇಚ್ಛಾಶಕ್ತಿ ಬೇಕು. ಕರ್ನಾಟಕದಲ್ಲಿ 7 ಇಂಜಿನಿಯರಿಂಗ್ ಕಾಲೇಜುಗಳನ್ನು ಐಐಟಿಯನ್ನಾಗಿಸುವ ಕನಸು ನನ್ನದು. ಮುಂದಿನ ಐದು ವರ್ಷಗಳಲ್ಲಿ ಈ ಕನಸು ನನಸಾಗಲಿದೆ ಎಂದರು.

Development of UVCE like on IIT model in Next 3 years: CM Bommai

ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ ಹೊಸ ದಿಕ್ಸೂಚಿ

ಯುವಿಸಿ ಸಂಸ್ಥೆಯ ಶಿಕ್ಷಣದಲ್ಲಿ ಯಾವುದೇ ರೀತಿಯ ರಾಜಕಾರಣ ಬೇಡ. ಎಲ್ಲರ ಚಿಂತನೆಗಳನ್ನೂ ಒಗ್ಗೂಡಿಸಿ ಸಂಸ್ಥೆ ಬೆಳೆಸುವ ಸಂಕಲ್ಪ ಮಾಡಬೇಕು. ನಾನು ಯುವಿಸಿಇ ಸಂಸ್ಥೆಯಲ್ಲಿ ಓದುತ್ತಿದ್ದೇನೆ ಎಂಬ ಹೆಮ್ಮೆ ಎಲ್ಲ ವಿದ್ಯಾರ್ಥಿಗಳಲ್ಲಿಯೂ ಇರಬೇಕು. ಇಂತಹ ಸಂಸ್ಥೆಯನ್ನು ಐಐಟಿಯನ್ನಾಗಿಸಿ ರಾಜ್ಯದ ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ ಹೊಸ ದಿಕ್ಸೂಚಿ ಬರೆಯಲಾಗುವುದು.

ವಿದ್ಯಾರ್ಥಿಗಳು ಬದಲಾವಣೆಯ ಭಾಗವಾಗಬೇಕು. ವಿಚಾರದಲ್ಲಿ ಬದಲಾವಣೆಯಾದರೆ ಅಭಿವೃದ್ಧಿಯಲ್ಲಿ ಸಕಾರಾತ್ಮಕ ಬದಲಾವಣೆ ಆಗುತ್ತದೆ. ಇಂಜಿನಿಯರ್‌ಗಳು ತಾರ್ಕಿಕ ಹಾಗೂ ವಿಶ್ಲೇಷಣಾತ್ಮಕ ಚಿಂತನೆ ಹೊಂದಿರಬೇಕು. ತರ್ಕಬದ್ಧ ಪ್ರಶ್ನೆಗಳ ಮೂಲಕ ತಾರ್ಕಿಕ ಚಿಂತನೆ ಬರುತ್ತದೆ. ಶಿಕ್ಷಣದಲ್ಲಿ ಮೊದಲು ಕಲಿಕೆ ನಂತರ ಪರೀಕ್ಷೆ. ಆದರೆ ನಿಜ ಜೀವನದಲ್ಲಿ ಮೊದಲ ಪರೀಕ್ಷೆ ನಂತರ ಕಲಿಕೆ. ಆದ್ದರಿಂದ ಕಲಿಕೆ ಬಹಳ ಮಹತ್ವವಾಗಿದೆ. 21ನೇ ಶತಮಾನ ಜ್ಞಾನದ ಶತಮಾನವಾಗಿದ್ದು, ಜ್ಞಾನದಿಂದ ಪ್ರಪಂಚ ಗೆಲ್ಲಬಹುದಾಗಿದೆ ಎಂದು ತಿಳಿಸಿದರು.

Development of UVCE like on IIT model in Next 3 years: CM Bommai

ಯುವಿಸಿಇ ವಿದ್ಯಾರ್ಥಿಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಬೇಕು

ಬೆಂಗಳೂರಿನಲ್ಲಿ ಅಂತಾರಾರಾಷ್ಟ್ರೀಯ ಮಟ್ಟದ 400 ಸಂಶೋಧನಾ ಕೇಂದ್ರಗಳಿವೆ. 500 ಪಾರ್ಚೂನ್ ಕಂಪನಿಗಳ ಪೈಕಿ 400 ಕಂಪನಿಗಳು ಬೆಂಗಳೂರಿನಲ್ಲಿವೆ. ಇದು ನಮ್ಮಲ್ಲಿರುವ ವ್ಯವಸ್ಥೆಗೆ ಕನ್ನಡಿ ಹಿಡಿಯುತ್ತದೆ. ಯುವಿಸಿಇ ಯಲ್ಲಿ ಕಲಿತ ವಿದ್ಯಾರ್ಥಿಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಬೇಕು. ಮುತ್ತುರಾಮನ್ ಅವರು ಟಾಟಾ ಸ್ಟೀಲ್ ಸಂಸ್ಥೆ ಕಟ್ಟಿದವರು. ದೂರದೃಷ್ಟಿಯುಳ್ಳ ಅವರು ಈ ಸಂಸ್ಥೆಯಲ್ಲಿ ಅತ್ಯುತ್ತಮ ಪ್ರತಿಭೆ ಹಾಗೂ ಬೆಂಬಲವನ್ನು ಒದಗಿಸಿ ಪರಿವರ್ತನೆ ಮಾಡುವುದಾಗಿ ಭರವಸೆ ನೀಡಿದ್ದಾರೆ.

ಸಡಗೋಪನ್ ಅವರಂಥ ಮೇಧಾವಿಗಳು ಈ ಸಂಸ್ಥೆಯಲ್ಲಿರುವುದು ಹೆಮ್ಮೆಯ ಸಂಗತಿ. ಅವರು ಕರ್ನಾಟಕದಲ್ಲಿ ಮೂರು ಐಟಿ ಸಂಸ್ಥೆಗಳ ಪಿತಾಮಹರಾಗಿದ್ದಾರೆ ಎಂದು ಹೇಳಿದರು.

English summary
Development of University Visvesvaraya College of Engineering (UVCE) like on Indian Institute Of Technology (IIT) model in Next 3 years say CM Basavaraj Bommai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X