Bengaluru Road: ಬೆಂಗಳೂರು ರಸ್ತೆ ಯೋಜನೆಗಳು, ಸರ್ಕಾರದ ಮಹತ್ವದ ತೀರ್ಮಾನ

ಬೆಂಗಳೂರು, ಫೆಬ್ರವರಿ 25: ಉದ್ಯಾನ ನಗರಿ ಬೆಂಗಳೂರಿನ ರಸ್ತೆ ಯೋಜನೆಗಳು ಸದಾ ಚರ್ಚೆಯ ವಿಚಾರ. ಈಗ ಕರ್ನಾಟಕ ಸರ್ಕಾರ ನಗರದಲ್ಲಿ ಹಲವು ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರಲು ಮುಂದಾಗಿದೆ. ಈ ಎಲ್ಲಾ ಯೋಜನೆಗಳ ಉಸ್ತುವಾರಿಯನ್ನು ಒಂದೇ ಸಂಸ್ಥೆಯ ಅಡಿ ತರಲು ಯೋಜಿಸಲಾಗಿದೆ. ಈ ಮೂಲಕ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮೇಲಿನ ಒತ್ತಡವನ್ನು ಕಡಿಕೆ ಮಾಡಲು ಸರ್ಕಾರ ಮುಂದಾಗಿದೆ.

ಈಗಾಗಲೇ ಬೆಂಗಳೂರು ನಗರದ ನಮ್ಮ ಮೆಟ್ರೋ, ನೀರು ಪೂರೈಕೆ, ವಿದ್ಯುತ್ ಪೂರೈಕೆಯನ್ನು ಬೇರೆ ಬೇರೆ ಏಜೆನ್ಸಿಗಳು ನೋಡಿಕೊಳ್ಳುತ್ತಿವೆ. ಇದೇ ಮಾದರಿಯಲ್ಲಿ ಸುರಂಗ ಮಾರ್ಗ, ಫ್ಲೈ ಓವರ್ ನಿರ್ಮಾಣ ಸೇರಿ ರಸ್ತೆ ಯೋಜನೆಗಳ ನಿರ್ವಹಣೆಯನ್ನು ಸಂಸ್ಥೆಯೊಂದಕ್ಕೆ ವಹಿಸಲಾಗುತ್ತದೆ. ಈ ಕುರಿತು ಸರ್ಕಾರ ಗಂಭೀರವಾದ ಚಿಂತನೆ ನಡೆಸಿದ್ದು, 2025-26ನೇ ಸಾಲಿನ ಕರ್ನಾಟಕ ಬಜೆಟ್‌ನಲ್ಲಿ ಈ ಕುರಿತು ಘೋಷಣೆ ನಿರೀಕ್ಷೆ ಮಾಡಲಾಗಿದೆ.

Dedicated Agency To Handle Road Infrastructure Projects Bengaluru

ಕರ್ನಾಟಕ ಸರ್ಕಾರ ನಗರ ರಸ್ತೆ ಯೋಜನೆಗಳ ಉಸ್ತುವಾರಿ ನೋಡಿಕೊಳ್ಳಲು ಬೆಂಗಳೂರು ಸ್ಮಾರ್ಟ್‌ ಮೊಬಿಲಿಟಿ ಇನ್‌ಫ್ರಾಸ್ಟ್ರಕ್ಚರ್‌ ಲಿಮಿಟೆಡ್‌ (ಬಿಎಸ್‌ಎಂಐಎಲ್‌) ಅಥವಾ ಬೆಂಗಳೂರು ಸ್ಮಾರ್ಟ್‌ ಇನ್‌ಫ್ರಾಸ್ಟ್ರಕ್ಚರ್‌ ಲಿಮಿಟೆಡ್‌ (ಬಿಎಸ್‌ಐಎಲ್‌) ಎಂದು ಹೊಸ ಸಂಸ್ಥೆಯೊಂದನ್ನು ಸ್ಥಾಪನೆ ಮಾಡುವ ನಿರೀಕ್ಷೆ ಇದೆ. ನಗರದ ರಸ್ತೆ ಯೋಜನೆಯ ಅನುಮತಿ, ಕಾಮಗಾರಿ ಉಸ್ತುವಾರಿ, ನಿರ್ವಹಣೆಯನ್ನು ಇದು ನೋಡಿಕೊಳ್ಳಲಿದೆ.

ಬಿಬಿಎಂಪಿ ಮೇಲಿನ ಒತ್ತಡ ಕಡಿಮೆ: ಪ್ರತ್ಯೇಕ ವಿಶೇಷ ಉದ್ದೇಶದ ವಾಹಕ (ಎಸ್‌ಪಿವಿ) ರಚನೆಯಿಂದಾಗಿ ಬಿಬಿಎಂಪಿ ಮೇಲಿನ ಒತ್ತಡ ಕಡಿಮೆಯಾಗಲಿದೆ. ಅಲ್ಲದೇ ಎಲ್ಲಾ ಕಾಮಗಾರಿಗಳು ವೇಗವಾಗಿ ಸಾಗಲು ಅನುಕೂಲವಾಗಲಿದೆ. ಈಗಾಗಲೇ ಮುಂಬೈ ನಗರದಲ್ಲಿ ಈ ಮಾದರಿಯಲ್ಲಿ ಮುಂಬೈ ಮಹಾನಗರ ಅಭಿವೃದ್ಧಿ ಪ್ರಾಧಿಕಾರ (ಎಂಎಂಆರ್‌ಡಿಎ) ಇದೆ. ಬೆಂಗಳೂರು ನಗರಾಭಿವೃದ್ಧಿ ಸಚಿವ ಮತ್ತು ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಈ ಕುರಿತು ಅಧಿಕಾರಿಗಳ ಜೊತೆ ಈಗಾಗಲೇ ಮಾತುಕತೆ ನಡೆಸಿದ್ದಾರೆ.

ಡಿ. ಕೆ. ಶಿವಕುಮಾರ್ ಈಗಾಗಲೇ ಬೆಂಗಳೂರು ನಗರಕ್ಕೆ 40 ಸಾವಿರ ಕೋಟಿ ರೂ.ಗಳ ಎರಡು ಸುರಂಗ ಮಾರ್ಗ ಯೋಜನೆ, ಡಬಲ್ ಡೆಕ್ಕರ್ ರಸ್ತೆ ಯೋಜನೆಗಳು, 1700 ಕಿ. ಮೀ. ರಸ್ತೆ ವೈಟ್‌ ಟಾಪಿಂಗ್, ಎಲಿವೇಟೆಡ್ ಕಾರಿಡಾರ್‌ಗಳು ಸೇರಿ ವಿವಿಧ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ. ಈ ಎಲ್ಲಾ ಯೋಜನೆಗಳನ್ನು ಎಸ್‌ವಿಪಿಗೆ ವಹಿಸುವ ನಿರೀಕ್ಷೆ ಇದೆ.

ಬೆಂಗಳೂರು ನಗರದ ಸಂಚಾರ ದಟ್ಟಣೆ ನಿರ್ವಹಣೆ ಮಾಡಲು ರಸ್ತೆಗಳು ಪ್ರಮುಖ ಪಾತ್ರ ವಹಿಸಲಿವೆ. ನಗರದಲ್ಲಿ ಹಲವು ಯೋಜನೆಗಳು ವಿವಿಧ ಕಾರಣಕ್ಕೆ ವಿಳಂಬವಾಗುತ್ತಿವೆ. ಆದ್ದರಿಂದ ಒಂದು ಸಂಸ್ಥೆಯ ಮೂಲಕ ಎಲ್ಲಾ ಯೋಜನೆಗಳನ್ನು ನಿರ್ವಹಣೆ ಮಾಡಲು ಈ ಎಸ್‌ವಿಪಿ ರಚನೆಯ ಚಿಂತನೆಯನ್ನು ಸರ್ಕಾರ ನಡೆಸಿದೆ.

ಈ ಕುರಿತು ಡಿ. ಕೆ. ಶಿವಕುಮಾರ್ ಮಾತನಾಡಿದ್ದು, "ಬೆಂಗಳೂರು ನಗರದಲ್ಲಿ ಮುಂದಿನ 20-30 ವರ್ಷಗಳಲ್ಲಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಲು ನಾವು ಹಲವು ಯೋಜನೆಗಳನ್ನು ಹೊಂದಿದ್ದೇವೆ. ಬೃಹತ್ ಯೋಜನೆ ನಿರ್ವಹಣೆ ಮಾಡಲು ಹೊಸ ಎಸ್‌ಪಿವಿ ಸ್ಥಾಪನೆಯ ಪ್ರಸ್ತಾಪವಿದೆ. ಈ ಕುರಿತು ಚರ್ಚೆಗಳು ನಡೆಯುತ್ತಿವೆ" ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+