Get Updates
Get notified of breaking news, exclusive insights, and must-see stories!

ಕ್ರೈಂ ರೌಂಡಪ್: ಅನೈತಿಕ ಸಂಬಂಧ: ನಡು ರಸ್ತೆಯಲ್ಲಿ ಮಹಿಳೆ ಬರ್ಬರ ಹತ್ಯೆ

ಬೆಂಗಳೂರು, ಡಿ. 28: ಕೋಳಿ ವ್ಯಾಪಾರಿಯನ್ನು ಬಿಡದ ದರೋಡೆಕೋರರು. ಕೋಳಿ ವ್ಯಾಪಾರಿಯನ್ನು ಅಡ್ಡಗಟ್ಟಿ ಹಣ ಸುಲಿಗೆ ಮಾಡಿದ ದರೋಡೆಕೋರರು. ಅನೈತಿಕ ಸಂಬಂಧದ ವಿಚಾರವಾಗಿ ನಡು ರಸ್ತೆಯಲ್ಲಿ ಮಹಿಳೆ ಬರ್ಬರ ಹತ್ಯೆ. ಚರಸ್ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಕೇರಳ ಮೂಲದ ಡ್ರಗ್ ಪೆಡ್ಲರ್ ಬಂಧನ. ಇದು ಬೆಂಗಳೂರು ಅಪರಾಧ ಲೋಕದ ಚಿತ್ರಣ.

ಕೋಳಿ ವ್ಯಾಪಾರಿ ದರೋಡೆ:

ಕೋಳಿ ಸಗಟು ವ್ಯಾಪಾರ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ವ್ಯಾಪಾರಿಯನ್ನು ಅಡ್ಡಗಟ್ಟಿರುವ ದುಷ್ಕರ್ಮಿಗಳು 1.30 ಲಕ್ಷ ರೂ. ಹಣ ದೋಚಿ ಪರಾರಿಯಾಗಿದ್ದಾರೆ. ತಮಿಳು ನಾಡುದ ಮೂಲದ ಕೋತಪ್ಪ ಕೋಳಿ ಸಗಟು ವಹಿವಾಟು ನಡೆಸುತ್ತಾರೆ. ಸೋಮವಾರ ಕೋಳಿ ಸಗಟು ಮಾರಾಟ ಮಾಡಿದ್ದ ಕೋತಪ್ಪ ತನ್ನ ಇಬ್ಬರು ಕೆಲಸಗಾರರ ಜತೆ ಮನಿ ಲಾರಿಯಲ್ಲಿ ಸುಮ್ಮನಹಳ್ಳಿ ಕಡೆ ತೆರಳುತ್ತಿದ್ದರು. ಸುಮ್ಮನಹಳ್ಳಿ ಜಂಕ್ಷನ್ ಸಮೀಪ ಬೈಕ್‌ನಲ್ಲಿ ಬಂದು ಲಾರಿ ಅಡ್ಡ ಹಾಕಿದ ದರೋಡೆಕೋರರು, ಕೋತೆಪ್ಪ ಬಳಿ ಇದ್ದ 1.30 ಲಕ್ಷ ರೂ. ಹಣ ಕಸಿದುಕೊಂಡು ಪರಾರಿಯಾಗಿದ್ದಾರೆ. ಈ ಕುರಿತು ಕೋತೆಪ್ಪ ನೀಡಿದ ದೂರಿನ ಮೇರೆಗೆ ಕಾಮಾಕ್ಷಿಪಾಳ್ಯ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ಕೋತೆಪ್ಪ ಹಣ ಸಂಗ್ರಹಿಸಿ ವಾಪಸು ಹೋಗುತ್ತಿರುವುದನ್ನು ನೋಡಿ ಅವರನ್ನು ಹಿಂಬಾಲಿಸಿದ್ದಾರೆ. ಯಾರೂ ಇಲ್ಲದ ವೇಳೆ ಸುಮ್ಮನಹಳ್ಳಿ ಸಮೀಪ ಲಾರಿಯನ್ನು ಅಡ್ಡಗಟ್ಟಿ ದೋಚಿ ಎಸ್ಕೇಪ್ ಆಗಿದ್ದಾರೆ. ಸಿಸಿಟಿವಿ ದೃಶ್ಯ ಆಧರಿಸಿ ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.

Bengaluru Crime News Roundup (28 Dec 2021): Woman Murdered over Illicit Relationship

ಮಹಿಳೆ ಬರ್ಬರ ಹತ್ಯೆ:

ಅನೈತಿಕ ಸಂಬಂಧ ಹಿನ್ನೆಲೆಯಲ್ಲಿ ಮಹಿಳೆಯನ್ನು ನಡು ರಸ್ತೆಯಲ್ಲಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಹೊಸೂರು ರಸ್ತೆಯಲ್ಲಿ ಸೋಮವಾರ ರಾತ್ರಿ ನಡೆದಿದೆ.

ಅರ್ಚನಾ ರೆಡ್ಡಿ ಕೊಲೆಯಾದ ಮಹಿಳೆ. ಆನೇಕಲ್ ತಾಲೂಕಿನ ಜಿಗಣಿ ನಿವಾಸಿಯಾಗಿದ್ದ ಅರ್ಚನಾ ರೆಡ್ಡಿ, ಎಚ್‌ಎಸ್ಆರ್ ಲೇಔಟ್ ಮನೆಗೆ ತೆರಳಿದ್ದರು. ಈ ವೇಳೆ ಹೊಸೂರು ರೋಡ್ ಜಂಕ್ಷನ್ ಸಮೀಪ ಕಾರು ನಿಲ್ಲಿಸಿ ಇಬ್ಬರು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಸಂತೋಷ್ ಮತ್ತು ನವೀನ್ ಎಂಬುವರು ಕೊಲೆ ಮಾಡಿದ್ದಾರೆ ಎಂದು ಶಂಕಿಸಲಾಗಿದೆ. ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

Bengaluru Crime News Roundup (28 Dec 2021): Woman Murdered over Illicit Relationship

ಚರಸ್ ಮಾರಾಟ ಮಾಡುತ್ತಿದ್ದ ಡ್ರಗ್ ಪೆಡ್ಲರ್ ಸೆರೆ:

ಬೆಂಗಳೂರಿನ ಎಚ್‌ಆರ್‌ಬಿಆರ್ ಬಡಾವಣೆಯಲ್ಲಿ ಸಾರ್ವಜನಿಕರಿಗೆ ಚರಸ್ ಮಾರಾಟ ಮಾಡುತ್ತಿದ್ದ ಕೇರಳ ಮೂಲದ ಡ್ರಗ್ ಪೆಡ್ಲರ್‌ನ್ನು ಗೋವಿಂದಪುರ ಪೊಲೀಸರು ಬಂಧಿಸಿದ್ದಾರೆ. ಜಾರ್ಜ್ ಮ್ಯಾಥ್ಯೂ ಬಂಧಿತ ಆರೋಪಿ. ಈತನಿಂದ 5.8 ಲಕ್ಷ ರೂ. ಮೌಲ್ಯದ ಚರಸ್ ಮತ್ತು ಗಾಂಜಾ ವಶಪಡಿಸಿಕೊಂಡಿದ್ದಾರೆ.

Bengaluru Crime News Roundup (28 Dec 2021): Woman Murdered over Illicit Relationship

ಹಿಮಾಚಲ ಪ್ರದೇಶದಿಂದ ಈತ ಮಾದಕ ವಸ್ತುವನ್ನು ತರಿಸಿದ್ದು, ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಹೋಟೆಲ್‌ನಲ್ಲಿ ತಂಗುವ ಗಿರಾಕಿಗಳಿಗೆ ಪೂರೈಕೆ ಮಾಡುತ್ತಿದ್ದ ಎನ್ನಲಾಗಿದೆ. ಈತ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಗೋವಿಂದಪುರ ಪೊಲೀಸರು ದಾಳಿ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈತನ ಬಳಿಯಿದ್ದ ಮೊಬೈಲ್ ವಶಪಡಿಸಿಕೊಂಡಿದ್ದು, ಮ್ಯಾಥ್ಯೂನಿಂದ ಡ್ರಗ್ ತರಿಸಿಕೊಂಡವರ ವಿವರ ಪಡೆದು ತನಿಖೆ ನಡೆಸಲಾಗುತ್ತಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+