Tour Package: ದಸರಾ ರಜೆಯಲ್ಲಿ ಮಕ್ಕಳೊಂದಿಗೆ ಒನ್ ಡೇ ಟ್ರಿಪ್; KSTDC ಬನ್ನೇರುಘಟ್ಟ ಪ್ಯಾಕೇಜ್, ಡಿಟೇಲ್ಸ್ ಇಲ್ಲಿದೆ

ಬೆಂಗಳೂರು: ರಜಾದಿನಗಳು ಬಂತೆಂದರೆ ಸಾಕು ಮಕ್ಕಳೊಂದಿಗೆ ಅಜ್ಜಿ ಮನೆಗೆ, ಇಷ್ಟದ ಊರುಗಳು, ದೇವಸ್ಥಾನಗಳಿಗೆ ಇಲ್ಲವೇ ಬೀಚ್ ಸೇರಿದಂತೆ ಅನೇಕ ತಾಣಗಳಿಗೆ ತೆರಳಲು ಮುಂದಾಗುತ್ತಾರೆ. ಕೆಲವರು ಮಕ್ಕಳಿಗೆ ಇಷ್ಟವಾಗುವ ತಮ್ಮ ಹತ್ತಿರದ ಸ್ಥಳಗಳನ್ನೇ ಮರೆತಿರುತ್ತಾರೆ. ಅಂತವರಿಗಾಗಿಯೇ ಇರುವ 'ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಇಲಾಖೆ'ಯ ( KSTDC) ಏಕ ದಿನ ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್ ಪ್ಯಾಕೇಜಿನ ಸದುಪಯೋಗ ಪಡೆದುಕೊಳ್ಳಬಹುದು.

ಹೌದು, ಒಂದು ದಿನದಲ್ಲಿ ನೀವು ಈ ದಸರಾ ರಜೆಯಲ್ಲಿ (Dasara Holidays 2026) ನಿಮ್ಮ ಮಕ್ಕಳೊಂದಿಗೆ ಬನ್ನೇರುಘಟ್ಟ ಜೈವಿಕ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಬಹುದು. ದೈನಂದಿನ ಜಂಜಡಗಳು, ಟ್ರಾಫಿಕ್ ಗದ್ದಲ ಬಿಟ್ಟು ಪ್ರಾಣಿ, ಪಕ್ಷಗಳನ್ನು ಕಣ್ತುಂಬಿಕೊಂಡು, ಅರಣ್ಯದಲ್ಲಿ ವಿಹರಿಸಿ ಬರಬಹುದು. ಪ್ಯಾಕೇಜ್‌ನ ಸಂಪೂರ್ಣ ಡಿಟೇಲ್ಸ್ ಇಲ್ಲಿದೆ.

Tour Package

ಯಶವಂತಪುರ-ಬನ್ನೇರುಘಟ್ಟ KSTDC ಬಸ್ ಪ್ರಯಾಣ

'ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಇಲಾಖೆ'ಯು ಯಶವಂತಪುರ ಬಿಎಂಟಿಸಿ ಬಸ್ ನಿಲ್ದಾಣದಿಂದ ಬನ್ನೇರುಘಟ್ಟಕ್ಕೆ ಕರೆದೊಯ್ಯಲಿದೆ. ನೀವು ಒಂದೇ ದಿನದಲ್ಲಿ ಉದ್ಯಾನ, ಪರ್ಲ್ ವ್ಯಾಲಿ ಜಲಪಾತ ಜಲಪಾತ ಸೇರಿ ಪ್ರಮುಖ ಸ್ಥಳ ವೀಕ್ಷಿಸಬಹುದಾಗಿದೆ. ವಿಶೇವೆಂದರೆ ಪ್ಯಾಕೇಜ್‌ನಲ್ಲಿಯೇ ತಿಂಡಿ, ಊಟ ಮತ್ತು ಉದ್ಯಾನ ಸೇರಿದಂತೆ ಎಲ್ಲವುಗಳ ಪ್ರವೇಶ ಶುಲ್ಕವು ಸೇರಿರುತ್ತದೆ.

ಹೊರಡುವ ಸಮಯ

ಯಶವಂತಪುರ ಬಿಎಂಟಿಸಿ ಬಸ್‌ ನಿಲ್ದಾಣದಿಂದ ಬೆಳಗ್ಗೆ 7.15 ಗಂಟೆಗೆ ಕೆಎಸ್ ಟಿಡಿಸಿ ಬಸ್ ಹೊರಡುತ್ತದೆ. ಈ ಪ್ಯಾಕೇಜ್ ಪ್ರತಿದಿನವು ಲಭ್ಯವಿದೆ. ಮುಂಗಡ ಟಿಕೆಟ್ ಬುಕಿಂಗ್ ಮಾಡಿಕೊಳ್ಳಬೇಕಿರುತ್ತದೆ.

ಬೆಳಗಿನ ತಿಂಡಿ, ಉದ್ಯಾನ ವೀಕ್ಷಣಾ ಸಮಯ

* ಯಶವಂತಪುರದಿಂದ ಹೊರಟು ಉದ್ಯಾನ ತಲುಪಿದ ಬಳಿಕ ಬೆಳಗ್ಗೆ 08:45 - 09:30 ಬನ್ನೇರುಘಟ್ಟದ ​​ಮಯೂರ ವನಶ್ರೀಯಲ್ಲಿ ಉಪಹಾರ.

* ಬೆಳಗ್ಗೆ 09:30 - ಮಧ್ಯಾಹ್ನ 01:30 ರವರೆಗೆ ಸಫಾರಿ, ಮೃಗಾಲಯ ಮತ್ತು ಚಿಟ್ಟೆ ಉದ್ಯಾನವನ ವೀಕ್ಷಣೆಗೆ ಅವಕಾಶ

* ಮಧ್ಯಾಹ್ನ 01:30-02:15 ಬನ್ನೇರುಘಟ್ಟದ ​​ಮಯೂರ ವನಶ್ರೀಯಲ್ಲಿ ಮಧ್ಯಾಹ್ನದ ಊಟದ ವ್ಯವಸ್ಥೆ

* ಮಧ್ಯಾಹ್ನ 03:30- ಸಂಜೆ 06:30 ಜಲಪಾತ ವೀಕ್ಷಣೆ, ದೋಣಿ ವಿಹಾರ ಮತ್ತು ಸೂರ್ಯಾಸ್ತ ವೀಕ್ಷಣೆ. ಇದೇ ವೇಳೆ ಸಂಜೆ ಚಹಾ ಮತ್ತು ಲಘು ಉಪಹಾರ ವ್ಯವಸ್ಥೆ ಇರುತ್ತದೆ.

* ಸಂಜೆ 06:30 - ರಾತ್ರಿ 09:00 ಯಶವಂತಪುರದ KSTDC ಬುಕಿಂಗ್ ಕೌಂಟರ್ ಬಳಿ ತಂದು ನಿಮ್ಮನ್ನು ವಾಪಾಸ್ ಬಿಡಲಾಗುತ್ತದೆ.

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ಕುರಿತು..

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ಬೆಂಗಳೂರು ಕೇಂದ್ರಭಾಗದಿಂದ 22 ಕಿಮೀ ದೂರದಲ್ಲಿದೆ. ಇಲ್ಲಿಗೆ ಬಂದವರನ್ನು ಸ್ವಾಗತಿಸಿ ಸಿಟಿ ಲೈಫ್ ಅನ್ನು ಮರೆಸಲಿದೆ. ದಟ್ಟಾರಣ್ಯ ಪ್ರದೇಶದಲ್ಲಿ ಕೊಂಚ ದೂರದಲ್ಲಿ ಹುಲಿ, ಸಿಂಹ, ಕರಡಿ ಹಾಗೂ ಆನೆಗಳು ಓಡಾಡುತ್ತಿರುತ್ತವೆ. ಸಹಜವಾದ ಅವುಗಳ ಚಲನವಲ ವೀಕ್ಷಿಸುವುದೇ ಅತ್ಯಂತ ಸುಂದರ ಅನುಭವವಾಗಿದೆ.

ಇಲ್ಲಿ ಏಷ್ಯಾಟಿಕ್ ಸಿಂಹ, ಬೆಂಗಾಲ್ ಹುಲಿಗಳು, ಜಿಂಕೆಗಳು, ವಿವಿಧ ವರ್ಗದ ಪ್ರಾಣಿ ಪಕ್ಷಗಳು ವಾಹನದ ತೀರಾ ಹತ್ತಿರದಲ್ಲೇ ಕಾಣಸಿಗುತ್ತವೆ. ಸರ್ಕಸ್ ನಿಂದ ರಕ್ಷಿಸಿದ ಕರಡಿ, ಕಾಡು ಕರಡಿಗಳು, ದೊಡ್ಡ ಕಾಡುಮೃಗಗಳಿಗೆ ಪುನರ್ವಸತಿ ಕಲ್ಪಿಸುವಲ್ಲಿ ಬನ್ನೇರುಘಟ್ಟ ಬಹುಮುಖ್ಯ ಪಾತ್ರ ವಹಿಸಿದೆ.

ಬೆಂಗಳೂರಿನಂತಹ ಟ್ರಾಫಿಕ್, ಬ್ಯೂಸಿ ಪ್ರದೇಶದ ಹತ್ತಿರುವೇ ಇರುವುದು ಅದೃಷ್ಟ ಎನ್ನಬಹುದು. ಕುಟುಂಬದೊಂದಿಗೆ ದಿನವನ್ನು ಉತ್ಸಾಹ, ಉಲ್ಲಾಸ ಭರಿತವಾಗಿ ಕಳೆಯಬಹುದು. ವೈಲ್ಡ್‌ಲೈಫ್ ಫೋಟೋಗ್ರಫಿಗೆ ಅಥವಾ ಪ್ರಕೃತಿಯ ಮಡಿಲಲ್ಲಿ ರಾತ್ರಿ ತಂಗಲು ಅವಕಾಶ ಇದೆ.

ಒಟ್ಟು 260 ಚದರ ಕಿಲೋ ಮೀಟರ್ ವ್ಯಾಪ್ತಿಯಲ್ಲಿ ವಿಸ್ತರಿಸಿರುವ ಈ ಉದ್ಯಾನವು 1974ರಲ್ಲಿ ರಾಷ್ಟ್ರೀಯ ಉದ್ಯಾನವನವಾಗಿ ಆರಂಭಗೊಂಡು, 2002ರಲ್ಲಿ ಅಧಿಕೃತವಾಗಿ ಜೈವಿಕ ಉದ್ಯಾನವನವಾಗಿ ರೂಪುಗೊಂಡಿತು ಎಂಬುದು ಇತಿಹಾಸ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+