ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Bengaluru Crime: ಕೊರೊನಾ ಬಳಿಕ ಅಪರಾಧ ಪ್ರಕರಣ ಇಳಿಕೆ, ವಾಹನ ಕಳ್ಳತನ ಹೆಚ್ಚಳ, ಸಂಪೂರ್ಣ ವಿವರ ಇಲ್ಲಿದೆ

|
Google Oneindia Kannada News

ಬೆಂಗಳೂರು, ಜನವರಿ 05: ಕೊರೊನಾ ಸಾಂಕ್ರಾಮಿಕ ರೋಗದ ನಂತರ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊಂಚಮಟ್ಟಿಗೆ ಅಪರಾಧ ಪ್ರಕರಣಗಳು ಇಳಿಕೆ ಆಗಿವೆ. ಕಳೆದ 2022ರಲ್ಲಿ 172 ಕೊಲೆಗಳು ನಡೆದಿದ್ದು, ಡಕಾಯಿತಿ, ಕಳ್ಳತನ ಪ್ರಕರಣಗಳು ಸಹ ಹಿಂದಿನ ವರ್ಷಕ್ಕಿಂತ ಕಡಿಮೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೊರೊನಾ ಪೂರ್ವದ ವರ್ಷಗಳಿಗೆ ಬೆಂಗಳೂರಿನಲ್ಲಿನ ಅಪರಾಧ ಪ್ರಕರಣಗಳನ್ನು ಕೊರೊನಾ ಪಿಡುಗಿನ ನಂತರದ ವರ್ಷಕ್ಕೆ ಹೋಲಿಕೆ ಮಾಡಿದರೆ ಇಳಿಕೆ ಕಂಡಿರುವುದು ತುಸು ಸಮಾಧಾನಕರ ವಿಷಯ ಎನ್ನಬಹುದು. ಈ ಸಂಬಂಧ ಪೊಲೀಸರು ಬುಧವಾರ ಅಂಕಿ ಅಂಶಗಳ ವರದಿಯೊಂದನ್ನು ಬಿಡುಗಡೆ ಮಾಡಿದೆ.

ಸಮಯ ಪಾಲನೆಯ ಜಾಗತಿಕ ವಿಮಾನ ನಿಲ್ದಾಣಗಳ ಪಟ್ಟಿಯಲ್ಲಿ ಬೆಂಗಳೂರು ಏರ್‌ಫೋರ್ಟ್‌ಗೆ 2ನೇ ಸ್ಥಾನಸಮಯ ಪಾಲನೆಯ ಜಾಗತಿಕ ವಿಮಾನ ನಿಲ್ದಾಣಗಳ ಪಟ್ಟಿಯಲ್ಲಿ ಬೆಂಗಳೂರು ಏರ್‌ಫೋರ್ಟ್‌ಗೆ 2ನೇ ಸ್ಥಾನ

ಬೆಂಗಳೂರಲ್ಲಿ 2022ರ ಒಂದು ವರ್ಷದಲ್ಲಿ ಒಟ್ಟು 172 ಕೊಲೆಯ ಪ್ರಕರಣಗಳು ದಾಖಲಾಗಿವೆ. ಸಾಂಕ್ರಾಮಿಕ ವರ್ಷ 2021ರಲ್ಲಿ 154, 2020 ರಲ್ಲಿ 177 ಹಾಗೂ 2019 ರಲ್ಲಿ 204 ಹತ್ಯೆಗಳು ನಡೆದಿವೆ ಎಂದು ವರದಿಯಾಗಿದೆ. 2019 ರಲ್ಲಿ 39 ಕಂಡು ಬಂದಿದ್ದ ಡಕಾಯಿಟಿ ಪ್ರಕರಣಗಳು 2022 ರಲ್ಲಿ 23ಕ್ಕೆ ಇಳಿಯುವ ಮೂಲಕ ಶೇ.41ರಷ್ಟು ಕಡಿಮೆ ಆಗಿದೆ. ಸರಗಳ್ಳತನ ಘಟನೆಗಳು ಶೇ. 33ರಷ್ಟು ಅಂದರೆ 2019ರಲ್ಲಿ 225- 2022ರಲ್ಲಿ 151 ಕ್ಕೆ ಇಳಿಕೆ ಆಗಿದೆ. ಹಾಗೆಯೇ ಕಳ್ಳತನ ಪ್ರಕರಣಗಳು ಕ್ರಮವಾಗಿ 1,274 ರಿಂದ 880 ಇಳಿಕೆ ಆಗಿದ್ದು, ಶೇ. 31 ಕಡಿಮೆ ಆಗಿವೆ. ಅಪರಾಧ ಚಟುವಟಿಕೆಗಳ ಮೇಲೆ ನಿಗಾ ವಹಿಸಿದ್ದರಿಂದ ಕೊರೊನಾ ನಂತರ ಕಡಿಮೆ ಆಗಿವೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸಿ.ಎಚ್.ಪ್ರತಾಪ್ ರೆಡ್ಡಿ ಹೇಳಿದರು.

Decrease In Crime And Accident Rate In Bengaluru Compared To Pre Covid Years

ಪೊಲೀಸರ ನಿರಂತರ ಮೇಲ್ವಿಚಾರಣೆ

ದುಷ್ಕರ್ಮಿಗಳು ಬೆಲೆಬಾಳುವ ವಸ್ತುಗಳನ್ನು ದರೋಡೆ ಮಾಡಿದ ಸಂಬರ್ಧದಲ್ಲಿ ದೂರುವಾಣಿ ಕರೆ ಆಧಾರದಲ್ಲಿ ಸಕಾಲಕ್ಕೆ ಹೊಯ್ಸಳ ತಂಡದ ಸ್ಥಳಕ್ಕೆ ತಲುಪುತ್ತಾರೆ. ವಿವರವಾದ ವಿಚಾರಣೆಯನ್ನು ಮಾಡುತ್ತಾರೆ. ಸಂತ್ರಸ್ತರಿಂದ ದೂರು ಪಡೆದು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಈ ಪ್ರಕ್ರಿಯೆಯಿಂದ ಬದಲಾವಣೆ ಆರಂಭವಾಗುತ್ತದೆ.

ಅಪರಾಧ ಪ್ರಕರಣಗಳನ್ನು ತನಿಖೆ ನಿರಂತವಾಗಿರುತ್ತೆ. ಜೊತೆಗೆ ಅಪರಾಧದ ಮತ್ತೆ ಪುನರಾವರ್ತನೆ ಆಗುವುದನ್ನು ತಪ್ಪಿಸುತ್ತೇವೆ. ಜಾಮೀನಿನ ಮೇಲೆ ಹೊರಗಿರುವ ಆರೋಪಿಗಳ ಮೇಲೆ ಪೊಲೀಸರು ಕಣ್ಣಿಟ್ಟಿರುತ್ತಾರೆ. ಪೊಲೀಸರು ತಮ್ಮ ಮಿತಿಯಲ್ಲಿ ಸಮಾಜ ವಿರೋಧಿ ಕೃತ್ಯಗಳಲ್ಲಿ ಭಾಗಿಯಾಗುವವರು, ರೌಡಿಶೀಟರ್‌ಗಳನ್ನು ಆಗಾಗ ಮೇಲ್ವಿಚಾರಣೆ ಮಾಡುತ್ತಲೆ ಇರುತ್ತಾರೆ. ಈ ರೀತಿ ಮಾಡಿದಾಗ ಒಂದಷ್ಟು ದುಷ್ಕರ್ಮಿಗಳು ಅಪಾರಾಧ ಚಟುವಟಿಕೆಗಳಲ್ಲಿ ತೊಡಗುವುದನ್ನು ಕಡಿಮೆ ಮಾಡುತ್ತಾರೆ ಎಂದು ಅವರು ವಿವರಿಸಿದ್ದಾರೆ.

ಸೈಬರ್ ಅಪರಾಧಗಳಿಗೂ ಕಡಿವಾಣ ಬಿದ್ದಿದೆ

ಸೈಬರ್ ಅಪರಾಧಗಳು ಇಳಿಕೆಯಾಗಿವೆ. 2022ರಲ್ಲಿ 9,939 ಪ್ರಕರಣಗಳು ಕಂಡು ಬರಂದರೆ 2021 ರಲ್ಲಿ 6,423 ಮತ್ತು 2020 ರಲ್ಲಿ 8,892 ಪ್ರಕರಣ ಹಾಗೂ 2019 ರಲ್ಲಿ 10,553 ಸೈಬರ್ ಪ್ರಕರಣಗಳು ದಾಖಲಾಗಿವೆ. ತನಿಖೆಯ ನಂತರ ಪೊಲೀಸರು 13 ಕೋಟಿ ರೂ. ಹಿಂಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

Decrease In Crime And Accident Rate In Bengaluru Compared To Pre Covid Years

ನಗರದ ನಾಗರಿಕರು, ಮಹಿಳೆಯರು ಮಕ್ಕಳ ರಕ್ಷಣೆ ಒದಗಿಸಲು ಕ್ರಮ ಕೈಗೊಳ್ಳುವ ನಿಟ್ಟಿನಿಲ್ಲಿ ಪೊಲೀಸರು ಬೆಂಗಳೂರಿನ 13 ರೌಡಿಗಳನ್ನು ಗಡಿಪಾರು ಮಾಡಿದ್ದಾರೆ. ಕಳೆದ ವರ್ಷ ಗೂಂಡಾ ಕಾಯಿದೆಯಡಿ 23 ರೌಡಿ ಶೀಟರ್‌ಗಳ ಬಂಧನವಾಗಿದೆ. ಅಕ್ರಮ ಚಟುವಟಿಕೆಗಳಲ್ಲಿ ತೊಡಗಿದ ವಿದೇಶಿ ಪ್ರಜೆಗಳ ಪೈಕಿ 600 ಅವಧಿ ಮೀರಿ ನಗರದಲ್ಲಿ ಉಳಿದ 34 ಮಂದಿ ಇದ್ದು, ಅವರನ್ನು ಗಡಿಪಾರು ಮಾಡಲಾಗುವುದು. ಜನವರಿ 4ರ ಮಾಹಿತಿಯಂತೆ 50 ವಿದೇಶಿ ಪ್ರಜೆಗಳು ಬಂಧನಲ್ಲಿದ್ದಾರೆ.

ಪೊಲೀಸ್ ನಿಯಂತ್ರಣ ಕೊಠಡಿಗೆ 2022ರಲ್ಲಿ ಒಟ್ಟು 18.6 ಲಕ್ಷ ಕರೆಗಳು ಬಂದಿವೆ. ನಗರದಲ್ಲಿ 273 ಹೊಯ್ಸಳ ವಾಹನಗಳಿದ್ದು, ಅದರಲ್ಲಿ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗಾಗಿ 100 ಪಿಂಕ್ ಹೊಯ್ಸಳ ವಾಹನ ಮೀಸಲಿಡಲಾಗಿದೆ. ಅಪರಾಧ ನಡೆದು ಕರೆ ಬಂದ 7ರಿಂದ 12 ನಿಮಿಷಗಳಲ್ಲಿ ಹೊಯ್ಸಳ ತಂಡ ಸ್ಥಳದಲ್ಲಿರುತ್ತದೆ.

ಹೆಚ್ಚಾದ ವಾಹನ ಕಳ್ಳತನ

ಕೊರೊನಾ ಪಿಡುಗಿನ ಮುನ್ನದಿಂದ ಈವರೆಗೆ ವಾಹನಗಳ ಕಳ್ಳತನ ಏರಿಕೆ ಆಗುತ್ತಲೆ ಇವೆ. ಈ ಪೈಕಿ 2019 ರಲ್ಲಿ 4,772ವಾಹನ ಕಳ್ಳತನ ಪ್ರಕರಣ ದಾಖಲಾಗಿದ್ದರೆ, 2020ರಲ್ಲಿ 3,797 ಹಾಗೂ 2021ರಲ್ಲಿ 4,124 ಪ್ರಕರಣಗಳು ಕಂಡು ಬಂದಿವೆ. ಇನ್ನೂ ಕಳೆದ 2022 ರಲ್ಲಿ 5,066 ವಾಹನಗಳು ಕಳ್ಳತನವಾಗಿರುವ ಬಗ್ಗೆ ದೂರುಗಳು ಸಲ್ಲಿಕೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

English summary
Decrease in crime and accident rate in Bengaluru compare to pre covid years, says police data
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X