ಶಾಲಾ ವ್ಯಾನಿನಲ್ಲಿ ಅನಿಲ ಸೋರಿ ಬೆಂಕಿ: 1 ಸಾವು

devara-jeevanahalli-gas-leak-in-school-maruti-van-driver-dies
ಬೆಂಗಳೂರು, ಸೆಪ್ಟೆಂಬರ್ 18: ಶಾಲಾ ಮಕ್ಕಳ ಸಂಚಾರಕ್ಕಾಗಿ ಬಳಸುತ್ತಿದ್ದ ಮಾರುತಿ ವ್ಯಾನಿನಲ್ಲಿ ಅನಿಲ ಸೋರಿಕೆಯಾಗಿ, ಬೆಂಕಿ ಹೊತ್ತಿಕೊಂಡಾಗ ಅದರಲ್ಲಿದ್ದ ಚಾಲಕನಿಗೆ ತೀವ್ರವಾದ ಸುಟ್ಟ ಗಾಯಗಳಾಗಿ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಬೆಳಗ್ಗೆ ಮೃತಪಟ್ಟಿರುವ ಘಟನೆ ದೇವರ ಜೀವನಹಳ್ಳಿಯಲ್ಲಿ ನಡೆದಿದೆ.

ರಾಮಚಂದ್ರ (45) ಮೃತಪಟ್ಟ ಚಾಲಕ. ಇವರು ಮಾರುತಿ ವ್ಯಾನ್‌ ಇಟ್ಟುಕೊಂಡು ಅದರಲ್ಲಿ ಶಾಲಾ ಮಕ್ಕಳನ್ನು ಸಾಗಿಸಲು ಬಳಸುತ್ತಿದ್ದರು. ಅದು ಅನಿಲ ಇಂಧನ ಚಾಲಿತ ವಾಹನವಾಗಿತ್ತು. ನಿನ್ನೆ ಮಂಗಳವಾರ ಮಧ್ಯಾಹ್ನ ಮಕ್ಕಳನ್ನು ಶಾಲೆಯಿಂದ ಪಿಕಪ್ ಮಾಡಿ ಮನೆಗಳಿಗೆ ಬಿಟ್ಟು ಸುಮಾರು 4.30ರ ಸಮಯದಲ್ಲಿ ಮನೆ ಬಳಿ ಬಂದು ವಾಹನ ನಿಲ್ಲಿಸಿದರು.

ನಂತರ ಊಟ ಮಾಡಿ ವಿಶ್ರಾಂತಿ ಪಡೆಯುತ್ತಿದ್ದ ಸಂದರ್ಭದಲ್ಲಿ ಅನಿಲ ಸೋರಿಕೆಯಾಗುತ್ತಿದ್ದ ವಾಸನೆ ಬಂದಿದೆ. ಪರಿಶೀಲಿಸಿದ ನಂತರ ವಾಹನವನ್ನು ಚಾಲನೆ ಮಾಡಲು ಕೀ ಆನ್ ಮಾಡಿದ ತಕ್ಷಣ ಸಿಲಿಂಡರ್ ಬ್ಲಾಸ್ಟ್ ಆಗಿ ಬೆಂಕಿ ಹೊತ್ತಿಕೊಂಡಿದೆ.

ಅದನ್ನು ನೋಡಿದ ಸಾರ್ವಜನಿಕರು ನೀರು ಎರಚಿ ಬೆಂಕಿ ನಂದಿಸಲು ಮುಂದಾದರು. ತೀವ್ರವಾಗಿ ಸುಟ್ಟಿದ್ದ ರಾಮಚಂದ್ರನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೈಕೊ ಲೇ ಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಅದೃಷ್ಟವಶಾತ್ ವಾಹನದಲ್ಲಿ ಶಾಲಾ ಮಕ್ಕಳು ಇದ್ದಾಗ ಈ ದುರ್ಘಟನೆ ನಡೆದಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+