Bengaluru Airport: ಬೆಲ್ಟ್ ಒಳಗಡೆ ಅವಿಸಿಟ್ಟುಕೊಂಡಿದ್ದ ಕೇಜಿಗಟ್ಟಲೇ ಚಿನ್ನ ಜಪ್ತಿ
ಬೆಂಗಳೂರು: ದೇವನಹಳ್ಳಿ ತಾಲೂಕಿನ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಅಡಗಿಸಿಟ್ಟುಕೊಂಡಿದ್ದ 1.59 ಕೋಟಿ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡ ಘಟನೆ ಬುಧವಾರ ನಡೆದಿದೆ.
ಭಾರತೀಯ ಮೂಲದವರೇ ಆದ ಇಬ್ಬರು ವ್ಯಕ್ತಿಗಳು ಸಿಂಗಾಪುರದಿಂದ ಬೆಂಗಳೂರಿಗೆ ಬಂದಿಳಿದಿದ್ದರು. ಕಸ್ಟಮ್ಸ್ ಅಧಿಕಾರಿಗಳು ಅನುಮಾನಗೊಂಡು ಆ ಇಬ್ಬರ ಬ್ಯಾಗ್‌ಗಳನ್ನು ಪರಿಶೀಲಿಸಿದಾಗ ಒಟ್ಟು 59 ಕೋಟಿ ಮೌಲ್ಯದ 2 ಕೆಜಿ 610 ಗ್ರಾಂ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ.

ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆ ಕಸ್ಟಮ್ಸ್ ಅಧಿಕಾರಿಗಳ ಕಣ್ಣು ತಪ್ಪಿಸಲು ಆರೋಪಿಗಳು ಬೆಲ್ಟ್ ಒಳಗಡೆ ಚಿನ್ನವನ್ನು ಅಡಗಿಸಿ ಇಟ್ಟುಕೊಂಡಿದ್ದರು. ಅನುಮಾನ ಬಂದ ವ್ಯಕ್ತಿಗಳನ್ನು ಪರಿಶೀಲಿಸುವಂತೆ ಕಸ್ಟಮ್ಸ್ ಅಧಿಕಾರಿಗಳು ಇವರಿಬ್ಬರನ್ನು ತಪಾಸಣೆ ಮಾಡಿದ್ದಾರೆ. ಈ ವೇಳೆ ಬೇಲ್ಟ್ ಒಳಗಡೆ ಅಡಗಿಸಿ ಇಟ್ಟಿದ್ದ ಚಿನ್ನದ ಸರಗಳು ಪತ್ತೆಯಾಗಿವೆ.
ಚಿನ್ನದ ಸಮೇತ ಇಬ್ಬರು ಪ್ರಯಾಣಿಕರನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಅಧಿಕಾರಿಗಳು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಚಿನ್ನ ಮತ್ತು ಇತರೆ ವಸ್ತುಗಳು ಸಿಗುತ್ತಿರುವುದು ಇದೇ ಮೊದಲೇನಲ್ಲ.

ಕಳೆದ ಒಂದು ವಾರದ ಹಿಂದಷ್ಟೇ ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ವ್ಯಕ್ತಿಯನ್ನು ಮಾಲಿನ ಸಮೇತ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಮಧ್ಯಪ್ರದೇಶದ ಇಂದೋರ್ನಿಂದ ಇಂಡಿಗೋ 6E6744 ವಿಮಾನದಲ್ಲಿ ಬಂದ ಚೆನ್ನೈ ಮೂಲದ ವ್ಯಕ್ತಿ ಬೆಂಗಳೂರಿನ ಏರ್‌ಪೋರ್ಟ್‌ಗೆ ವ್ಯಕ್ತಿ ಆಗಮಿಸಿದ್ದ.
ರೂ. 4 ಕೋಟಿ ಮೌಲ್ಯದ ಚಿನ್ನ ಜಪ್ತಿ
ಈ ಬಂಧಿತ ವ್ಯಕ್ತಿಯಿಂದ ಬರೋಬ್ಬರಿ 4 ಕೋಟಿ ರೂಪಾಯಿ ಮೌಲ್ಯದ 6.5 ಕೆಜಿ ತೂಕದ 7 ಚಿನ್ನದ ಬಿಸ್ಕೆಟ್ಗಳನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದರು. ಆದರೆ ಈ ಘಟನೆ ತಡವಗಿ ಬೆಳಕಿಗೆ ಬಂದಿತ್ತು.
ಸ್ಮಗ್ಲರ್ಸ್ ಈ ಮೊದಲೇ ಸೀಟ್ ಕೆಳಗೇ ಚಿನ್ನವನ್ನಿಟ್ಟು ಬಂಧಿತ ಆರೋಪಿಗೆ ತಿಳಿಸಿದ್ದರು ಎನ್ನಲಾಗಿದೆ. ಹೀಗಾಗಿ ಬಂಧಿತ ಆರೋಪಿ ಅದೇ ಸೀಟ್ ಬುಕ್ ಮಾಡಿಕೊಂಡು ಬೆಂಗಳೂರು ಬರುತ್ತಿದ್ದಂತೆ ಸೀಟ್ ಕೆಳಗಿಟ್ಟಿದ್ದ ಚಿನ್ನ ಬ್ಯಾಗ್ನಲ್ಲಿ ಇರಿಸಿಕೊಂಡು ಬಂದ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದಿದ್ದ ಎಂದು ತಿಳಿದು ಬಂದಿದೆ.












Click it and Unblock the Notifications