ತಾಯಿ ಸಾವಿನ ದುಃಖ ಭರಿಸಲಾಗದೆ ಟೆಕ್ಕಿ ಆತ್ಮಹತ್ಯೆ
ಬೆಂಗಳೂರು, ನ.06: ಜನಪ್ರಿಯ ಇ ಕಾಮರ್ಸ್ ಸಂಸ್ಥೆ ಅಮೆಜಾನ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಾಫ್ಟ್ ವೇರ್ ಉದ್ಯೋಗಿ ಶುಕ್ರವಾರ ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಹಡಿಯಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
24ವರ್ಷ ವಯಸ್ಸಿನ ವಿನೀತ್ ಪೂರ್ಣಚಂದ್ರ ಹೆಸರಿನ ಕಂಪ್ಯೂಟರ್ ಸೈನ್ಸ್ ಇಂಜಿನಿಯರ್ ತನ್ನ ಸ್ನೇಹಿತ ವಾಸವಿರುವ ಅಪಾರ್ಟ್ಮೆಂಟ್ ಗೆ ಗುರುವಾರ ತೆರಳಿದ್ದಾರೆ. ಶುಕ್ರವಾರ ಬೆಳಗ್ಗೆ 3 ಗಂಟೆ ಸುಮಾರಿಗೆ ಅಪಾರ್ಟ್ಮೆಂಟ್ ನ 15ನೇ ಮಹಡಿಯಿಂದ ಕೆಳಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ.

ನ್ಯೂ ತಿಪ್ಪಸಂದ್ರ ನಿವಾಸಿಯಾಗಿದ್ದ ವಿನೀತ್ ಅವರು ತಾಯಿ ಅಗಲಿಕೆ ನಂತರ ಹೊಸಕೋಟೆ ರಸ್ತೆಯಲ್ಲಿರುವ ಆರ್ಮಿ ಅಪಾರ್ಟ್‌ಮೆಂಟ್‌ನಲ್ಲಿಸ್ನೇಹಿತನ ಜೊತೆ ವಾಸವಾಗಿದ್ದರು. ಮೃತನ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ವೈದೇಹಿ ಆಸ್ಪತ್ರೆಯಲ್ಲಿ ಇಡಲಾಗಿದೆ. ಈ ಸಂಬಂಧ ಕಾಡುಗೋಡಿ ಪೊಲೀಸ್ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕ್ಯಾನರ್ ನಿಂದ ಬಳಲುತ್ತಿದ್ದ ವಿನೀತ್ ಅವರ ತಾಯಿ ಇತ್ತೀಚೆಗೆ ಮನೆಯಲ್ಲಿ ಅಸುನೀಗಿದ್ದರು. ತಾಯಿ ಶವ ಕಂಡು ದುಃಖಿತನಾದ ವಿನೀತ್ ಮನೆಬಿಟ್ಟು ಸ್ನೇಹಿತನ ಮನೆಗೆ ತೆರಳಿದ್ದ, ತಾಯಿ ಅಂತ್ಯಸಂಸ್ಕಾರಕ್ಕೆ ಬರುತ್ತೇನೆ ಎಂದು ಕಾಯುತ್ತಿದ್ದೆವು, ಶುಕ್ರವಾರ ಬೆಳಗ್ಗೆ ಕಾಡುಗೋಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿ ಸಿಕ್ಕಿತು ಎಂದು ವಿನೀತ್ ಅವರ ಸಂಬಂಧಿಕರು ಹೇಳಿದ್ದಾರೆ. (ಒನ್ ಇಂಡಿಯಾ ಸುದ್ದಿ)












Click it and Unblock the Notifications