ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೊಸ ತಂತ್ರಜ್ಞಾನ ಅಳವಡಿಕೆಯಿಂದ ಶೇ.20ರಷ್ಟು ನೀರು ಸಂರಕ್ಷಿಸಿದ ಡಿಸಿಪಿ ಕಚೇರಿ

|
Google Oneindia Kannada News

ಬೆಂಗಳೂರು ಜೂ. 28: ನಿತ್ಯ ಬಳಕೆಯ ನೀರಿನ ನಲ್ಲಿಗೆ (ಟ್ಯಾಪ್) ವಿನೂತನ ಅತ್ಯಂತ ಸರಳ ತಂತ್ರಜ್ಞಾನ ಅಳವಡಿಕೆಯಿಂದ ಮಾಸಿಕ ಶೇ.20ರಷ್ಟು ನೀರಿನ ಸಂರಕ್ಷಣೆ ಆಗಿದೆ. ಸಾವಿರಾರು ರೂ. ನೀರಿನ ಶುಲ್ಕ ಸಹ ಉಳಿಸಬಹುದಾಗಿದೆ ಎಂಬುದನ್ನು ಬೆಂಗಳೂರಿನ ಉಪ ಪೊಲೀಸ್ ಆಯುಕ್ತರ ಕಚೇರಿ ಸಾಬೀತು ಮಾಡಿದೆ.

ಹೌದು, ನೀರಿನ ನಲ್ಲಿಗೆ ಸರಳ ತಂತ್ರಜ್ಞಾನ ಅಳವಡಿಕೆಯಿಂದ ಮಾಸಿಕವಾಗಿ ಬಳಕೆ ಆಗುತ್ತಿದ್ದ ಒಟ್ಟು ನೀರಿನಲ್ಲಿ ಶೇ.20ರಷ್ಟು ನೀರಿನ ಸಂರಕ್ಷಣೆ ಆಗಿದ್ದು, ಇದರಿಂದ ಮಾಸಿಕ ನೀರಿನ ಶುಲ್ಕ ಅಂದಾಜು 39,000 ರೂ. ಉಳಿಸಲು ಸಾಧ್ಯವಾಗಿದೆ ಎಂದು ಬೆಂಗಳೂರಿನ ಉಪ ಪೊಲೀಸ್ ಆಯುಕ್ತರಾದ ನಿಶಾ ಜೇಮ್ಸ ಕಚೇರಿಯ ಆಡಳಿತ ಸಿಬ್ಬಂದಿ ಮಾಹಿತಿ ನೀಡಿದೆ.

ಈ ಸಿಬ್ಬಂದಿ ಮಾಹಿತಿ ಪ್ರಕಾರ, ಉಪ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಎಚ್ ಎಸ್ ಆರ್ ಬಡಾವಣೆ ಮೂಲದ ಎವ್ರಿಥಿಂಗ್ ಇಕೋ ಎನ್ವಿರೋ ಸಲೂಷನ್ ಪ್ರವೈಟ್ ಲಿಮಿಟೆಡ್ ನಿಂದ ಸೇವೆ ಪಡೆಯಲಾಗಿದೆ. ಕಂಪನಿಯು ಕಚೇರಿ ಆವರಣದಲ್ಲಿದ್ದ ಸುಮಾರು 90 ನೀರಿನ ನಲ್ಲಿಗಳಿಗೆ ನೀರು ಉಳಿತಾಯವಾಗುವ ಏರೇಟರ್ ಸಾಧನ ಅಳವಡಿಸಿದೆ.

ಇದರಿಂದ ಪ್ರತಿ ಸಿಬ್ಬಂದಿ ಮೇ ತಿಂಗಳಲ್ಲೇ ತಲಾ 349 ಲೀಟರ್ ನೀರು ಉಳಿಸಿದ್ದಾರೆ. ಇಷ್ಟು ನೀರನ್ನು ಒಟ್ಟುಗೂಡಿಸಿದರೆ ಮಾಸಿಕ ಬಳಕೆಯ ಶೇ.20ರಷ್ಟು ನೀರು ಉಳಿಕೆಯಾದಂತಾಗಿದೆ. ಈ ಸರಳ ತಂತ್ರಜ್ಞಾನ ಅಳವಡಿಕೆಯಿಂದಾಗಿ ಅಂದಾಜು 39,000 ರೂ. ಉಳಿತಾಯವಾಗಿದೆ. ಇದು ಜೂನ್ ನಲ್ಲಿ ಬಂದ ಕಚೇರಿ ನೀರಿನ ಬಿಲ್ ನಿಂದ ತಿಳಿದು ಬಂದಿದೆ.

23 ಕಚೇರಿಗೂ ಅಳವಡಿಕೆಗೆ ಮುಂದಾದ ಇಲಾಖೆ

23 ಕಚೇರಿಗೂ ಅಳವಡಿಕೆಗೆ ಮುಂದಾದ ಇಲಾಖೆ

"ಈ ಒಂದು ಕಚೇರಿಯಲ್ಲಿ ನೀರಿನ ಸಂರಕ್ಷಣೆ ಉದ್ದೇಶ ಯಶಸ್ವಿಯಾಗಿದ್ದು, ಮುಂದಿನ ದಿನಗಳಲ್ಲಿ ನಗರದ ಎಲ್ಲ 23 ಕಚೇರಿಗಳ ನಲ್ಲಿಗಳಿಗೂ ಅಳವಡಿಸುವ ಚಿಂತನೆ ಇದೆ. ಈ ನಿಟ್ಟಿನಲ್ಲಿ ಇಲಾಖೆಗೆ ತಿಳಿಸಲಾಗುವುದು. ಅಲ್ಲದೇ ಕಚೇರಿಯಲ್ಲಿನ ಸಿಬ್ಬಂದಿ ಅವರ ಕುಟುಂಬದವರು, ಪೊಲೀಸ್ ಕ್ವಾಟ್ರರ್ಸ್, ಮನೆಗಳಲ್ಲಿ ಅಳವಡಿಸಿಕೊಳ್ಳುವಂತೆ ಜಾಗೃತಿ ಮೂಡಿಸಲಾಗುವುದು. ಭವಿಷ್ಯದ ದೃಷ್ಟಿಯಿಂದ ನೀರಿನ ಸಂಕ್ಷಣೆ ಹಾಗೂ ನೀರಿನ ಮಿತ ಬಳಕೆ ಅಗತ್ಯವಾಗಿದೆ," ಎಂದು ಡಿಸಿಪಿ ನಿಶಾ ಜೇಮ್ಸ್ ತಿಳಿಸಿದ್ದಾರೆ.

ಒಂದು ನಲ್ಲಿಗೆ 68ರು. ಖರ್ಚು ಮಾಡಿದರೆ ಸಾಕು

ಒಂದು ನಲ್ಲಿಗೆ 68ರು. ಖರ್ಚು ಮಾಡಿದರೆ ಸಾಕು

ಚಿಕ್ಕದೆನಿಸಿದರೆ ಪರಿಣಾಮಕಾರಿ ಎನಿಸುವ ಈ ಏರೇಟರ್ ಸಾಧನವನ್ನು ಅಳವಡಿಕೆಗೆ ಅತ್ಯಂತ ಕಡಿಮೆ ಹಣ ಸಾಕಾಗುತ್ತದೆ. ಒಂದು ನಲ್ಲಿಗೆ 68ರು.ಗೆ ಸಿಗುವ ಏರೇಟರ್ ಅಳವಡಿಸಿದರೆ ನೀರನ್ನು ಮಿತ ಬಳಕೆ ಸಾಧ್ಯವಾಗುತ್ತದೆ. ಆಯುಕ್ತರ ಕಚೇರಿಯಲ್ಲಿನ ಒಟ್ಟು 90ನಲ್ಲಿ (ಟ್ಯಾಪ್) ಗಳಿಗೆ ಒಟ್ಟು 6120 ರೂ. ವ್ಯಯಿಸಿ ಏರೇಟರ್ ಅಳವಡಿಕೆ ಮಾಡಲಾಗಿದೆ ಎಂದು ಸಿಬ್ಬಂದಿ ತಿಳಿಸಿದ್ದಾರೆ.

17.29ಲಕ್ಷ ಲೀ. ಬದಲಾಗಿ 13.86ಲಕ್ಷ ಲೀ.ನೀರು ಬಳಕೆ

17.29ಲಕ್ಷ ಲೀ. ಬದಲಾಗಿ 13.86ಲಕ್ಷ ಲೀ.ನೀರು ಬಳಕೆ

ಏರೇಟರ್ ಸಾಧನ ಅಳವಡಿಕೆ ಕುರಿತು ಕಚೇರಿ ಉಸ್ತುವಾರಿ ನಾಗರಾಜ್ ಪ್ರತಿಕ್ರಿಯಸಿ, "ಏರೇಟರ್ ಸಾಧನ ಅಳವಡಿಕೆಗೂ ಮುನ್ನ ಏಪ್ರಿಲ್ ನಲ್ಲಿ ಬಳಕೆಯಾದ 17.29ಲಕ್ಷ ಲೀಟರ್ ನೀರಿಗೆ ಮೇ ತಿಂಗಳಲ್ಲಿ ಬಂದ ಒಟ್ಟು ನೀರಿನ ಬಿಲ್ ಮೊತ್ತ 1,90,846 ರೂ.. ಅದೇ ಮೇ ತಿಂಗಳಲ್ಲಿ ಏರೇಟರ್ ಅಳವಡಿಸದ ಮೇಲೆ 13.86ಲಕ್ಷ ಲೀಟರ್ ನೀರು ಬಳಕೆ ಆಗಿದೆ. ಇದರ ಬಿಲ್ ಜೂನ್ ಒಟ್ಟು 1,49,671ರೂ. ಬಂದಿದೆ. ಸರಳ ಉಪಾಯದಿಂದ ಅಮೂಲ್ಯವಾದ ನೀರು ಹಾಗೂ ಹಣ ಸಹ ಉಳಿತಾಯವಾಗುತ್ತದೆ," ಎಂದು ಅವರು ತಿಳಿಸಿದರು.

ನೀರಿನ ಹರಿವು ಕಡಿಮೆಗೊಳಿಸುವ ಏರೇಟರ್:

ನೀರಿನ ಹರಿವು ಕಡಿಮೆಗೊಳಿಸುವ ಏರೇಟರ್:

ಎಚ್ ಎಸ್ ಆರ್ ಬಡಾವಣೆ ಮೂಲದ ಎವ್ರಿಥಿಂಗ್ ಇಕೋ ಎನ್ವಿರೋ ಸಲೂಷನ್ ಪ್ರವೈಟ್ ಲಿಮಿಟೆಡ್‌ನ ನಿರ್ದೇಶಕ ಕರುನ್ ಕನವಿ ಮಾತನಾಡಿ, "ಸಾಮಾನ್ಯವಾಗಿ ಒಂದು ನಿಮಿಷಕ್ಕೆ ಒಂದು ನಲ್ಲಿಯಿಂದ ಸುಮಾರು 10ಲೀಟರ್ ಸುರಿಸಬಹುದು. ನೀರಿನ ಹರಿದು ಹೆಚ್ಚಿದ್ದರೆ ನಿಮಿಷಕ್ಕೆ 13ಲೀಟರ್ ವರೆಗೆ ನೀರು ಹಿಡಿಯಬಹುದು. ಆದರೆ ಈ ಏರಿಯಟರ್ ಬಳಸಿದರೆ ಒಂದು ನಲ್ಲಿಯಿಂದ ನಿಮಿಷಕ್ಕೆ ಮೂರು ಲೀಟರ್ ನೀರು ಸಂಗ್ರಹಿಸಬಹುದು. ನಲ್ಲಿಯಿಂದ ನೀರು ಜೋರಾಗಿ ಬಿದ್ದು ವ್ಯರ್ಥವಾಗುವುದನ್ನು ಇದು ತಪ್ಪಿಸುತ್ತದೆ," ಎಂದು ತಿಳಿಸಿದರು.

Recommended Video

Dinesh Karthik ಜೀವನದ ರಹಸ್ಯ:DK ಬದುಕಿಗೆ ಈತ ಎಂಟ್ರಿ ಕೊಟ್ಟಿಲ್ಲ ಅಂದಿದ್ರೆ DK ಕಥೆ??? | *Cricket | OneIndia

English summary
The Deputy commissioner office is saving 20% Water of the total Monthly Water by Installing a simple Aerator Device is premises.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X