ಬೆಂಗಳೂರಲ್ಲಿ ಕೋವಿಡ್ ಚೇತರಿಕೆ ಪ್ರಮಾಣ ಶೇ 95ರಷ್ಟು

ಬೆಂಗಳೂರು, ನವೆಂಬರ್ 27: ಬೆಂಗಳೂರು ನಗರದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗುತ್ತಿದೆ. ಆಗಸ್ಟ್‌ ತಿಂಗಳಿನಲ್ಲಿ ಸಕ್ರಿಯ ಕಂಟೈನ್ಮೆಂಟ್ ಝೋನ್‌ಗಳ ಸಂಖ್ಯೆ 40,563 ಆಗಿತ್ತು, ಈಗ ಕೇವಲ 2.

ಬಿಬಿಎಂಪಿ ವಿಶೇಷ ಆಯುಕ್ತ (ಆರೋಗ್ಯ) ರಾಜೇಂದ್ರ ಚೋಳನ್ ಈ ಕುರಿತು ಮಾಹಿತಿ ನೀಡಿದ್ದಾರೆ. ನಗರದಲ್ಲಿನ ಗುಣಮುಖ ಪ್ರಮಾಣ ಶೇ 95ರಷ್ಟಿದ್ದು, ಉದ್ಯಾನ ನಗರಿ ಜನರಿಗೆ ನೆಮ್ಮದಿ ತಂದಿದೆ.

ನವೆಂಬರ್ 23ರ ತನಕ ಬೆಂಗಳೂರು ನಗರದಲ್ಲಿ 3,65,317 ಕೋವಿಡ್ ಪ್ರಕರಣಗಳು ದಾಖಲಾಗಿವೆ. 3,43,169 ಜನರು ಗುಣಮುಖರಾಗಿದ್ದಾರೆ. ಮೃತಪಟ್ಟವರ ಸಂಖ್ಯೆ 4091. ಸದ್ಯ ಮರಣ ಪ್ರಮಾಣ ಶೇ 1.1ಆಗಿದೆ.

COVID Recovery Rate Is Over 95 Per Cent

ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಿನಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ನಗರದಲ್ಲಿ ಹೆಚ್ಚಿತ್ತು. ದೇಶದ ಇತರ ನಗರಗಳಿಗೆ ಹೋಲಿಕೆ ಮಾಡಿದರೆ ಬೆಂಗಳೂರು ನಗರವೇ ಮೊದಲ ಸ್ಥಾನದಲ್ಲಿತ್ತು. ಕರ್ನಾಟಕದಲ್ಲಿ ಅತಿ ಹೆಚ್ಚು ಸೋಂಕಿತರು ಇರುವ ಪಟ್ಟಿಯಲ್ಲಿ ಬೆಂಗಳೂರು ಈಗಲೂ ಟಾಪ್.

ನವೆಂಬರ್ 26ರಂದು ಬೆಂಗಳೂರು ನಗರದಲ್ಲಿ 844 ಹೊಸ ಪ್ರಕರಣಗಳು ದಾಖಲಾಗಿವೆ. ಒಟ್ಟು ಸೋಂಕಿತರ ಸಂಖ್ಯೆ 3,67,077. ಸಕ್ರಿಯ ಪ್ರಕರಣಗಳು 18,830. ಒಟ್ಟು ಮೃತಪಟ್ಟವರು 4108.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+