ಬೆಂಗಳೂರಲ್ಲಿ ಕೋವಿಡ್; ಹೊಸ ಕೇಸ್‌ಗಿಂತ ಗುಣಮುಖ ಸಂಖ್ಯೆ ಹೆಚ್ಚು

ಬೆಂಗಳೂರು, ಆಗಸ್ಟ್ 19: ಕರ್ನಾಟಕದಲ್ಲಿ ಅತಿ ಹೆಚ್ಚು ಕೋವಿಡ್ ಸೋಂಕಿತರು ಇರುವ ಜಿಲ್ಲೆ ಬೆಂಗಳೂರು. ಬೆಂಗಳೂರು ನಗರದಲ್ಲಿ ಒಟ್ಟು ಕೋವಿಡ್ ಸೋಂಕಿತರ ಸಂಖ್ಯೆ 94,106ಕ್ಕೆ ಏರಿಕೆಯಾಗಿದೆ.

Recommended Video

      ಹೇಳಿದ ಕೆಲಸವನ್ನು ಮೊದಲು ಮಾಡಿ ಎಂದ್ರು ಸುಧಾಕರ್ | Oneindia Kannada

      ಬೆಂಗಳೂರು ನಗರದ ಜನರಿಗೆ ಶುಭ ಸುದ್ದಿಯೊಂದಿದೆ. ನಗರದಲ್ಲಿ ಕೋವಿಡ್ ಹೊಸ ಪ್ರಕರಣಕ್ಕಿಂತ ಗುಣಮುಖರಾದವರ ಸಂಖ್ಯೆಯೇ ಅಧಿಕವಾಗಿದೆ. ನಗರದಲ್ಲಿ ಮಂಗಳವಾರ 2242 ಹೊಸ ಪ್ರಕರಣಗಳು ದಾಖಲಾಗಿವೆ.

      ಮಂಗಳವಾರ ನಗರದಲ್ಲಿ ವರದಿಯಾದ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ 2242. ಕೋವಿಡ್‌ನಿಂದ ಗುಣಮುಖಗೊಂಡು ಬಿಡುಗಡೆಗೊಂಡವರ ಸಂಖ್ಯೆ 3520.

      COVID Recovery Rate is More Than Fresh Cases In Bengaluru

      ನಗರದಲ್ಲಿ ಇದುವರೆಗೂ ಒಟ್ಟು 59,492 ಜನರು ಕೋವಿಡ್‌ನಿಂದ ಗುಣಮುಖರಾಗಿದ್ದಾರೆ. ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 33,081. 1532 ಜನರು ಇದುವರೆಗೂ ನಗರದಲ್ಲಿ ಮೃತಪಟ್ಟಿದ್ದಾರೆ.

      ಕರ್ನಾಟಕದಲ್ಲಿ ಕೋವಿಡ್ ಪರೀಕ್ಷೆಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಮಂಗಳವಾರ ಒಂದೇ ದಿನ 59,088 ಮಾದರಿಗಳ ಪರೀಕ್ಷೆ ನಡೆಸಲಾಗಿದೆ. 28,867 antigen ಪರೀಕ್ಷೆ ಮಾಡಲಾಗಿದೆ.

      ಕರ್ನಾಟಕದಲ್ಲಿನ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 2,40,948. ಬಳ್ಳಾರಿಯಲ್ಲಿ 15,180, ಬಾಗಲಕೋಟೆಯಲ್ಲಿ 4,485, ಬೆಳಗಾವಿಯಲ್ಲಿ 8360, ಚಿಕ್ಕಬಳ್ಳಾಪುರದಲ್ಲಿ 3019 ಮತ್ತು ಮೈಸೂರಿನಲ್ಲಿ 11,489 ಪ್ರಕರಣಗಳು ದಾಖಲಾಗಿವೆ.

      ರಾಜ್ಯದಲ್ಲೂ ದಾಖಲೆ : ಮಂಗಳವಾರ ಕರ್ನಾಟಕ ರಾಜ್ಯದಲ್ಲಿಯೂ ಹೊಸ ದಾಖಲೆ ನಿರ್ಮಾಣವಾಗಿದೆ. ಹೊಸ ಸೋಂಕಿತರ ಸಂಖ್ಯೆಗಿಂತ ಗುಣಮುಖರಾದವರ ಸಂಖ್ಯೆಯೇ ಅಧಿಕವಾಗಿದೆ. ರಾಜ್ಯದಲ್ಲಿ 7665 ಹೊಸ ಪ್ರಕರಣ ದಾಖಲಾಗಿದೆ. ಗುಣಮುಖಗೊಂಡವರ ಸಂಖ್ಯೆ 8387.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+