ಜುಲೈ 3ರಿಂದ ಬಿಎಂಟಿಸಿ ವಿದ್ಯಾರ್ಥಿ ಬಸ್ ಪಾಸ್ ಪಡೆಯಿರಿ

ಬೆಂಗಳೂರು, ಜೂ. 30 : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಜುಲೈ 3ರಿಂದ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ರಿಯಾಯಿತಿ ದರದ ಬಸ್ ಪಾಸುಗಳನ್ನು ವಿತರಣೆ ಮಾಡಲಿದೆ. ನಗರದ 40 ಕೌಂಟರ್‌ಗಳಲ್ಲಿ ಅರ್ಜಿ ಸಲ್ಲಿಸಿ ವಿದ್ಯಾರ್ಥಿಗಳು ಪಾಸುಗಳನ್ನು ಪಡೆಯಬಹುದಾಗಿದೆ.

ವಿದ್ಯಾರ್ಥಿ ಬಸ್ ಪಾಸುಗಳನ್ನು ಬೆಳಗ್ಗೆ 8ರಿಂದ ಸಂಜೆ 5 ಗಂಟೆಯವರೆಗೆ ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ ಪಾಸ್ ವಿತರಣಾ ಕೇಂದ್ರದಲ್ಲಿ ಪಡೆಯಬಹುದಾಗಿದೆ. ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಪಾಸು ಕೌಂಟರ್‌ಗಳು ಬೆಳಗ್ಗೆ 8 ರಿಂದ ರಾತ್ರಿ 8ರವರೆಗೆ ಕಾರ್ಯ ನಿರ್ವಹಿಸಲಿವೆ. [ವಿದ್ಯಾರ್ಥಿಗಳ ಬಸ್ ಪಾಸು ದರ ಪಟ್ಟಿ]

bmtc

ಬಿಎಂಟಿಸಿ ನಿಲ್ದಾಣಗಳಲ್ಲಿ ಬಸ್ ಪಾಸುಗಳ ಅರ್ಜಿಗಳನ್ನು ಉಚಿತವಾಗಿ ವಿತರಣೆ ಮಾಡಲಾಗುತ್ತಿದೆ. ಸಂಸ್ಥೆಯ ವೆಬ್‌ಸೈಟ್‌ನಿಂದಲೂ ಅರ್ಜಿಯ ಮುದ್ರಿತ ಪ್ರತಿಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.[ಬಿಎಂಟಿಸಿ ದಿನದ ಪಾಸು ಪಡೆಯಲು ಐಡಿ ಕಾರ್ಡ್ ಕಡ್ಡಾಯ]

ಅಗತ್ಯ ದಾಖಲೆಗಳು : ಪಾಸುಗಳನ್ನು ಪಡೆಯಲು ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಅರ್ಜಿಯ ಜೊತೆ ಪ್ರಸ್ತುತ ಸಾಲಿನ ಶುಲ್ಕ ಪಾವತಿಸಿರುವ ರಸೀದಿ, ಕಾಲೇಜು ವಿತರಿಸಿರುವ ಗುರುತಿನ ಚೀಟಿ, ಇತ್ತೀಚಿನ 2 ಪಾಸ್‌ಪೋರ್ಟ್‌ ಅಳತೆಯ ಭಾವಚಿತ್ರಗಳು, ಲಭ್ಯವಿದ್ದಲ್ಲಿ ಆಧಾರ್ ಕಾರ್ಡ್ ನಕಲು ಪ್ರತಿಯನ್ನು ನೀಡಬೇಕು. [ಬಿಎಂಟಿಸಿ ವೆಬ್ ಸೈಟ್]

ಬಿಎಂಟಿಸಿ ಬಸ್ ಪಾಸುಗಳ ಅರ್ಜಿಯ ನಮೂನೆಯನ್ನು ಬದಲಾವಣೆ ಮಾಡಿದೆ. ಆದ್ದರಿಂದ ಪರಿಷ್ಕರಣೆ ಮಾಡಿದ ಅರ್ಜಿಯನ್ನು ಮಾತ್ರ ಬಳಸಬೇಕಾಗಿದೆ. ಹಳೆಯ ಮಾದರಿ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ ಎಂದು ಬಿಎಂಟಿಸಿ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+