ಪಿಯುಸಿ : ಪೂರಕ ಪರೀಕ್ಷೆಗೆ ಅರ್ಜಿ ಸಲ್ಲಿಸುವ ಅವಧಿ ವಿಸ್ತರಣೆ
ಬೆಂಗಳೂರು, ಮೇ 27 : ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶದಲ್ಲಿ ಗೊಂದಲ ಉಂಟಾಗಿರುವ ಕಾರಣ ಪೂರಕ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಲು ಜೂನ್ 6 ರವರೆಗೆ ಅವಕಾಶ ನೀಡಲಾಗಿದೆ. ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಜೂನ್ 3 ಕೊನೆಯ ದಿನವಾಗಿದೆ.
ಉತ್ತರ ಪತ್ರಿಕೆಗಳ ನಕಲು ಪ್ರತಿ ಕೋರಿ 22,915 ಅರ್ಜಿಗಳು ಬಂದಿವೆ. 13,500 ನಕಲು ಪ್ರತಿಗಳನ್ನು ವಿದ್ಯಾರ್ಥಿಗಳಿಗೆ ತ್ವರಿತ ಅಂಚೆ ಮೂಲಕ ಕಳುಹಿಸಲಾಗಿದೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಮರು ಮೌಲ್ಯಮಾಪನ ಮತ್ತು ಅಂಕಗಳ ಮರು ಎಣಿಕೆಗೆ ಅರ್ಜಿ ಸಲ್ಲಿಸಲು ಜೂನ್ 3ರವರೆಗೆ ಅವಕಾಶ ಕಲ್ಪಿಸಲಾಗಿದೆ. [ಫಲಿತಾಂಶ ಗೊಂದಲವಿದ್ದರೆ ಅರ್ಜಿ ಸಲ್ಲಿಕೆಯೇ ಪರಿಹಾರ]

ಉತ್ತರ ಪತ್ರಿಕೆಗಳ ನಕಲು ಪ್ರತಿ ಯಾವ ವಿದ್ಯಾರ್ಥಿಗಳಿಗೆ ರವಾನೆಯಾಗಿದೆ ಎಂಬ ಮಾಹಿತಿಯನ್ನು ಇಲಾಖೆಯು www.pue.kar.nic.in ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಗೊಂದಲದ ಕಾರಣ ಫಲಿತಾಂಶ ತಡೆಹಿಡಿಯಲಾಗಿದ್ದ 144 ವಿದ್ಯಾರ್ಥಿಗಳ ಪೈಕಿ 33 ವಿದ್ಯಾರ್ಥಿಗಳ ಫಲಿತಾಂಶವನ್ನು ಪ್ರಕಟಿಸಲಾಗಿದೆ ಎಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.[ಪಿಯುಸಿ ಮೌಲ್ಯಮಾಪನದಲ್ಲಿ ನಿಜಕ್ಕೂ ಲೋಪವಾಗಿದೆಯೇ?]
ಶುಲ್ಕದ ವಿವರ
* ಫೋಟೋ ಕಾಪಿ ಒಂದು ಪೇಪರ್ ಗೆ - 504 ರೂ
* ಮರುಮೌಲ್ಯಮಾಪನ ಒಂದು ಪತ್ರಿಕೆಗೆ - 1,260 ರೂ.
* ಮರು ಪರಿಶೀಲನೆಗೆ ಒಂದು ಪತ್ರಿಕೆಗೆ - 336 ರೂ.












Click it and Unblock the Notifications