ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಕ್ರೈಂ ರೌಂಡಪ್ : ಸಿನಿಮಾ ಶೈಲಿಯ ಕೊಲೆ ರಹಸ್ಯ ಪತ್ತೆ ಮಾಡಿದ ಪೊಲೀಸರು!

|
Google Oneindia Kannada News

ಬೆಂಗಳೂರು,ಸೆ. 25: ಸಿನಿಮೀಯ ಶೈಲಿಯಲ್ಲಿ ಪತ್ನಿಯನ್ನು ಕೊಲೆ ಮಾಡಿದ ಪಾಪಿಗಂಡ ತನ್ನ ಪತ್ನಿಯ ಸ್ನೇಹಿತರಿಬ್ಬರ ಹತ್ಯೆಗೆ ಯತ್ನಿಸಿ ಸಿನಿಮೀಯ ಶೈಲಿಯಲ್ಲಿ ಸಿಕ್ಕಿಬಿದ್ದಿದ್ದಾನೆ. ಶ್ವಾನ ಬೆಲ್ಟ್ ಖರೀದಿಸುವ ಸೋಗಿಯಲ್ಲಿ ಅಂಗಡಿಗೆ ಹೋಗಿ ಹಣ ದೋಚಿದ ಕಿಲಾಡಿಗಳ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಚಾಮರಾಜಪೇಟೆಯ ನ್ಯೂ ನಗರ್ತಪೇಟೆಯಲ್ಲಿ ಸಂಭವಿಸಿದ ಸ್ಫೋಟಕ್ಕೆ ತುತ್ತಾದ ವಾಹನಗಳಿಗೆ ವಿಮೆ ಪಡೆಯಲು ಬಿಬಿಎಂಪಿ ಅಧಿಕಾರಿಗಳು ಮನವಿ ಮಾಡಿದ್ದಾರೆ. ವಿಲಾಜಿ ಜೀವನಕ್ಕಾಗಿ ಮಾದಕ ವಸ್ತು ಮಾರಾಟ ಮಾಡಲು ಹೋಗಿ ರಾಜಸ್ತಾನ ಮೂಲದ ವ್ಯಕ್ತಿ ಅಂದರ್ ಆಗಿದ್ದಾನೆ. ಇದು ಬೆಂಗಳೂರು ಅಪರಾಧ ಲೋಕದ ಚಿತ್ರಣ.

ಸಿನಿಮಾ ಶೈಲಿಯಲ್ಲಿ ಪತ್ನಿ ಕೊಲೆ ಮಾಡಿದ ಪತಿ: ಪತ್ನಿಯನ್ನು ಕೊಲೆ ಮಾಡಿ, ಈ ಪ್ರಕರಣ ಮುಚ್ಚಿ ಹಾಕಲು ಆಕೆಯ ಸ್ನೇಹಿತರಿಬ್ಬರ ಕೊಲೆಗೆ ಯತ್ನಿಸಿ ಸಿನಿಮಾ ಮಾದರಿಯಲ್ಲಿ ಕೊಲೆ ಪಾತಕ ಸಿಕ್ಕಿ ಬಿದ್ದಿದ್ದಾನೆ.

Bengaluru crime roundup: murder accused arrested by Bengaluru police

ಅನ್ನಪೂರ್ಣೇಶ್ವರಿನಗರದ ನಿವಾಸಿ ಕಾಂತರಾಜು ಬಂಧಿತ ಆರೋಪಿ. ಈತ ಕಳೆದ ಸೆ. 22 ರಂದು ಸಂಜೆ ಪತ್ನಿ ರೂಪಾ ತಲೆಗೆ ಕಬ್ಬಿಣದ ಪೈಪ್ ನಿಂದ ಹಲ್ಲೆ ಮಾಡಿದ್ದ. ಆಯತಪ್ಪಿ ಕೆಳಗೆ ಬಿದ್ದ ಪತ್ನಿಗೆ ಸ್ಕ್ರೂ ಡ್ರೈವರ್ ನೀಂದ ಕುತ್ತಿಗೆಗೆ ಚುಚ್ಚಿ ಚಾಕುವಿನಿಂದ ಕತ್ತು ಕೊಯ್ತು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದ. ಈ ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿಯ ಪತ್ತೆಗೆ ಎರಡು ತಂಡ ರಚನೆ ಮಾಡಲಾಗಿತ್ತು.

ಪತ್ನಿಯನ್ನು ಕೊಲೆ ಮಾಡಿದ ಬಳಿಕ ಆಕೆಯ ಇಬ್ಬರು ಸ್ನೇಹಿತರನ್ನು ಕೊಲೆ ಮಾಡಲು ಸಂಚು ರೂಪಿಸಿದ್ದ ಕಾಂತರಾಜು ಕರೆ ಮಾಡಿ ಸಿಗುವಂತೆ ಸೂಚನೆ ನೀಡಿದ್ದ. ಕೊಲೆ ಬೆದರಿಕೆಗೆ ಒಳಗಾಗಿದ್ದವರು ನೀಡಿದ ಮಾಹಿತಿ ಮೇರೆಗೆ ಕಾಂತರಾಜುನನ್ನು ಶುಕ್ರವಾರ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಬಂಧಿಸಿದ್ದಾರೆ.

ಬಂಧಿತನಿಂದ ಸ್ಕ್ರೂ ಡ್ರೈವರ್, ಒಂದು ಚಾಕು ಎರಡು ಮೊಬೈಲ್ ವಶಪಡಿಸಿಕೊಂಡಿದ್ದಾರೆ. ಸಿನಿಮಾ ಶೈಲಿಯಲ್ಲಿ ತನ್ನ ಪತ್ನಿಯನ್ನು ಕೊಲೆ ಮಾಡಿದ ಬಳಿಕ ಆ ಪ್ರಕರಣ ಬೆಳಕಿಗೆ ಬಾರದಂತೆ ಆಕೆಯ ಸ್ನೇಹಿತರನ್ನು ಕೊಲೆ ಮಾಡಲು ಹೋಗಿ ಸಿಕ್ಕಿಬಿದ್ದಿದ್ದಾನೆ.

ವಿಚಾರಣೆ ವೇಳೆ ಈತ ಈ ಹಿಂದೆ ಮೂವರ ಕೊಲೆ ಪ್ರಕರಣದಲ್ಲಿ ಕಾಂತರಾಜು ಜೈಲಿಗೆ ಹೋಗಿದ್ದ. ಜೈಲಿನಿಂದ ಬಿಡುಗಡೆಯಾಗಿ ಬಂದ ಬಳಿಕ ಪತ್ನಿ ಜತೆ ಅನೋನ್ಯವಾಗಿಯೇ ಇದ್ದ. ಇದೀಗ ಪತ್ನಿಯನ್ನು ಕೊಲೆ ಮಾಡಿ ಮತ್ತಿಬ್ಬರ ಕೊಲೆಗೆ ಯತ್ನಿಸಿ ಮತ್ತೆ ಜೈಲಿಗೆ ಹೋಗಿದ್ದಾನೆ. ಅನ್ನಪೂರ್ಣೇಶ್ವರಿನಗರ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

Bengaluru crime roundup: murder accused arrested by Bengaluru police

ನಾಯಿ ಬೆಲ್ಟ್ ಖರೀದಿಸುವ ಸೋಗಿನಲ್ಲಿ ಕಳ್ಳತನ
ಶ್ವಾನ ಬೆಲ್ಟ್‌ ಖರೀದಿಸುವ ಸೋಗಿನಲ್ಲಿ ಅಂಗಡಿಗೆ ಭೇಟಿ ನೀಡಿದ ಇಬ್ಬರು ಗಮನ ಬೇರಡೆ ಸೆಳೆದು ನಗದು ದೋಚಿ ಪರಾರಿಯಾಗಿರುವ ಘಟನೆ ರಾಜಗೋಪಾಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ರಾಜಗೋಪಾಲನಗರದ ಆಂಜನೇಯ ಟೆಂಪಲ್ ಸಮೀಪ ವಿನುತಾ ಎಂಬುವರಿಗೆ ಸೇರಿದ ಪೆಟ್ ಶಾಪ್ ನಲ್ಲಿ ಈ ಘಟನೆ ನಡೆದಿದ್ದು, ಸಿಸಿಟಿವಿ ಕ್ಯಾಮರದಲ್ಲಿ ಸೆರೆಯಾಗಿದೆ. ಶ್ವಾನ ಬೆಲ್ಟ್ ಖರೀದಿಸಲು ಇಬ್ಬರು ಬಂದಿದ್ದಾರೆ. ಒಬ್ಬ ಮೊಬೈಲ್ ನಲ್ಲಿ ಮಾತನಾಡುತ್ತಿದ್ದಾಗ, ಮತ್ತೊಬ್ಬ ವ್ಯಕ್ತಿ ಕ್ಯಾಷ್ ಟೇಬಲ್ ನಿಂದ ಹಣ ಎಗರಿಸಿ ಪರಾರಿಯಾಗಿದ್ದಾನೆ.

ಆ ಬಳಿಕ ಏನನ್ನೂ ಖರೀದಸದೇ ಪರಾರಿಯಾಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ರಾಜಗೋಪಾಲನಗರ ಪೊಲೀಸರು ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.

ನ್ಯೂ ತರಗುಪೇಟೆ ಸ್ಫೋಟ ಪ್ರಕರಣ:

ನ್ಯೂ ತರಗುಪೇಟೆ ಸ್ಫೋಟ ಪ್ರಕರಣದಲ್ಲಿ ಹಾನಿಗೆ ಒಳಗಾಗಿರುವ ವಾಹನಗಳು ವಿಮೆ ಕ್ಲೇಮ್ ಮಾಡುವಂತೆ ಪೊಲೀಸರು ಮನವಿ ಮಾಡಿದ್ದಾರೆ. ಪತ್ರಕಾಳಿ ಟ್ರಾನ್ಸ್ ಪೋರ್ಟ್ ನಲ್ಲಿ ಸಂಭವಿಸಿದ ಸ್ಫೋಟ ದುರಂತದಲ್ಲಿ ಹತ್ತಕ್ಕೂ ಹೆಚ್ಚು ವಾಹನ ಸುಟ್ಟು ಕರಕಲಾಗಿದ್ದವು.

ದಯಾನಂದ್ ಎಂಬ ವಿದ್ಯಾರ್ಥಿಗೆ ಆತನ ತಂದೆ ಪ್ರೀತಿಯಿಂದ ಕೊಡಿಸಿದ್ದ ಹೊಸ ಡಿಯೋ ಬೈಕ್ ಕೂಡ ಸುಟ್ಟು ಕರಕಲಾಗಿತ್ತು. ಘಟನಾ ಸ್ಥಳದಲ್ಲಿಯೇ ವಾಸವಾಗಿರುವ ದಯಾನಂದ ತನ್ನ ತಂದೆ ಕೊಡಿಸಿದ ಬೈಕ್ ಸುಟ್ಟು ಹೋಗಿದ್ದನ್ನು ನೋಡಿ ಕಣ್ಣೀರು ಹಾಕಿದ್ದಾನೆ.

ಸ್ಫೋಟದಿಂದ ಹಾನಿಗೆ ಒಳಗಾಗಿರುವ ಮನೆ, ವಸ್ತು ಕುರಿತು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ಕಲೆ ಹಾಕಿದ್ದಾರೆ. ಹಾನಿಗೆ ಒಳಗಾಗಿರುವ ವಾಹನಗಳಿಗೆ ವಿಮೆ ಕ್ಲೇಮ್ ಮಾಡುವಂತೆ ಸಾರ್ವಜನಿಕರಿಗೆ ಬಿಬಿಎಂಪಿ ಅಧಿಕಾರಿಗಳು ಸಲಹೆ ಮಾಡಿದ್ದಾರೆ.

ಡ್ರಗ್ ಪೆಡ್ಲರ್ ಸೆರೆ : ಐಶರಾಮಿ ಜೀವನಕ್ಕಾಗಿ ಡ್ರಗ್ ಪೆಡ್ಲಿಂಗ್ ಮಾಡುತ್ತಿದ್ದ ಆರೋಪಿಯನ್ನು ಹಲಸೂರು ಪೊಲೀಸರು ಬಂಧಿಸಿದ್ದಾರೆ. ರಾಜಸ್ತಾನ ಮೂಲದ ಬುದ್ಧರಾಮ್ ಬಂಧಿತ ಆರೋಪಿ. ಈತನಿಂದ 2.6 ಕೆ.ಜಿ ತೂಕದ ಅಫೀಮು (opium) ವಶಪಡಿಸಿಕೊಂಡಿದ್ದಾರೆ. ರಾಜಸ್ತಾನ ಮೂಲದ ಬುದ್ಧರಾಮ್ ಚಿಕ್ಕಪೇಟೆಯ ಅಂಗಡಿಯೊಂದರಲ್ಲಿ ಲಗ್ನಪತ್ರಿಕೆ ಡಿಸೈನ್ ಮಾಡುವ ಕೆಲಸ ಮಾಡುತ್ತಿದ್ದ.

ಲಾಕ್ ಡೌನ್ ಸಮಯದಲ್ಲಿ ಕೆಲಸ ಕಳೆದುಕೊಂಡಿದ್ದ ಈತ ರಾಜಸ್ತಾನದಿಂದ ಅಫೀಮು ತರಿಸಿ ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದ. ಹಲಸೂರು ಪೊಲೀಸ್ ಠಾಣಾ ವ್ಯಾಪ್ತಿಯ ಶಾಲೆಯ ಆಟದ ಮೈದಾನ ಸಮೀಪ ಅಫೀಮು ಮಾರಾಟ ಮಾಡುತ್ತಿರುವ ಖಚಿತ ಮಾಹಿತಿ ಅಧರಿಸಿ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾನೆ. ಬಂಧಿತ ಬುದ್ಧರಾಮ್ ನಿಂದ ಲಕ್ಷಾಂತರ ಮೌಲ್ಯದ ಅಫೀಮು ವಶಪಡಿಸಿಕೊಂಡಿದ್ದಾರೆ.

Recommended Video

Virat Kohli ನಿನ್ನೆ ಪಂದ್ಯದಲ್ಲಿ ಹೊಡೆದ ಸೂಪರ್ ಶಾಟ್ ಇದು | Oneindia Kannada

English summary
Bengaluru Crime Roundup(25 September 2021) Murder accused was arrested by Annapurneswari nagara police who murdered his wife brutally: Drug peddler was arrested by Halasuru police know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X