ರಾಜ್ಯದಲ್ಲಿ ಎಲ್ಲೆಲ್ಲಿ ಎಷ್ಟೆಷ್ಟು ಡೆಂಗ್ಯೂ ಪೀಡಿತರು?
ಬೆಂಗಳೂರು, ಸೆಪ್ಟೆಂಬರ್, 25 : ರಾಜ್ಯದಲ್ಲಿ ಡೆಂಗ್ಯೂ ಪೀಡಿತರ ಸಂಖ್ಯೆ ಕಳೆದ ಬಾರಿಗಿಂತ ಈ ಬಾರಿ ಹೆಚ್ಚಳಗೊಂಡಿದ್ದು, ಈ ವರ್ಷ ಡೆಂಗ್ಯೂ ಸೋಂಕಿತರ ಸಂಖ್ಯೆ 3,791 ಕ್ಕೆ ಏರಿದೆ. ಬೆಂಗಳೂರು ವ್ಯಾಪ್ತಿಯಲ್ಲಿ 1,527 ಪ್ರಕರಣಗಳು ವರದಿಯಾಗಿದೆ. ಅದರಲ್ಲಿ ಬೆಂಗಳೂರು ನಗರದಲ್ಲಿ 262, ಗ್ರಾಮಾಂತರದಲ್ಲಿ 44 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 338 ಪ್ರಕರಣ ಬೆಳಕಿಗೆ ಬಂದಿದ್ದು, ಅದರಲ್ಲಿ ಮೂವರು ಸಾವನಪ್ಪಿದ್ದಾರೆ. ಬೆಂಗಳೂರಿನಲ್ಲಿ 1527, ಮೈಸೂರಿನಲ್ಲಿ 163, ಕೋಲಾರದಲ್ಲಿ 155, ಉಡುಪಿಯಲ್ಲಿ 153, ಚಿತ್ರದುರ್ಗದಲ್ಲಿ 151, ಬಳ್ಳಾರಿಯಲ್ಲಿ 138, ದಾವಣಗೆರೆ 120, ತುಮಕೂರು 115, ರಾಯಚೂರು 108, ಹಾವೇರಿ 103 ಡೆಂಗ್ಯೂ ಪೀಡಿತರಿದ್ದಾರೆ.[ಅಬ್ಬಾ! ಡೆಂಗ್ಯೂ ಗುಣಪಡಿಸುವ ಲಸಿಕೆ ಬಂದಿದೆಯಂತೆ]
ದೇಶದ ರಾಜಧಾನಿ ದೆಹಲಿಯಲ್ಲಿ ಈಗ ಬಂದಿರುವ ವರದಿ ಪ್ರಕಾರ ಡೆಂಗ್ಯೂ ಪೀಡಿತರು 4000 ಕ್ಕೂ ಹೆಚ್ಚಿದ್ದು, ಒಂದೇ ವಾರದಲ್ಲಿ 30 ಡೆಂಗ್ಯೂ ಪೀಡಿತರು ಕಂಡು ಬಂದಿದ್ದಾರೆ. ಕಳೆದ ಕೆಲವು ದಿನದ ಹಿಂದೆ ಒಂದೇ ಕುಟುಂಬದ ಇಬ್ಬರು ಮಕ್ಕಳು ಮರಣವನ್ನಪ್ಪಿದ್ದರೆ, ಬುಧವಾರ 20 ವರ್ಷದ ಮೋನಿಕಾ ಸಾವನ್ನಪ್ಪಿದ್ದಾರೆ.

ಡೆಂಗ್ಯೂಗೆ ಕಳೆದ ವರ್ಷ ಎಷ್ಟು ಜನ ತುತ್ತಾಗಿದ್ದರು?
ಕಳೆದ ವರ್ಷ ಡೆಂಗ್ಯೂ ಜ್ವರಕ್ಕೆ 3,026 ಮಂದಿಯನ್ನು ಬಾಧಿಸಿತ್ತು. ಆದರೆ ಈ ವರ್ಷ ಈ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು, ಕೇವಲ ಒಂಭತ್ತು ತಿಂಗಳಲ್ಲಿ 3,790 ಮಂದಿಯಲ್ಲಿ ಈ ಸೋಂಕು ಕಾಣಿಸಿಕೊಂಡಿದೆ. ಈ ಸಂಖ್ಯೆ ಇನ್ನೂ ಹೆಚ್ಚಳವಾಗುವ ಎಲ್ಲಾ ಸಾಧ್ಯತೆಗಳು ಇವೆ.[ಸೊಳ್ಳೆ ಒದ್ದೋಡಿಸುವ ಗಿಡಗಳ ನೆಟ್ಟ ಹಿರಿಯ ನಾಗರಿಕರು]
ಬೆಂಗಳೂರಲ್ಲಿ ಎಷ್ಟಿದ್ದಾರೆ ಡೆಂಗ್ಯೂ ಪೀಡಿತರು?
ಬೆಂಗಳೂರು ವ್ಯಾಪ್ತಿಯಲ್ಲಿ 1,527 ಪ್ರಕರಣಗಳು ವರದಿಯಾಗಿದ್ದು, ವಿಕ್ಟೋರಿಯಾದಲ್ಲಿ 25-30 ಡೆಂಗ್ಯೂ ರೋಗಿಗಳು ಚಿಕಿತ್ಸೆಗಾಗಿ ದಾಖಲಾಗಿದ್ದಾರೆ. ವಾಣಿ ವಿಲಾಸ ಆಸ್ಪತ್ರೆಯಲ್ಲಿ 500 ಕ್ಕೂ ಹೆಚ್ಚು ಮಂದಿ ಶುಶ್ರೂಷೆ ಪಡೆದಿದ್ದು, ಅದರಲ್ಲಿ ಇಬ್ಬರು ಮೃತಪಟ್ಟಿದ್ದಾರೆ.
ರಾಜ್ಯದಲ್ಲಿ ಡೆಂಗ್ಯೂ ಮಾರಿಗೆ ಸಣ್ಣ ಹಸುಳೆಗಳಿಂದ ಹಿಡಿದು ವಯೋ ವೃದ್ದರವರೆಗೂ ಬಲಿಯಾಗಿದ್ದಾರೆ. ಹಲವೆಡೆ ಡೆಂಗ್ಯೂ ಪೀಡಿತರಿಗೆ ಸರಿಯಾದ ಔಷಧೋಪಚಾರಗಳು ಲಭ್ಯವಾಗುತ್ತಿಲ್ಲ. ಆಸ್ಪತ್ರೆಗೆ ದಾಖಲಾಗಿ ಶುಶ್ರೂಷೆ ಪಡೆಯಲು ಯಾವುದೇ ಬೆಡ್ ಗಳೂ ಖಾಲಿ ಇಲ್ಲ. ಒಟ್ಟಿನಲ್ಲಿ ಡೆಂಗ್ಯೂಗೆ ತುತ್ತಾದವರ ಸ್ಥಿತಿ ತೀರಾ ಶೋಚನೀಯವಾಗಿದೆ. ಸರ್ಕಾರ ಇನ್ನೂ ಮುಂದಾದರೂ ಎಚ್ಚೆತ್ತುಕೊಂಡು ಡೆಂಗ್ಯೂ ನಿವಾರಣೆಗೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಇದೆ.












Click it and Unblock the Notifications