Current Cut: ಜೂನ್ 4ರಂದು ಬೆಂಗಳೂರಿನ ವಿವಿಧೆಡೆ ವಿದ್ಯುತ್ ವ್ಯತ್ಯಯ
ಬೆಂಗಳೂರು ಜೂನ್ 3: ಬೆಂಗಳೂರಿನಲ್ಲಿ ವಿವಿಧೆಡೆ ಜೂನ್ 4ರಂದು ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ. ಬ್ಯಾಡರಹಳ್ಳಿ ಹಾಗೂ ಶ್ರೀಗಂಧಕಾವಲಿನ ಬೆಸ್ಕಾಂ 66/11ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಪ್ರಯುಕ್ತ ಭಾನುವಾರ ಅಂದರೆ (ಜೂನ್ 4) ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಸುಕಂದಕಟ್ಟೆ ಹೇರೋಹಳ್ಳಿ, ಕೆಂಪೇಗೌಡ ನಗರ, ಗೊಲ್ಲರಹಟ್ಟಿ, ತುಂಗಾನಗರ, ಹೊಸಳ್ಳಿ ಅನ್ನಪೂರ್ಣೇಶ್ವರಿ ನಗರ, ನೆಟ್ಟಕಲ್ಲಪ್ಪ ಇಂಡಸ್ಟ್ರಿಯಲ್ ಏರಿಯಾ, ಶಂಕ್ರಪ್ಪ ಇಂಡಸ್ಟ್ರಿಯಲ್ ಏರಿಯಾ, ನೀಲಗಿರಿ ತೋಪು, ಹೆಗ್ಗನಹಳ್ಳಿ, ಬ್ಯಾಡರಹಳ್ಳಿ, ಬಿಇಎಲ್ ಎರಡನೇ ಹಂತ, ಅಂಜನಾನಗರ, ಗಿಡದಕೋನೇನಹಳ್ಳಿ ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ಸ್ಥಗಿತಗೊಳಿಸಲಾಗುತ್ತದೆ ಎಂದು ಬೆಸ್ಕಾಂ ಪಶ್ಚಿಮ ವೃತ್ತದ ಅಧೀಕ್ಷಕ ಇಂಜಿನಿಯರ್ ತಿಳಿಸಿದ್ದಾರೆ.

ಜೊತೆಗೆ ಮುದ್ದಿನಪಾಳ್ಯ, ಬಿಡಿಎ 8 ಹಾಗೂ 9ನೇ ಬ್ಲಾಕ್, ಉಪಕಾರ ಲೇಔಟ್, ಗೊಲ್ಲರಹಟ್ಟಿ ಡಿ ಗ್ರೂಪ್ ಎಸ್ಟೇಟ್, ಚಿಕ್ಕ ಗೊಲ್ಲರಹಟ್ಟಿ, ಬಿಎಂಟಿಸಿ ಡಿಪೋ, ಪೈಪ್ ಲೈನ್ ರೋಡ್, ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ಸ್ಥಗಿತಗೊಳಿಸಲಾಗುತ್ತದೆ ಎಂದು ಬೆಸ್ಕಾಂ ತಿಳಿಸಿದೆ.












Click it and Unblock the Notifications