ಪ್ರೇಮ ವೈಫಲ್ಯ: ಫ್ಯಾಶನ್ ಡಿಸೈನರ್ ನೇಣಿಗೆ ಶರಣು

ಚೆನ್ನೈನಲ್ಲಿ ವಸ್ತ್ರ ವಿನ್ಯಾಸಕಿಯಾಗಿದ್ದ ಅಭಿಜಾತ ನಗರದ ರೆಸ್ಟೋರೆಂಟ್‌ವೊಂದರ ಮಾಲೀಕ ರೋಹಿತ್ ಜೈನ್‌ರನ್ನು ಪ್ರೀತಿಸುತ್ತಿದ್ದರು. ಚೆನ್ನೈನಿಂದ ಆಗಾಗ ನಗರಕ್ಕೆ ಬರುತ್ತಿದ್ದ ಅಭಿಜಾತ ಇಂದಿರಾನಗರದ ಸಿಎಂಎಚ್ ರಸ್ತೆಯಲ್ಲಿನ ಅಪಾರ್ಟ್‌ಮೆಂಟ್‌ನಲ್ಲಿ ಉಳಿದುಕೊಳ್ಳುತ್ತಿದ್ದರು.[ರೋಗಬಾಧೆ: ಬೆಂಗಳೂರಿನಲ್ಲಿ ವೃದ್ಧ ವೈದ್ಯ ಆತ್ಮಹತ್ಯೆ]
'ಪ್ರಿಯಕರ ರೋಹಿತ್ ಜೈನ್ ವಂಚನೆಯಿಂದ ಬೇಸರಗೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ' ಎಂದು ತನ್ನ ಮರಣ ಪತ್ರದಲ್ಲಿ ಅಭಿಜಾತ ಬರದಿದ್ದಾರೆ. ಘಟನೆ ಸಂಬಂಧ ರೋಹಿತ್ ಜೈನ್ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಇಂದಿರಾನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.[ಮಂಗಳೂರು:ಈಜುಕೊಳದಲ್ಲಿ ಮುಳುಗಿ ಯುವಕರ ಸಾವು]
ಅಭಿಜಾತ, ಮುಂಬೈ ಹಾಗೂ ಚೆನ್ನೈನಲ್ಲಿ ಫ್ಯಾಶನ್ ಡಿಸೈನರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, 2006ರಲ್ಲಿ ಸೋನಿ ಚಾನೆಲ್‌ನ ಪ್ರಸಾರವಾದ 'ಬಿಗ್‌ಬಾಸ್' ರಿಯಾಲಿಟಿ ಶೋನಲ್ಲಿ ಫ್ಯಾಶನ್ ಡಿಸೈನರ್ ಆಗಿ ಕೆಲಸ ಮಾಡಿದ್ದರು.












Click it and Unblock the Notifications