B Khata: ‌ಬಿ ಖಾತಾ ಪಡೆಯುವುದಕ್ಕೆ ಗಡುವು, ಆಸ್ತಿದಾರರಿಗೆ ಸರ್ಕಾರದ ಸೂಚನೆ!

B Khata: ಕರ್ನಾಟಕ ಸರ್ಕಾರವು ಆಸ್ತಿದಾರರಿಗೆ ಸಂಬಂಧಿಸಿದಂತೆ ಮಹತ್ವದ ಎಚ್ಚರಿಕೆಯೊಂದನ್ನು ನೀಡಿದೆ. ರಾಜ್ಯ ಸರ್ಕಾರವು ಆಸ್ತಿಗಳಿಗೆ ಇ ಖಾತಾ ಕಡ್ಡಾಯ ಹಾಗೂ ಇ ಖಾತಾಗೆ ಸಂಬಂಧಿಸಿದಂತೆ ಕೆಲವೊಂದು ಸೂಚನೆಗಳನ್ನು ನೀಡಿದೆ. ಇದೀಗ ನಿಯಮಬಾಹಿರ ಆಸ್ತಿಗಳಿಗೆ ಸಂಬಂಧಿಸಿದಂತೆ ಮಹತ್ವದ ಸೂಚನೆಯೊಂದನ್ನು ನೀಡಿದೆ. ನಿಯಮಬಾಹಿರ ಆಸ್ತಿಗಳಿಗೆ ಸಂಬಂಧಿಸಿದಂತೆ ನಮೂನೆ 3/ಎ ಖಾತೆ (ಬಿ ಖಾತೆ)ಗೆ ಸಂಬಂಧಿಸಿದಂತೆ ಸೂಚನೆಯೊಂದನ್ನು ನೀಡಲಾಗಿದೆ. ಹೀಗಾಗಲೇ ರಾಜ್ಯದಲ್ಲಿ ಆಸ್ತಿ ತೆರಿಗೆಗೆ ಸಂಬಂಧಿಸಿದಂತೆ ಕೆಲವೊಂದು ಪ್ರಮುಖ ಆದೇಶಗಳನ್ನು ರಾಜ್ಯ ಸರ್ಕಾರವು ಮಾಡಿದೆ. ಇದೀಗ ಬಿ ಖಾತೆಗೆ ಸಂಬಂಧಿಸಿದ್ದ ಗಡುವು ಮುಕ್ತಾಯವಾಗುತ್ತಿದ್ದು. ಹೊಸ ಸೂಚನೆಯನ್ನು ನೀಡಲಾಗಿದೆ.

ರಾಜ್ಯ ಸರ್ಕಾರವು ಬಿ ಖಾತೆಗಳಿಗೆ ಈ ಹಿಂದೆ ಗುಡ್‌ನ್ಯೂಸ್‌ ನೀಡಿತ್ತು. ರಾಜ್ಯದಲ್ಲಿ ಅನಧಿಕೃತ ಪ್ರಾಪರ್ಟಿಯನ್ನು ಹೊಂದಿರುವವರು ಹಾಗೂ ಅನಧಿಕೃತ ರೆವಿನ್ಯೂ ಆಸ್ತಿಗಳಿಗೆ ಒಂದು ಬಾರಿ ಅವಕಾಶದಲ್ಲಿ ಬಿ ಖಾತಾಗಳಿಗೆ ಅವಕಾಶ ನೀಡಲಾಗಿತ್ತು. ಆದರೆ ಇದೀಗ ಬಿ ಖಾತಾಗೆ ನೀಡಲಾಗಿದ್ದ ಗಡುವು ಮುಕ್ತಾಯವಾಗುವುದಕ್ಕೆ ಬರುತ್ತಿದ್ದು. ಇದೀಗ ಹೊಸ ಸೂಚನೆ ನೀಡಲಾಗಿದೆ.

Deadline for Obtaining B Khata Government Notice to Property Owners

ಅನಧಿಕೃತ ಆಸ್ತಿಗಳಿಗೆ ಬಿ ಖಾತಾ ನೀಡುವುದರಿಂದ ರಾಜ್ಯ ಸರ್ಕಾರಕ್ಕೆ ಕೋಟ್ಯಾಂತರ ರೂಪಾಯಿ ಆದಾಯ ಹರಿದು ಬರಲಿದೆ ಎಂದು ನಿರೀಕ್ಷೆ ಮಾಡಲಾಗಿತ್ತು. ಕರ್ನಾಟಕದಲ್ಲಿ ಬಿ ಖಾತೆ ಕೊಡುವ ಪ್ರಕ್ರಿಯೆ ಅಂತ್ಯವಾಗುವ ಸಾಧ್ಯತೆ ಇದೆ. ಇದಕ್ಕೆ ಕಾರಣ ಈಗಾಗಲೇ ಬಿಡದಿಯಲ್ಲಿ ಈ ಸಂಬಂಧ ಸೂಚನೆ ನೀಡುತ್ತಿರುವುದು. ಮೇ 10ಕ್ಕೆ ಬಿ ಖಾತೆ ನೀಡುವುದು ಮುಕ್ತಾಯವಾಗಲಿದೆ. ಅನಧಿಕೃತ ಬಡಾವಣೆಗಳಲ್ಲಿ ಮನೆ ಅಥವಾ ನಿವೇಶನ ಹೊಂದಿರುವವರಿಗೆ ಬಿ ಖಾತಾ ನೀಡುವುದು ಹಾಗೂ ಇ ಖಾತಾ ಮಾಡಿಸಿಕೊಳ್ಳುವ ಸೌಲಭ್ಯವನ್ನು ನೀಡಲಾಗಿತ್ತು. ಈ ಅವಧಿಯು ಇದೇ ಮೇ 10ಕ್ಕೆ ಮುಕ್ತಾಯವಾಗಲಿದೆ ಎಂದು ಸೂಚನೆ ನೀಡಲಾಗಿದೆ.

ಹೀಗಾಗಿ, ಅನಧಿಕೃತ ಆಸ್ತಿಗಳು ಹಾಗೂ ರೆವಿನ್ಯೂ ಸೈಟ್‌ಗಳನ್ನು ಹೊಂದಿರುವವರು ಬಿ ಖಾತಾ ಮಾಡಿಸಿಕೊಳ್ಳುವುದಕ್ಕೆ ಇನ್ನು ಕೇವಲ 5 ದಿನಗಳು ಮಾತ್ರ ಬಾಕಿ ಉಳಿದಿವೆ. ಎಲ್ಲಾ ಆಸ್ತಿ ಮಾಲೀಕರು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು. ಬೇಗ ಬಿ ಖಾತಾ ಮಾಡಿಸಿಕೊಳ್ಳಬೇಕು ಎಂದು ಬಿಡದಿ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಬಿ.ಜಿ.ಲೋಹಿತ್ ಕುಮಾರ್‌ ಅವರು ಹೇಳಿದ್ದಾರೆ.

ಕರ್ನಾಟಕ ಸರ್ಕಾರದ ಆದೇಶದ ಅನ್ವಯ 1992ರ ನಂತರ ಭೂ ಪರಿವರ್ತನೆಯಾಗಿ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆದುಕೊಂಡಿರುವ ಆಸ್ತಿಗಳು ಹಾಗೂ ರಿಜಿಸ್ಟರ್‌ ಆಗಿರುವ ರೆವಿನ್ಯೂ ನಿವೇಶನಗಳು & ಸಕ್ಷಮ ಪ್ರಾಧಿಕಾರಗಳಿಂದ ಲೈಸೆನ್ಸ್‌ ಪಡೆಯದೆ ನಿರ್ಮಿಸಿಕೊಂಡಿರುವ ಆಸ್ತಿಗಳಿಗೆ ಇದು ಅನ್ವಯವಾಗಲಿದೆ. ಅಲ್ಲದೇ 2024 ರ ಸೆಪ್ಟೆಂಬರ್‌ 25ರ ಹಿಂದಿನ ನೋಂದಣಿಯಾಗಿರುವ ಆಸ್ತಿಗಳು ಬಿ ಖಾತೆ ಪಡೆಯಲು ಅವಕಾಶ ಇರಲಿದೆ ಎಂದು ಹೇಳಲಾಗಿದೆ.

ರಾಜ್ಯದಲ್ಲಿ ಈಗಾಗಲೇ ಸಾಕಷ್ಟು ಅರ್ಜಿಗಳ ಸ್ವೀಕೃತವಾಗಿವೆ. ತೆರಿಗೆ ಪಾವತಿಸಿ ನಮೂನೆ 3/ಎ ಖಾತೆಯನ್ನು ಪಡೆಯಬಹುದು ಎಂದು ಹೇಳಲಾಗಿದೆ. ಆದರೆ, ಇದು ರಾಜ್ಯದಾದ್ಯಂತ ಎಲ್ಲಾ ಆಸ್ತಿಗಳಿಗೂ ಅನ್ವಯವಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+