ಪ್ರವಾಸಿಗರಿದ್ದಲ್ಲಿಗೇ ಬರಲಿದೆ ಊಟ: ಶೀಘ್ರದಲ್ಲೇ KSTDCಯಿಂದ ಹೊಸ ಮಯೂರ ರುಚಿ ಆನ್ ವ್ಹೀಲ್ಸ್ ಫುಡ್ ವ್ಯಾನ್ ಸೇವೆ

ಬೆಂಗಳೂರು: ಕರ್ನಾಟಕದ ನೈಸರ್ಗಿಕ ಸೌಂದರ್ಯ ಹಾಗೂ ಐತಿಹಾಸಿಕ ಸ್ಮಾರಕಗಳನ್ನ ಕಣ್ತುಂಬಿಕೊಳ್ಳಲು ಬರುವ ಲಕ್ಷಾಂತರ ಪ್ರವಾಸಿಗರಿಗೆ ಈಗ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ. ರಾಜ್ಯದ ಪ್ರಮುಖ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಗುಣಮಟ್ಟದ, ಶುಚಿಯಾದ ಹಾಗೂ ರುಚಿಕರವಾದ ಆಹಾರವನ್ನ ಅವರು ಇರುವ ಸ್ಥಳದಲ್ಲೇ ಒದಗಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು (KSTDC) ವಿನೂತನ ಯೋಜನೆಯೊಂದನ್ನ ರೂಪಿಸಿದೆ.

ರಾಜ್ಯದ ಪ್ರವಾಸೋದ್ಯಮ ಹಾಗೂ ಇಂಧನ ಸಚಿವ ಕೆ. ಜೆ. ಜಾರ್ಜ್ ಅವರು 'ಮಯೂರ ರುಚಿ ಆನ್ ವ್ಹೀಲ್ಸ್' ಎಂಬ ಹೊಸ ಮೊಬೈಲ್ ಫುಡ್ ವ್ಯಾನ್ ಸೇವೆಯನ್ನ ಘೋಷಿಸಿದ್ದಾರೆ. ಈ ಮಹತ್ವಾಕಾಂಕ್ಷಿ ಯೋಜನೆಯ ಮೂಲಕ ಪ್ರವಾಸಿಗರಿಗೆ ತ್ವರಿತ ಹಾಗೂ ಉತ್ತಮ ಆತಿಥ್ಯ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ.

KSTDC to Launch Mayura Ruchi on Wheels Mobile Food Vans at Tourist Spots in Karnataka

ಮಯೂರ ಹೋಟೆಲ್ ರುಚಿ ಈಗ ಪ್ರವಾಸಿಗರಿದ್ದಲ್ಲಿಗೇ

ಕೆಎಸ್‌ಟಿಡಿಸಿ ಪ್ರಸ್ತುತ ಕರ್ನಾಟಕದಾದ್ಯಂತ ಒಟ್ಟು 24 ಮಯೂರ ಬ್ರಾಂಡ್‌ನ ಹೋಟೆಲ್‌ಗಳನ್ನ ಯಶಸ್ವಿಯಾಗಿ ನಡೆಸುತ್ತಿದೆ. ಆದರೆ ಈ ಹೋಟೆಲ್‌ಗಳು ಪ್ರಮುಖ ಪ್ರವಾಸಿ ವಲಯಗಳಿಂದ ಕೊಂಚ ದೂರದಲ್ಲಿರುವ ಕಾರಣ, ಅನೇಕ ಪ್ರವಾಸಿಗರಿಗೆ ಸುಲಭವಾಗಿ ಗುಣಮಟ್ಟದ ಆಹಾರ ಸಿಗುತ್ತಿರಲಿಲ್ಲ. ಹಾಗಾಗಿ ಈ ಅಂತರವನ್ನ ಕಡಿಮೆ ಮಾಡಲು ಮತ್ತು ಮಯೂರ ಹೋಟೆಲ್‌ನ ಸ್ವಾದಿಷ್ಟ ಖಾದ್ಯಗಳನ್ನ ಪ್ರವಾಸಿಗರು ಇರುವಲ್ಲಿಗೇ ಕೊಂಡೊಯ್ಯಲು ಈ ಮೊಬೈಲ್ ಫುಡ್ ವ್ಯಾನ್ ಗಳು ಸಹಾಯ ಮಾಡಲಿವೆ.

ಮೊದಲ ಹಂತದ ಯೋಜನೆಯಡಿ, ವಿಶ್ವವಿಖ್ಯಾತ ಹಂಪಿ, ಮಂಜಿನ ನಗರಿ ಮಡಿಕೇರಿ, ಜೋಗ್ ಫಾಲ್ಸ್, ಸಾಂಸ್ಕೃತಿಕ ನಗರಿ ಮೈಸೂರು, ನಂದಿಬೆಟ್ಟ ಹಾಗೂ ಬೆಂಗಳೂರಿನ ಪ್ರಮುಖ ಪ್ರವಾಸಿ ತಾಣಗಳಲ್ಲಿ ಈ ಫುಡ್ ವಾಹನಗಳನ್ನ ನಿಯೋಜಿಸಲು ನಿರ್ಧರಿಸಲಾಗಿದೆ. ಇದರಿಂದ ಪ್ರವಾಸಿಗರು ಊಟಕ್ಕಾಗಿ ಪರದಾಡುವುದು ತಪ್ಪಲಿದೆ.

ಸ್ಥಳೀಯ ಖಾದ್ಯಗಳಿಗೆ ಆದ್ಯತೆ ಮತ್ತು ಉದ್ಯೋಗ ಸೃಷ್ಟಿ

ಉತ್ತಮ ಪ್ರವಾಸದ ಅನುಭವ ಎಂದರೆ ಅದರಲ್ಲಿ ಉತ್ತಮ ಆಹಾರದ ಅನುಭವವೂ ಸೇರಿರಬೇಕು ಎಂಬುದು ಈ ವಿನೂತನ ಉಪಕ್ರಮದ ಮುಖ್ಯ ಆಶಯವಾಗಿದೆ. 'ಮಯೂರ ರುಚಿ ಆನ್ ವ್ಹೀಲ್ಸ್' ಮೂಲಕ ಕರ್ನಾಟಕದ ವೈವಿಧ್ಯಮಯ ಹಾಗೂ ಸ್ಥಳೀಯ ಆಹಾರ ಸಂಸ್ಕೃತಿಯನ್ನು ದೇಶ-ವಿದೇಶದ ಪ್ರವಾಸಿಗರಿಗೆ ಪರಿಚಯಿಸಲಾಗುತ್ತದೆ.

ಬೆಳಗಿನ ಬಿಸಿಬಿಸಿ ಉಪಹಾರ, ಸಂಜೆಯ ತಿಂಡಿಗಳು, ಮಧ್ಯಾಹ್ನ ಹಾಗೂ ರಾತ್ರಿಯ ಊಟದ ಜೊತೆಗೆ ರಾಜ್ಯದ ವಿವಿಧ ಭಾಗಗಳ ಪ್ರಾದೇಶಿಕ ವಿಶೇಷ ಖಾದ್ಯಗಳನ್ನು (ಉದಾಹರಣೆಗೆ ಮಡಿಕೇರಿಯ ವಿಶೇಷಗಳು, ಉತ್ತರ ಕರ್ನಾಟಕದ ಊಟ ಇತ್ಯಾದಿ) ಈ ಮೊಬೈಲ್ ವಾಹನಗಳಲ್ಲಿ ಬಡಿಸಲಾಗುತ್ತದೆ.

ಇದು ಕೇವಲ ಪ್ರವಾಸಿಗರಿಗೆ ರುಚಿಯಾದ ಊಟ ನೀಡುವುದಲ್ಲದೆ, ಸ್ಥಳೀಯ ಖಾದ್ಯಗಳಿಗೆ ಒತ್ತು ನೀಡುವುದರಿಂದ ಆಯಾ ಭಾಗದ ಜನರಿಗೆ ಉದ್ಯೋಗ ಸೃಷ್ಟಿಗೂ ನೆರವಾಗಲಿದೆ. ಜೊತೆಗೆ ಕೆಎಸ್‌ಟಿಡಿಸಿಗೆ ಹೆಚ್ಚುವರಿ ಆದಾಯವನ್ನ ತಂದುಕೊಡಲಿದೆ ಎಂದು ಸಚಿವ ಕೆ. ಜೆ. ಜಾರ್ಜ್ ವಿವರಿಸಿದ್ದಾರೆ.

ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿಯಲ್ಲಿ ಹೊಸ ಹೆಜ್ಜೆ

ಈ ಯೋಜನೆ ಕುರಿತು ಹೆಚ್ಚಿನ ಮಾಹಿತಿ ನೀಡಿರುವ ಕೆಎಸ್‌ಟಿಡಿಸಿ ಅಧ್ಯಕ್ಷ ಎಂ. ಶ್ರೀನಿವಾಸ್, ನಿಗಮವು ಇಂತಹ ಮೊಬೈಲ್ ಆಹಾರ ಸೇವೆಯನ್ನ ಆರಂಭಿಸುತ್ತಿರುವುದು ಇದೇ ಮೊದಲು. ಪ್ರವಾಸಿಗರ ಸಂಖ್ಯೆ ಹೆಚ್ಚಿರುವ ಸ್ಥಳಗಳಲ್ಲಿ ಮಯೂರ ಹೋಟೆಲ್‌ನ ಗುಣಮಟ್ಟದ ಆಹಾರ ಸುಲಭವಾಗಿ ಸಿಗುವಂತೆ ಮಾಡುವುದು ನಮ್ಮ ಗುರಿ.

ಸ್ಥಳೀಯ ಖಾದ್ಯಗಳಿಗೆ ಹೆಚ್ಚು ಆದ್ಯತೆ ನೀಡುವುದರಿಂದ, ಸ್ಥಳೀಯ ಸಮುದಾಯಗಳಿಗೆ ವ್ಯಾಪಾರ ಮತ್ತು ಉದ್ಯೋಗ ಅವಕಾಶಗಳು ತೆರೆದುಕೊಳ್ಳಲಿವೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಡಾ. ರಾಮ್ ಪ್ರಸಾತ್ ಮನೋಹರ್ ಅವರ ಪ್ರಕಾರ, ಆಹಾರವು ಪ್ರವಾಸದ ಒಂದು ಅವಿಭಾಜ್ಯ ಅಂಗವಾಗಿದೆ. 'ಮಯೂರ ರುಚಿ ಆನ್ ವ್ಹೀಲ್ಸ್' ಮೂಲಕ ನಿಗಮದ ಆತಿಥ್ಯ ಸೇವೆಯನ್ನ ಹೋಟೆಲ್‌ಗಳ ಗೋಡೆಗಳಿಂದ ಆಚೆಗೆ, ನೇರವಾಗಿ ಜನರಿಗೆ ತಲುಪಿಸಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+