2nd Covid booster dose : ಭಾರತ: ಕೊರೊನಾ ಹಿಮ್ಮೆಟ್ಟಿಸಲು 2ನೇ ಬೂಸ್ಟರ್ ಡೋಸ್ ಲಸಿಕೆ ನೀಡಲು ಅನುಮತಿಸಿ: IMA
ನವದೆಹಲಿ, ಡಿಸೆಂಬರ್ 27: ದೇಶಾದ್ಯಂತ ಮತ್ತೆ ಕೊರೊನಾ ಅಲೆಯ ಭೀತಿ ಶುರುವಾಗಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಕೊರೊನಾ ಎರಡನೆ ಬೋಸ್ಟರ್ ಡೋಸ್ ನೀಡಲು ಅನುಮತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ವೈದ್ಯರು ಸಲಹೆ ನೀಡಿದ್ದಾರೆ.
ಸೋಮವಾರ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಆನ್‌ಲೈನ್ ಮೂಲಕ ಭಾರತೀಯ ವೈದ್ಯಕೀಯ ಸಂಘ (ಐಎಂಎ)ದೊಂದಿಗೆ ಕೋವಿಡ್ ಸಂದಿಗ್ಧತೆಯ ತುರ್ತು ಸಭೆ ನಡೆಸಿದರು. ಈ ವೇಳೆ ಮಾತನಾಡಿದ ಐಎಂಎ ರಾಷ್ಟ್ರೀಯ ಅಧ್ಯಕ್ಷ ಡಾ.ಸಹಜಾನಂದ ಪ್ರಸಾದ್ ಸಿಂಗ್ ಅವರು, ಭಾರತದಲ್ಲಿ ಶೇ. 30ರಷ್ಟು ಮಂದಿ ಮಾತ್ರ ಮೊದಲ ಬೂಸ್ಟರ್ ಡೋಸ್ ಸ್ವೀಕರಿಸಿದ್ದಾರೆ. ಸೋಂಕು ನಿಯಂತ್ರಿಸಲು ಮೊದಲು ಮುನ್ನೆಚ್ಚರಿಕಾ ಡೋಸ್ ಪಡೆಯುವುದರ ಜೊತೆಗೆ ಎರಡನೇ ಮುನ್ನೆಚ್ಚರಿಕಾ ಡೋಸ್ ನೀಡಲು ಅನುಮತಿಸುವಂತೆ ಎಂದು ತಿಳಿಸಿದ್ದಾರೆ.
ಜಾಗತಿಕವಾಗಿ ಹೆಚ್ಚುತ್ತಿರುವ ಪ್ರಕರಣಗಳ ಮಧ್ಯೆ, ವಿಶೇಷವಾಗಿ ಚೀನಾ, ಜಪಾನ್, ದಕ್ಷಿಣ ಕೊರಿಯಾ ಮತ್ತು ಥೈಲ್ಯಾಂಡ್‌ನಲ್ಲಿ ಕೋವಿಡ್ -19 ಹೆಚ್ಚು ಪ್ರಕರಣಗಳು ಕಂಡು ಬಂದಿವೆ. ಬೇರೆ ದೇಶಗಳಿಗೆ ಹೋಲಿಕೆ ಮಾಡಿದೆ ಭಾರತದಲ್ಲಿ ಕೋವಿಡ್ ಸಾಂಕ್ರಾಮಿಕದ ಪರಿಸ್ಥಿತಿ ಸಂಪೂರ್ಣವಾಗಿ ವಿಭಿನ್ನವಾಗಿದೆ. ಭಾರತದಲ್ಲಿ 7 ದಿನಗಳ ಅವಧಿಯಲ್ಲಿ ದಾಖಲಾದ ಹೊಸ ಕೋವಿಡ್ ಪ್ರಕರಣಗಳ ಸರಾಸರಿ ಸಂಖ್ಯೆಯು ಕ್ರಮೇಣ ಡಿಸೆಂಬರ್ 1 ರಂದು 300 ಕ್ಕಿಂತ ಕಡಿಮೆ ಇದೆ. ಅದು ಡಿಸೆಂಬರ್ 25ಕ್ಕೆ 163 ಕ್ಕೆ ಮತ್ತಷ್ಟು ಇಳಿಕೆಯಾಗಿದೆ.

ಸಭೆಯಲ್ಲಿ ಕೇಂದ್ರ ಆರೋಗ್ಯ ಸಚಿವರು, ಇನ್ಫೋಡೆಮಿಕ್ ಅನ್ನು ತಡೆಗಟ್ಟುವ ಮತ್ತು ಕೋವಿಡ್ -19 ಕುರಿತು ಅಧಿಕೃತ ಮತ್ತು ಪರಿಶೀಲಿಸಿದ ಮಾಹಿತಿ ಹಂಚಿಕೊಳ್ಳಬೇಕು. ರೋಗದ ವಿವಿಧ ಅಂಶಗಳು ಮತ್ತು ಅದರ ತಡೆಗಟ್ಟುವಿಕೆ ಮತ್ತು ನಿರ್ವಹಣೆಯ ಬಗ್ಗೆ ಸಾರ್ವಜನಿಕರಿಗೆ ಶಿಕ್ಷಣ, ಜಾಗೃತಿ ನೀಡುವಂತೆ ವೈದ್ಯರಿಗೆ ಒತ್ತಾಯಿಸಿದರು. ಕೊರೊನಾ ಹೋರಾಟದಲ್ಲಿ ನೀವೇ ನಮ್ಮ ರಾಯಭಾರಿಗಳು. ನಿಮ್ಮ ಸೇವೆಯನ್ನು ಸರ್ಕಾರ ಗೌರವಿಸುತ್ತದೆ ಎಂದರು.
ಕೋವಿಡ್ ಸದ್ಯದ ಮಾಹಿತಿ ಆಧಾರದಲ್ಲಿ ಪ್ರಸ್ತುತ ಸ್ಥಿತಿ, ಲಸಿಕೆ ಕಾರ್ಯಕ್ರಮ ಮತ್ತು ಸರ್ಕಾರದ ಪ್ರಯತ್ನ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಖಿದೆ. ಕೋವಿಡ್ 'ಪರೀಕ್ಷೆ-ಟ್ರ್ಯಾಕ್-ಟ್ರೀಟ್-ಲಸಿಕೆ ಮತ್ತು ಕೋವಿಡ್-ಸೂಕ್ತ ನಡವಳಿಕೆಯ ಅನುಸರಣೆ' ನೀತಿಯನ್ನು ಅನುಸರಿಸುವ ಜೊತೆಗೆ ಅರ್ಹರಿಗೆ ಕೊರೊನಾ ಮುನ್ನೆಚ್ಚರಿಕೆ ಡೋಸ್ ಲಸಿಕೆ ಪಡೆಯುವಂತೆ ಒತ್ತಾಯಿಸಬೇಕು.
ಮುಖ್ಯವಾಗಿ ಕೋವಿಡ್ ಪ್ರಕರಣಗಳು ತೀವ್ರವಾಗಿ ಉಲ್ಬಣಿಸಿದರೆ ಎದರಿಸಲು ಸನ್ನದ್ಧರಾಗಬೇಕಿದೆ ಎಂದು ವಿವರಿಸಿದರು.

ಭಾರತ: ಸೋಮವಾರ 196 ಹೊಸ ಕೇಸ್ ಪತ್ತೆ
ಐವರು ವಿದೇಶಿ ಪ್ರಜೆಗಳ ಪೈಕಿ ನಾಲ್ವರು ಥೈಲ್ಯಾಂಡ್ ಮತ್ತು ಮ್ಯಾನ್ಮಾರ್ ಮೂಲದ ಒಬ್ಬರಿಗೆ ಡಿಸೆಂಬರ್ 26 ರಂದು ಭಾರತದ ಬಿಹಾರ್‌ಗೆ ಆಗಮಿಸಿದ್ದರು. ಅವರಿಗೆ ಕೋವಿಡ್ ಕೋವಿಡ್ ತಪಾಸಣೆ ನಡೆಸಿದಾಗ ಪಾಸಿಟಿವ್ ಸೋಂಕು ಇರುವುದು ದೃಢವಾಗಿದೆ. ಕಳೆದ ವಾರಾಂತ್ಯದಲ್ಲಿ ಒಟ್ಟು 33 ವಿದೇಶಿಯರನ್ನು ಪರೀಕ್ಷಿಸಲಾಗಿದೆ. ಅದರಲ್ಲಿ ನಾಲ್ವರು ಮಹಿಳೆಯರು ಮತ್ತು ಒಬ್ಬ ಪುರುಷರಿಗೆ ಪಾಸಿಟಿವ್ ಬಂದಿದೆ. 35 ರಿಂದ 75 ವರ್ಷದೊಳಗಿನ ಎಲ್ಲಾ ಸೋಂಕಿತ ವ್ಯಕ್ತಿಗಳ ಸ್ಥಿತಿ ಸ್ಥಿರವಾಗಿದ್ದು, ಅವರನ್ನು ಕ್ವಾರಂಟೈನ್ ಮಾಡಲಾಗಿದೆ.
ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ ಭಾರತದಲ್ಲಿ ಸೋಮವಾರ 196 ಹೊಸ ಕೊರೊನಾ ವೈರಸ್ ಪಾಸಿಟಿವ್ ಪ್ರಕರಣ ಕಂಡು ಬಂದಿದೆ. ಇದರಿಂದ ದೇಶದಲ್ಲಿನ ಸಕ್ರಿಯೆ ಪ್ರಕರಣಗಳ ಸಂಖ್ಯೆ3,428 ಕ್ಕೆ ಏರಿಕೆ ಆಗಿದೆ ಎಂದು ತಿಳಿದು ಬಂದಿದೆ.












Click it and Unblock the Notifications