ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Breaking: ಕ್ರಿಪ್ಟೋ ಕರೆನ್ಸಿಯಲ್ಲಿ ಲಾಭಗಳಿಸುವುದಾಗಿ ವಂಚಿಸುತ್ತಿದ್ದ ಆರೋಪಿಯ ಬಂಧನ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 30: ಕ್ರಿಪ್ಟೋ ಕರೆನ್ಸಿ ಎನ್ನುವುದು ಸದ್ಯ ಜಾಗತಿಕ ಮಟ್ಟದ ಸೆನ್ಸೇಷನ್. ಕ್ರಿಪ್ಟೋ ಕರೆನ್ಸಿ ಮೇಲಿನ ಕುತೂಹಲವನ್ನೇ ಬಂಡವಾಳವನ್ನಾಗಿಸಿಕೊಂಡು ಲಾಭ ಗಳಿಸಿಕೊಡುವುದಾಗಿ ಬ್ಯಾಂಕ್ ಖಾತೆ, ಸಿಮ್ ಕಾರ್ಡ್ ಪಡೆದು ವಂಚಿಸುತ್ತಿದ್ದ ಆರೋಪಿಯನ್ನು ಬೆಂಗಳೂರು ಸೈಬರ್ ಪೊಲೀಸರು ಬಂಧಿಸಿದ್ದಾರೆ.

ಹಣ ಎಂದರೆ ಸಾಕು ಹೆಣ ಕೂಡ ಬಾಯಿ ಬಿಡುತ್ತೆ ಅಂತಾರೆ. ಹಣ ಬರುವಂತೆ ಮಾಡುತ್ತೇವೆ. 0% ಇನ್ವೆಸ್ಟ್‌ಮೆಂಟ್ ಅಂತೆಲ್ಲಾ ಹೇಳಿದರೆ ಜನರು ತಾವಾಗಿಯೇ ಹಳ್ಳಕ್ಕೆ ಬೀಳುತ್ತಾರೆ. ಹಣದ ಆಸೆಯೇ ಮೋಸಹೋಗುವಂತೆ ಮಾಡಿಬಿಡುತ್ತದೆ. ಅದೇ ರೀತಿಯಲ್ಲೇ ಬೆಂಗಳೂರಿನ ಈಶಾನ್ಯ ವಿಭಾಗದ ಸಿಇಎನ್ ಠಾಣಾ ಪೊಲೀಸರು ಕೇರಳ ಮೂಲದ ಶಾನೀದ್ ಅಬ್ದುಲ್ ಎಂಬಾತನನ್ನು ಬಂಧಿಸಿದ್ದಾರೆ. ಈತ ಕ್ರಿಪ್ಟೋಯಲ್ಲಿ ಹೂಡಿಕೆ ಮಾಡಿ ಲಾಭಮಾಡಿಕೊಡುವುದಾಗಿ ಹೇಳಿ ಸಿಮ್ ಆಕೌಟ್ ನಂಬರ್, ಚೆಕ್ ಪಡೆದು ಮೋಸವನ್ನು ಮಾಡುತ್ತಿದ್ದ. ಈತನ ಸಹಚರ ಮತ್ತೊಬ್ಬ ಆರೋಪಿ ಮೊಹಮ್ಮದ್ ನಿಹಾಲ್ ಎಂಬಾತ ತಲೆಮರೆಸಿಕೊಂಡಿದ್ದು ಆತನಿಗಾಗಿ ಪೊಲೀಸರು ತೀವ್ರ ಹುಡುಕಾಟವನ್ನು ನಡೆಸಿದ್ದಾರೆ.

ದಸರಾ ಹಬ್ಬ: ಪ್ರಯಾಣಿಕರಿಂದ ಹೆಚ್ಚು ಹಣ ವಸೂಲಿ ಮಾಡಿದರೆ ಪರ್ಮಿಟ್ ರದ್ದು: ಶ್ರೀರಾಮುಲು ಎಚ್ಚರಿಕೆದಸರಾ ಹಬ್ಬ: ಪ್ರಯಾಣಿಕರಿಂದ ಹೆಚ್ಚು ಹಣ ವಸೂಲಿ ಮಾಡಿದರೆ ಪರ್ಮಿಟ್ ರದ್ದು: ಶ್ರೀರಾಮುಲು ಎಚ್ಚರಿಕೆ

ಟೆಲಿಗ್ರಾಂನಲ್ಲಿ ಗ್ರೂಪ್ ಮಾಡಿಕೊಂಡಿದ್ದ ಆರೋಪಿ

ಟೆಲಿಗ್ರಾಂನಲ್ಲಿ ಗ್ರೂಪ್ ಮಾಡಿಕೊಂಡಿದ್ದ ಆರೋಪಿ ಬೇರೆ ಜನರಿಗೆ ಗ್ರೂಪ್ ಲಿಂಕ್ ಕಳಿಸಿ ಜಾಯಿನ್ ಮಾಡಿಸುತ್ತಿದ್ದ. ಬಳಿಕ ನೀವು ನಿಮ್ಮ ಕರೆಂಟ್ ಅಕೌಂಟಿನ ಡೆಬಿಟ್ ಕಾರ್ಡ್/ಚೆಕ್ ಬುಕ್ ಮತ್ತು ಸಿಮ್ ಕಾರ್ಡ್ ನೀಡಿದರೆ ನಿಮ್ಮ ಹಣವನ್ನು ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿ ಲಾಭ ಗಳಿಸಿ ಕೊಡುವುದಾಗಿ ನಂಬಿಸುತ್ತಿದ್ದ. ಬಳಿಕ ಅಕೌಂಟಿನಲ್ಲಿದ್ದ ಹಣವನ್ನು ವರ್ಗಾಯಿಸಿಕೊಂಡು ವಂಚಿಸುತ್ತಿದ್ದ ಎಂಬುದು ತನಿಖೆಯಿಂದ ತಿಳಿದು ಬಂದಿದೆ.

Cyber crime: Police Arrest of the accused who was cheating to make profit in Crypto currency

222 ಸಿಮ್ ಕಾರ್ಡುಗಳು, 10 ಮೊಬೈಲ್ ವಶಕ್ಕೆ

ಸದ್ಯ ಆರೋಪಿಯನ್ನು ಬಂಧಿಸಿರುವ ಸಿಇಎನ್ ಪೊಲೀಸರು ಬಂಧಿತನಿಂದ ಬರೊಬ್ಬರಿ 222 ಸಿಮ್ ಕಾರ್ಡುಗಳು, 10 ಮೊಬೈಲ್ ಫೋನ್‌ಗಳು, 10 ಡೆಬಿಟ್ ಕಾರ್ಡುಗಳು, ಬ್ಯಾಂಕ್ ಪಾಸ್ ಬುಕ್, ಚೆಕ್ ಬುಕ್ ಗಳನ್ನು ವಶಕ್ಕೆ ಪಡೆದಿದ್ದಾರೆ‌. ಪ್ರಕರಣದ ಮತ್ತೊರ್ವ ಆರೋಪಿ ಎಸ್ಕೇಪ್ ಅಗಿದ್ದು ಪತ್ತೆ ಕಾರ್ಯ ಮುಂದುವರೆದಿದೆ.

English summary
Bengaluru Cyber ​​Police has arrested the accused who was cheating by getting a bank account and SIM card to make a profit by capitalizing on his curiosity about crypto currency, Know More,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X