ದರ್ಶನ್ ಕೇಸ್‌ಗೆ ಐ-ವಿಟ್ನೇಸ್ ಟ್ವಿಸ್ಟ್: ಜೈಲಲ್ಲೇ ಸಿನಿಮಾಗೆ ಅವಕಾಶಕ್ಕೆ ಕೋರಿ ಡಿಜಿಪಿ ಭೇಟಿಗೆ ಮುಂದಾದ ಫ್ಯಾನ್

ಬೆಂಗಳೂರು: ರೇಣುಕಾಸ್ವಾಮಿ ಪ್ರಕರಣದಲ್ಲಿ ಜೈಲಲ್ಲಿರುವ ನಟ ದರ್ಶನ್ ಅವರಿಗೆ ಮೇಲಿಂದ ಮೇಲೆ ಸಂಕಷ್ಟ ಶುರುವಾಗಿವೆ. ಪ್ರಕರಣದಕ್ಕೆ ದಿನಕ್ಕೊಂದು ಟ್ವಿಸ್ಟ್ ಸಿಗುತ್ತಿದೆ. ಈ ನಡುವೆ ಪ್ರಕರಣ ಪ್ರತ್ಯಕ್ಷದರ್ಶಿ ಯೊಬ್ಬರು ನೀಡಿರುವ ಹೇಳಿಕೆ ನಟ ದರ್ಶನ್‌ಗೆ ವರದಾನ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ. ಇದೆಲ್ಲ ಬೆಳವಣಿಗೆ ನಡುವೆ ವ್ಯಕ್ತಿಯೊಬ್ಬರು 'ನಟ ದರ್ಶನ್ ಅವರು ಜೈಲಲ್ಲಿಯೇ ಸಿನಿಮಾ ಮಾಡಬೇಕು. ಅದಕ್ಕಾಗಿ ಅವಕಾಶ ನೀಡುವಂತೆ ಡಿಜೆಪಿ ಅವರನ್ನು ಭೇಟಿ ಮಾಡುವುದಾಗಿ' ತಿಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ಹೌದು, ಶಿವಕುಮಾರ್ ನಾಯ್ಕ್ ಎಂಬುವವರು ಕಾರಿನಲ್ಲಿ ಕೂತು ದರ್ಶನ್ ಅವರಿಗೆ ಜೈಲಲ್ಲಿ ಸಿನಿಮಾ ನಿರ್ಮಾಣ ಕುರಿತ ಹೇಳಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಕೆಲವರು ಡಿ.ಬಾಸ್ ಪಕ್ಕಾ ಅಭಿಮಾನಿ ಇವರು ಎಂದು ತಮಾಷೆಯಾಗಿ ಹೇಳಿದ್ದಾರೆ.

Darshan

ಶಿವಕುಮಾರ್ ನಾಯ್ಕ್ ವಿಡಿಯೋ

'ಜೈಲಲ್ಲಿರುವ ನಮ್ಮ ಬಾಸ್ ದರ್ಶನ್ ಅವರು ಅಲ್ಲಿಯೇ ಸಿನಿಮಾ ಮಾಡಬೇಕು. ದರ್ಶನ್ ಅವರು ಜೈಲಿನಲ್ಲಿ ಸಿನಿಮಾ ಮಾಡಲು ಅವಕಾಶ ಕಲ್ಪಿಸುವಂತೆ ಕೋರಿ ನಾನು ಕರ್ನಾಟಕದ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆಯ ಮಹಾನನಿರ್ದೇಶಕರಾಗಿ (DGP) ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಅವರನ್ನು ಭೇಟಿ ಮಾಡಿ ಮನವಿ ಮಾಡಲು ನಿರ್ಧರಿಸಿದ್ದೇನೆ. ಅಭಿಮಾನಿಗಳು ನೀವೆಲ್ಲ ಇದಕ್ಕೆ ಸಹಕಾರ ನೀಡಬೇಕೆಂದು ಶಿವಕುಮಾರ್ ನಾಯ್ಕ್ ಮನವಿ ಮಾಡಿರುವ ವಿಡಿಯೋ ವೈರಲ್ ಆಗಿದೆ. ಇವರು ದರ್ಶನ್ ಫ್ಯಾನ್ ಎನ್ನಲಾಗುತ್ತಿದೆ.

'ಡಿಫ್ರೆಂಟ್ ಶಿವಕುಮಾರ್' ಟೈಟಲ್‌ನಡಿ ಅಭಿಯಾನ ಆರಂಭಿಸಲಾಗುವುದು. ದರ್ಶನ್ ಅವರನ್ನು ಹಾಕಿಕೊಂಡು ಸಿನಿಮಾ ನಿರ್ಮಾಣ ಮಾಡಲು ನಿರ್ಧರಿಸಿದ್ದೇನೆ. ಈ ಬಗ್ಗೆ ಶೀಘ್ರವೇ ಅಪ್ಡೇಟ್ ನೀಡಲಿದ್ದೇನೆ' ಎಂದು ಅವರು ತಿಳಿಸಿದ್ದಾರೆ.

ವಿಡಿಯೋ ನೋಡಿದ ನೆಟ್ಟಿಗರು ಹೇಳಿದ್ದೇನು?

ವಿಡಿಯೋ ನೋಡಿದ ನೆಟ್ಟಿಗರು ತಮಾಷೆಯಾಗಿ ಉತ್ತರಿಸಿದ್ದಾರೆ. 'ಸಿನಿಮಾದ ಹೆಸರು ಜೈಲಾ, ನಾಯಕಿ ಯಾರು?, ಜೈಲಲ್ಲಿರುವ ಇತರ ಕೈದಿಗಳು ಸಹ ಕಲಾವಿದರು. ನಿರ್ದೇಶಕರು ಯಾರು? ಹೀಗೆ ನಾನಾ ರಿತಿಯ ತಮಾಷೆಯ ಪ್ರಶ್ನೆಗಳನ್ನು ನಟ್ಟಿಗರು ಕೇಳಿದ್ದಾರೆ.

ಉಲ್ಟಾ ಹೊಡೆದ ಐ-ವಿಟ್ನೆಸ್, ದಶನ್‌ಗೆ ವರದಾನ?

ರೇಣುಕಾಸ್ವಾಮಿ ಕೇಸ್ ವಿಚಾರಣೆ ಟ್ರಯಲ್ ಕೋರ್ಟ್‌ನಲ್ಲಿ ನಡೆಯುತ್ತಿದೆ. ಇತ್ತೀಚೆಗೆ ಮಾಫಿ ಪ್ರದೋಷ್ ಹೇಳಿಕೆಯನ್ನು ನ್ಯಾಯಾಲಯದಲ್ಲಿ ದಾಖಲಿಸಲಾಗಿದೆ. ನೆನ್ನೆ ಬುಧವಾರ (ಅ.28) ಪ್ರಕರಣ ಐ ವಿಟ್ನೆಸ್ ಪುನೀತ್ ಎಂಬುವವರು ಈ ಹಿಂದೆ 164ಕಲಂನಡಿ ಕೋರ್ಟ್‌ನಲ್ಲಿ ನೀಡಿದ್ದ ಹೇಳಿಕೆ ನೆನಪಿಲ್ಲ ಎಂದಿದ್ದಾರೆ. ಅಂದು ನಾನು ಸ್ಥಳದಲ್ಲಿ ಇರಲಿಲ್ಲ ಎಂಬಂತೆ ಉಲ್ಟಾ ಹೇಳಿಕೆ ನೀಡಿರುವುದು ನಟ ದರ್ಶನ್‌ಗೆ ವರದಾನ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಪ್ರಕರಣ ನಡೆದಾಗ ಪಟ್ಟಣಗೆರೆ ಶೆಡ್ ಸಿಬ್ಬಂದಿ ಎನ್ನಲಾಗುವ ಈ ಪುನೀತ್ ಈ ಹಿಂದೆ ಆರೋಪಿಗಳೆಲ್ಲರು ಅಲ್ಲಿಗೆ ಬಂದಿದ್ದರು ಎಂಬಂತೆ ಹೇಳಿಕೆ ಕೊಟ್ಟಿದ್ದರು. ಇದೀಗ ಅಂದು ನಾನು ನೀಡಿರುವ ಹೇಳಿಕೆ ಬಗ್ಗೆ ನೆನಪಿಲ್ಲ. ನಾನು ಅಂದು ಸಂಜೆ ಶೆಡ್ ಕಡೆಗೆ ಬಂದಿದ್ದು ಎಂಬಂತೆ ತನ್ನ ಹೇಳಿಕೆ ಬದಲಾಯಿಸಿದ್ದಾನೆ. ಇದು ನಟ ದರ್ಶನ್ ಜೈಲಿಂದ ಹೊರಗೆ ಸಹಾಯವಾಗಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

164 ಹೇಳಿಕೆ ಕ್ರಾಸ್ ವೆರಿಫಿಕೇಷನ್

ಸರ್ಕಾರದ ಪರ ವಕೀಲ (ಎಸ್‌ಪಿಪಿ) ಅವರು ಕೇಸಿಗೆ ಟ್ವಿಸ್ಟ್ ಕೊಟ್ಟಿರುವ ಪುನೀತ್ ಅವರು ಈ ಹಿಂದೆ ನೀಡಿದ್ದ 164 ಹೇಳಿಕೆ ಕ್ರಾಸ್ ವೆರಿಫಿಕೇಷನ್ ಮಾಡಲಿದ್ದಾರೆ. ಇಂದಿನ ವಿಚಾರಣೆಯಲ್ಲಿ ಅವರು ಮತ್ತೆ ಪುನೀತ್ ಅವರನ್ನು ವಿಚಾರಣೆಗೆ ನಡೆಸಿ ಪರಿಶೀಲಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+