ಬೆಂಗಳೂರಿನ ಆಸ್ತಿದಾರರಿಗೆ ಮತ್ತೊಂದು ಭರ್ಜರಿ ಗುಡ್‌ನ್ಯೂಸ್ ಕೊಟ್ಟ ಡಿ.ಕೆ ಶಿವಕುಮಾರ್
ಬೆಂಗಳೂರಿನ ಆಸ್ತಿದಾರರಿಗೆ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರು ಗುಡ್‌ನ್ಯೂಸ್ ಕೊಟ್ಟಿದ್ದಾರೆ. ಆಸ್ತಿ ವಿಚಾರದಲ್ಲಿ ಈಗಾಗಲೇ ಹಲವು ನಿರ್ಣಾಯಕ ನಿರ್ಧಾರಗಳನ್ನು ರಾಜ್ಯ ಸರ್ಕಾರವು ತೆಗೆದುಕೊಂಡಿದ್ದು, ಇದೀಗ ಮತ್ತೊಂದು ಅಪ್ಡೇಟ್ಸ್ ಕೊಡಲಾಗಿದೆ. ಅದೇನು ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
ಬೆಂಗಳೂರಿನ ಆಸ್ತಿದಾರರಿಗೆ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಇದೀಗ ನಕ್ಷೆ ಮಂಜೂರಾತಿ / ನಂಬಿಕೆ ನಕ್ಷೆ ವಿಚಾರದಲ್ಲಿ ಗುಡ್‌ನ್ಯೂಸ್ ಕೊಟ್ಟಿದ್ದಾರೆ. ಈ ಸಂಬಂಧ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಅವರು, ಸುಲಭ ಮತ್ತು ಪಾರದರ್ಶಕ ಸೇವೆಯೇ ನಮ್ಮ ಗುರಿ ಬೆಂಗಳೂರಿನ ಸಾರ್ವಜನಿಕರು ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು 50×80 ಅಡಿಯವರೆಗಿನ ನಿವೇಶನಗಳಿಗೆ ಆನ್‌ಲೈನ್ ಮೂಲಕವೇ ತಕ್ಷಣ ನಕ್ಷೆ ಮಂಜೂರಾತಿ ನೀಡುವ 'ನಂಬಿಕೆ ನಕ್ಷೆ' ಯೋಜನೆಯನ್ನು ನಮ್ಮ ಸರ್ಕಾರ ಜಾರಿಗೆ ತಂದಿದೆ.

ನೋಂದಾಯಿತ ಇಂಜಿನಿಯರ್‌ಗಳ ಮೂಲಕ ದಾಖಲೆಗಳನ್ನು ಅಪ್‌ಲೋಡ್ ಮಾಡಿದ 15 ದಿನದೊಳಗೆ ಪರಿಶೀಲನೆ ಪೂರ್ಣಗೊಂಡು, ಶುಲ್ಕ ಪಾವತಿಸಿದ ಕೂಡಲೇ ಕ್ಯೂಆರ್ ಕೋಡ್ ಸಹಿತ ಅಂತಿಮ ನಕ್ಷೆಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು ಎಂದು ಹೇಳಿದ್ದಾರೆ.
1. ಸರ್ಕಾರಿ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಲು 50 * 80 ಅಡಿಯ ವರೆಗಿನ ನಿವೇಶನದಲ್ಲಿ 4 ವಸತಿ ಘಟಕಗಳ ವರೆಗೆ ಕಟ್ಟಡ ನಕ್ಷೆ ಮಂಜೂರಾತಿ ವ್ಯವಸ್ಥೆ.
2. ನಿವೇಶನದ ದಾಖಲೆಗಳು, ಕಟ್ಟಡದ ನಕ್ಷೆಗಳು, ಸ್ಥಳ ಪರಿಶೀಲನೆ, ನಿಗದಿತ ಅಫಿಡವಿಟ್‌ಗಳನ್ನು ನೋಂದಾಯಿತ ಇಂಜಿನಿಯರ್ / ಆರ್ಕಿಟೆಕ್ಟ್‌ಗಳ ಮೂಲಕ ಆನ್‌ಲೈನ್‌ನಲ್ಲೇ ಅಪ್ಲೋಡ್ ಮಾಡಿದ ತಕ್ಷಣ ನಕ್ಷೆಗೆ ತಾತ್ಕಾಲಿಕ ಮಂಜೂರಾತಿ ಲಭ್ಯ.
3. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ 15 ದಿನದೊಳಗೆ ಪರಿಶೀಲನೆಗೊಳಪಟ್ಟು, ನಕ್ಷೆ ಮಂಜೂರಾತಿ ಶುಲ್ಕ ಪಾವತಿಸಿದ ಕೂಡಲೇ QR CODE ಮೂಲಕ ಆನ್‌ಲೈನ್‌ನಲ್ಲಿ ಅಂತಿಮ ನಕ್ಷೆ ಡೌನ್‌ಲೋಡ್ ಮಾಡಿಕೊಳ್ಳಬಹುದು.
ನಂಬಿಕೆ ನಕ್ಷೆ ಎಂದರೇನು ?
ರಾಜ್ಯ ಕಾಂಗ್ರೆಸ್ ಸರ್ಕಾರವು ಜಾರಿಗೆ ತಂದಿರುವ ಪ್ರಮುಖ ಯೋಜನೆಗಳಲ್ಲಿ ನಂಬಿಕೆ ನಕ್ಷೆ ಯೋಜನೆ (Nambike Nakshe Scheme)ಯೂ ಒಂದಾಗಿದೆ. ಬೆಂಗಳೂರಿನಲ್ಲಿ ಮನೆ ಕಟ್ಟುವವರಿಗೆ ಕಟ್ಟಡ ನಕ್ಷೆ ಮಂಜೂರಾತಿಯ ಪ್ರಕ್ರಿಯೆಯನ್ನು ಸುಲಭಗೊಳಿಸಲು ಜಾರಿಗೊಳಿಸುವ ಉದ್ದೇಶದಿಂದ ಇದರ ಆನ್‌ಲೈನ್ ವ್ಯವಸ್ಥೆ ಜಾರಿ ಮಾಡಲಾಗಿದೆ. 50x80 ಅಡಿವರೆಗಿನ ನಿವೇಶನಗಳಿಗೆ ಅನುಮೋದಿತ ವಾಸ್ತುಶಿಲ್ಪಜ್ಞರು ಅಥವಾ ಎಂಜಿನಿಯರ್‌ಗಳು ನಕ್ಷೆಯನ್ನು ಅನುಮೋದಿಸಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದಿಂದ ಏಕ ಗವಾಕ್ಷಿ ವ್ಯವಸ್ಥೆಯಲ್ಲಿ ಅನುಮತಿ ಪಡೆಯಬಹುದು. ಇದರಿಂದ ಕಚೇರಿಗಳಿಗೆ ಅಲೆದಾಡುವ ಅಗತ್ಯವಿಲ್ಲ ಮತ್ತು ಪಾರದರ್ಶಕವಾಗಿ ಬೇಗ ಅನುಮೋದನೆ ಸಿಗುತ್ತದೆ.
ಈ ಯೋಜನೆಯ ಪ್ರಮುಖ ಅಂಶಗಳು
ಏಕ ಗವಾಕ್ಷಿ ವ್ಯವಸ್ಥೆ: ಕಟ್ಟಡದ ಅನುಮೋದನೆಗಾಗಿ ವಿವಿಧ ಕಚೇರಿಗಳಿಗೆ ಹೋಗಬೇಕಾದ ಅವಶ್ಯಕತೆ ಇರುವುದಿಲ್ಲ.
ಆನ್‌ಲೈನ್ ಪ್ರಕ್ರಿಯೆ: ಸಂಪೂರ್ಣ ಪ್ರಕ್ರಿಯೆಯು ಆನ್‌ಲೈನ್ ಮೂಲಕ ನಡೆಯುತ್ತದೆ. ಡಿಜಿಟಲ್ ಸಹಿ ಪ್ರಮಾಣಪತ್ರಗಳು ಇರಲಿವೆ.
ಕಡಿಮೆ ಸಮಯ: ಕಡಿಮೆ ವಿಸ್ತೀರ್ಣದ ನಿವೇಶನಗಳಿಗೆ ಒಂದೇ ದಿನದಲ್ಲಿ ನಕ್ಷೆ ಅನುಮತಿ ಪಡೆಯಬಹುದಾಗಿದೆ.
ಯಾರು ಇದನ್ನು ಬಳಸಬಹುದು: ಮುಖ್ಯವಾಗಿ 50/80 ಅಡಿವರೆಗಿನ ನಿವೇಶನಗಳ ಮಾಲೀಕರು ಇದನ್ನು ಆನ್‌ಲೈನ್‌ನಲ್ಲಿ ಪಡೆದುಕೊಳ್ಳಬಹುದಾಗಿದೆ.
ಇನ್ನು ಬೆಂಗಳೂರಿನಲ್ಲಿ ಬಿ ಖಾತಾ ಸೇರಿದಂತೆ ವಿವಿಧ ವಿಚಾರಗಳಲ್ಲಿ ಈಗಾಗಲೇ ಗುಡ್‌ನ್ಯೂಸ್ ಕೊಡಲಾಗಿದೆ. ಈಚೆಗೆ ಆನ್‌ಲೈನ್ ಮೂಲಕ ಇ ಖಾತಾ ಸೇವೆ ಪರಿಚಯಿಸಲಾಗಿದ್ದು, ಇದೀಗ ನಂಬಿಕೆ ನಕ್ಷೆಯೂ ಆನ್‌ಲೈನ್‌ನಲ್ಲೇ ಸಿಗಲಿದೆ.
ಭ್ರಷ್ಟಾಚಾರಕ್ಕೆ ಬ್ರೇಕ್: ಆಸ್ತಿಗಳಿಗೆ ಸಂಬಂಧಿಸಿದ ವಿವಿಧ ಸೇವೆಗಳನ್ನು ಆನ್‌ಲೈನ್‌ನಲ್ಲಿ ನೀಡುತ್ತಿರುವುದರಿಂದ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳಲಿದೆ.












Click it and Unblock the Notifications