ನಿಮ್ಮ ಏರಿಯಾದಲ್ಲೂ ರಸ್ತೆ ಗುಂಡಿ ಇದ್ದರೆ ಚಿತ್ರ ತೆಗೆದು ಕಳಿಸಿ

ಬೆಂಗಳೂರು, ಜೂ. 19 : ಮಳೆಗಾಲ ಆರಂಭಕ್ಕೂ ಮುನ್ನವೇ ಬೆಂಗಳೂರು ನಗರದ ರಸ್ತೆಗಳ ಗುಂಡಿಗಳನ್ನು ದುರಸ್ತಿಪಡಿಸುವಂತೆ ಬಿಬಿಎಂಪಿ ಆಡಳಿತಾಧಿಕಾರಿ ಟಿ.ಎಂ.ವಿಜಯಭಾಸ್ಕರ್ ಸೂಚನೆ ನೀಡಿದ್ದಾರೆ. ಅಧಿಕಾರಿಗಳು ನಗರದ 422 ರಸ್ತೆಗಳ ಪರಿಶೀಲನೆ ನಡೆಸಿ 2620 ಗುಂಡಿಗಳನ್ನು ಪತ್ತೆ ಹಚ್ಚಿದ್ದಾರೆ. ಆದರೆ, ಇದರಲ್ಲಿ ಎಲ್ಲಾ ಬಡಾವಣೆಗಳನ್ನು ಪರಿಗಣಿಸಲ್ಲ ಎಂಬ ಆರೋಪ ಕೇಳಿಬರುತ್ತಿದೆ.

ಒನ್ ಇಂಡಿಯಾ ಕನ್ನಡ 'ಬೆಂಗಳೂರು ರಸ್ತೆಗಳಲ್ಲಿರುವ ಗುಂಡಿಗಳ ಲೆಕ್ಕ - ವರದಿ' ಎಂಬ ಶೀರ್ಷಿಕೆಯಡಿ ಗುರುವಾರ ಪ್ರಕಟಿಸಿದ ಸುದ್ದಿಗೆ ಹಲವಾರು ಓದುಗರು ಪ್ರತಿಕ್ರಿಯೆ ನೀಡುತ್ತಿದ್ದು, ನಮ್ಮ ಬಡಾವಣೆಗಳಲ್ಲಿನ ಗುಂಡಿಗಳನ್ನು ಏಕೆ ಹೆಸರಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. [ಸುಲ್ತಾನ್ ಪಾಳ್ಯ ರಸ್ತೆಯಲ್ಲಿ ಮೊಸಳೆ]

pothole

ಆದ್ದರಿಂದ ಒನ್ ಇಂಡಿಯಾ ಕನ್ನಡ ಓದುಗರಿಂದ ಪ್ರತಿಕ್ರಿಯೆಗಳನ್ನು ಆಹ್ವಾನಿಸಿದೆ. ನಿಮ್ಮ ಬಡಾವಣೆಗಳ ರಸ್ತೆಗಳಲ್ಲಿ ಗುಂಡಿಗಳಿದ್ದರೆ ಅದರ ಚಿತ್ರವನ್ನು ನೀವು ನಮಗೆ ಕಳುಹಿಸಬಹುದು. ನಿಮ್ಮ ಬಡಾವಣೆ ಹೆಸರು, ರಸ್ತೆಯ ಹೆಸರು, ಕಳುಹಿಸಿದವರ ಹೆಸರುಗಳನ್ನು ಗುಂಡಿಯ ಚಿತ್ರದೊಂದಿಗೆ ನಮಗೆ ಕಳಿಸಿ. [ಬೆಂಗಳೂರು ರಸ್ತೆಯ ಗುಂಡಿಗಳ ಲೆಕ್ಕ]

ಬೆಂಗಳೂರಿನ ರಸ್ತೆಯ ಗುಂಡಿಗಳನ್ನು ಪತ್ತೆ ಹಚ್ಚುತ್ತಿರುವ ಬಿಬಿಎಂಪಿ ಅಧಿಕಾರಿಗಳು, ರಸ್ತೆ ನಿರ್ವಹಣೆ ಮಾಡಿದ ಗುತ್ತಿಗೆದಾರರಿಗೆ ದಂಡ ವಿಧಿಸಲು ಮುಂದಾಗಿದೆ. ನಿಮ್ಮ ಏರಿಯಾದಲ್ಲಿ ಬಾಯ್ತಿರೆದ ಗುಂಡಿಗಳಿದ್ದರೆ ಫೋಟೋಗಳನ್ನು ಕಳಿಸಿ...

ಚಿತ್ರ ಕಳಿಸಲು ವಿಳಾಸ : [email protected]
#bengalurupotholes ಹ್ಯಾಂಡಲ್ ಹಾಕಿ ಟ್ವಿಟ್ಟರ್ ಮುಖಾಂತರವೂ ಕಳಿಸಿ : https://twitter.com/oneindiakannada (@OneindiaKannada)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+