ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಾಂತಿ ಕಾಪಾಡಲು ಅಂಬಿ ಅಭಿಮಾನಿಗಳಲ್ಲಿ ಡಿಸಿಎಂ ಮನವಿ

|
Google Oneindia Kannada News

ಬೆಂಗಳೂರು, ನವೆಂಬರ್ 25: ಕಂಠೀರವ ಸ್ಟೇಡಿಯಂಗೆ ತೆರಳಿದ ಡಾ.ಜಿ. ಪರಮೇಶ್ವರ ಅವರು ಅಂಬರೀಶ್‌ ಅವರ ಪಾರ್ಥಿವ ಶರೀರದ ಅಂತಿಮ‌ ದರ್ಶನ ಪಡೆದು ಕಂಬನಿ ಮಿಡಿದರು.

ಮಾಧ್ಯಮದೊಂದಿಗೆ ಮಾತನಾಡಿ, ಕನ್ನಡ ಚಿತ್ರ ರಂಗ ಹಾಗೂ ರಾಜಕೀಯದಲ್ಲಿ ತನ್ನದೇ ವಿಶಿಷ್ಟ ಛಾಪು ಮೂಡಿಸಿದ ರೆಬಲ್‌ ಸ್ಟಾರ್‌ ಅಂಬರೀಶ್‌ ಅವರು ಇಂದು ನಮ್ಮನ್ನು ಅಗಲಿರುವುದು ಅತ್ಯಂತ ದುಃಖ ತರಿಸಿದೆ.

ರೆಬಲ್ ಸ್ಟಾರ್ ನಿರ್ಗಮನಕ್ಕೆ ಕಣ್ಣೀರಾದ ಕಲಾವಿದರು, ರಾಜಕಾರಣಿಗಳುರೆಬಲ್ ಸ್ಟಾರ್ ನಿರ್ಗಮನಕ್ಕೆ ಕಣ್ಣೀರಾದ ಕಲಾವಿದರು, ರಾಜಕಾರಣಿಗಳು

ಹಿಂದೊಮ್ಮೆ ಆರೋಗ್ಯ ಸಮಸ್ಯೆಯಿಂದ ಸಿಂಗಾಪುರದಲ್ಲಿ ಚಿಕಿತ್ಸೆ ಪಡೆದು ಆರೋಗ್ಯವಂತರಾಗಿ ಆಗಮಿಸಿದ್ದರು.‌ ರಾಜಕೀಯದಲ್ಲಿ ಎರಡು ಬಾರಿ ಕೇಂದ್ರ ಹಾಗೂ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಅವರನ್ನು‌ ರಾಜಕೀಯದಲ್ಲಿ ಇನ್ನೂ ಉನ್ನತ ಸ್ಥಾನದಲ್ಲಿ ನೋಡುವ ಹಂಬಲವಿತ್ತು ಎಂದರು.

DCM appeals people to maintain peace and harmony

ನಾನು ಕೆಪಿಸಿಸಿ ಅಧ್ಯಕ್ಷನಾಗಿದ್ದ ವೇಳೆ ಅವರು ಉಪಾಧ್ಯಕ್ಷರಾಗಿ ಸಾಕಷ್ಟು ಸೇವೆ ಸಲ್ಲಿಸಿದ್ದಾರೆ. ಅವರ ಅಗಲಿಕೆ ನೋವನ್ನು ಸಹಸ್ರಾರು ಅಭಿಮಾನಿಗಳು ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ.

ಮಾಜಿ ಸಚಿವ ಎಂ.ಎಚ್.ಅಂಬರೀಶ್ ರಾಜಕೀಯ ಜೀವನದ ನೋಟ ಮಾಜಿ ಸಚಿವ ಎಂ.ಎಚ್.ಅಂಬರೀಶ್ ರಾಜಕೀಯ ಜೀವನದ ನೋಟ

ಅವರನ್ನು ಅಭಿಮಾನಿಗಳು ನಾವೆಲ್ಲರೂ ಶಾಂತಿಪೂರತವಕವಾಗಿ ಕಳುಹಿಸಿಕೊಡೋಣ. ಯಾರೂ ಸಹ ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಉಂಟು ಮಾಡದೇ ಅತ್ಯಂತ ವಿನಿಯದಿಂದ ಅವರಿಗೆ ಶ್ರದ್ಧಾಂಜಲಿ ಸಲ್ಲಿಸೋಣ ಎಂದು ಇದೇ ವೇಳೆ ಅಭಿಮಾನಿಗಳಲ್ಲಿ ವಿನಂತಿ ಮಾಡಿಕೊಂಡರು.

English summary
Deputy chief minister Dr.G. Parameshwar has appealed people of the state to maintain peace and harmony specially who visiting Kanthirava stadium to paid last respect to rebel star Ambareesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X