• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪೊಲೀಸರು ಜಪ್ತಿ ಮಾಡಿದ 35 ಸಾವಿರ ವಾಹನಗಳ ದಂಡದ ಮೊತ್ತ ನೋಡಿ ಗೃಹ ಸಚಿವರೇ ಶಾಕ್!

|

ಬೆಂಗಳೂರು, ಮೇ 29: ಕೋವಿಡ್ 19 ಎರಡನೇ ಅಲೆ ಭೀತಿ ಹಿನ್ನೆಲೆಯಲ್ಲಿ ಕಠಿಣ ಲಾಕ್ ಡೌನ್ ನಿಯಮ ಜಾರಿಗೊಳಿಸಲಾಗಿದೆ. ಲಾಕ್ ಡೌನ್ ನಿಯಮ ಉಲ್ಲಂಘಿಸಿ ಬೀದಿಗೆ ಇಳಿದವರ ವಿರುದ್ಧ ದಂಡಾಸ್ತ್ರ ಪ್ರಯೋಗಿಸಿದ ಪೊಲೀಸರು ಬರೋಬ್ಬರಿ 35905 ಸಾವಿರ ವಾಹನ ಜಪ್ತಿ ಮಾಡಿದ್ದಾರೆ. ಅದರಲ್ಲೂ 32 ಸಾವಿರ ದ್ವಿಚಕ್ರ ವಾಹನ. ಇವುಗಳಿಂದ ಸರಾಸರಿ ದಂಡ ಎಷ್ಟು ಸಂಗ್ರಹವಾಗುತ್ತದೆ. ಈ ದಂಡದ ಮೊತ್ತವನ್ನು ಏನು ಮಾಡುತ್ತಾರೆ ಎಂಬುದರ ಪೂರ್ಣ ವಿವರ ಇಲ್ಲಿದೆ ನೋಡಿ!

25 ಕೋಟಿ ಸಂಗ್ರಹವಾಗುವ ದಂಡದ ಮೊತ್ತ

25 ಕೋಟಿ ಸಂಗ್ರಹವಾಗುವ ದಂಡದ ಮೊತ್ತ

ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಸರ್ಕಾರ ಕೂಡ ಕಠಿಣ ಲಾಕ್ ಡೌನ್ ನಿಯಮ ಜಾರಿಗೊಳಿಸಿತು. ಸಾಮಾಜಿಕ ಅಂತರ ಕಾಪಾಡದ, ಮಾಸ್ಕ್ ಧರಿಸದವರ ವಿರುದ್ಧ ದಂಡಾಸ್ತ್ರ ಪ್ರಯೋಗಿಸಲು ಪೊಲೀಸರಿಗೆ ಸೂಚಿಸಲಾಗಿತ್ತು. ಇನ್ನು ಬೇಕಾಬಿಟ್ಟಿ ರಸ್ತೆಗೆ ಇಳಿಯುವರ ವಾಹನ ಜಪ್ತಿ ಮಾಡಲು ಸೂಚಿಸಲಾಗಿತ್ತು. ಆರಂಭದಲ್ಲಿ ಪೊಲೀಸರು ಲಾಠಿ ಏಟಿನ ಮೂಲಕ ಬುದ್ಧಿ ಹೇಳಲು ಪ್ರಯತ್ನಿಸಿದ್ದರು. ಇದಕ್ಕೆ ಸಾರ್ವಜನಿಕ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ದಂಡಾಸ್ತ್ರ ಪ್ರಯೋಗ ಮಾಡಿದ್ದಾರೆ. ಬೆಂಗಳೂರು ಪೊಲೀಸರು ಕಳೆದ ಒಂದು ತಿಂಗಳಿನಲ್ಲಿ ದಾಖಲಿಸಿರುವ ಪ್ರಕರಣಗಳಿಂದ ಸಂಗ್ರಹವಾಗುವ ದಂಡದ ಮೊತ್ತ ಸರಾಸರಿ 25 ಕೋಟಿ ರೂಪಾಯಿಗೂ ಅಧಿಕವಾಗಲಿದೆ ಎಂದು ಅಂದಾಜಿಸಲಾಗಿದೆ.

35 ಸಾವಿರ ವಾಹನ ಜಪ್ತಿ

35 ಸಾವಿರ ವಾಹನ ಜಪ್ತಿ

ರಾಜಧಾನಿಯಲ್ಲಿ ಬೆಳಗ್ಗೆ 6 ಗಂಟೆಯಿಂದ 10 ಗಂಟೆ ವರೆಗೂ ಅಗತ್ಯ ವಸ್ತುಗಳ ಖರೀದಿ ಹಾಗೂ ಜನರ ಓಡಾಟಕ್ಕೆ ಬೆಂಗಳೂರಿನಲ್ಲಿ ಅವಕಾಶ ಕಲ್ಪಿಸಲಾಗಿದೆ. ಉಳಿದಂತೆ ಅನಾವಶ್ಯಕ ಓಡಾಟಕ್ಕೆ ಅವಕಾಶ ನೀಡಿಲ್ಲ. ಆದರೆ ಬೆಂಗಳೂರಿನಲ್ಲಿ ಜನರು ಅನಾವಶ್ಯಕ ಓಡಾಟ ಮಾಡಲು ಹೋಗಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಲಾಕ್ ಡೌನ್ ನಿಯಮ ಉಲ್ಲಂಘನೆ ಮಾಡಿದ 32,203 ದ್ವಿಚಕ್ರ ವಾಹನಗಳನ್ನು ಬೆಂಗಳೂರು ಪೊಲೀಸರು ಜಪ್ತಿ ಮಾಡಿದ್ದಾರೆ. ಅದರಂತೆ 1678 ಆಟೋಗಳು, ನಾಲ್ಕು ಚಕ್ರದ 2024 ವಾಹನಗಳನ್ನು ಜಪ್ತಿ ಮಾಡಿ ಪೊಲೀಸರು ಕೇಸು ದಾಖಲಿಸಿದ್ದಾರೆ. ಒಟ್ಟಾರೆ 35,905 ವಾಹನಗಳನ್ನು ಜಪ್ತಿ ಮಾಡಿದ್ದಾರೆ. ಈ ಎಲ್ಲಾ ವಾಹನಗಳಿಗೆ ನ್ಯಾಯಾಧೀಶರು ದಂಡ ವಿಧಿಸಲಿದ್ದು, ದಂಡದ ಮೊತ್ತವನ್ನು ಪಾವತಿಸಿ ವಾಹನ ಪಡೆಯಬೇಕು. ಪ್ರತಿ ವಾಹನಕ್ಕೆ ಸರಾಸರಿ 5 ಸಾವಿರ ದಂಡ ವಿಧಿಸಿದರೂ ಜಪ್ತಿಯಾದ ವಾಹನಗಳ ಬಿಡುಗಡೆಯಿಂದಲೇ ಬೆಂಗಳೂರು ಪೊಲೀಸರ ಖಜಾನೆಗೆ 17 ಕೋಟಿ ರೂ. ತುಂಬಲಿದೆ. ಗೃಹ ಸಚಿವರು ಹೇಳುವ ಪ್ರಕಾರ ಇನ್ನೂ ಒಂದು ತಿಂಗಳು ಲಾಕ್ ಡೌನ್ ವಿಸ್ತರಣೆ ಮಾಡುವ ಸುಳಿವು ನೀಡಿದ್ದಾರೆ. ಆಗೇನಾದರೂ ಆದರೆ, ಬರೋಬ್ಬರಿ ಪೊಲೀಸರು ಜಪ್ತಿ ಮಾಡುವ ವಾಹನ ಹಾಗೂ ವಿಧಿಸುವ ದಂಡದ ಮೊತ್ತ 50 ಕೋಟಿ ರೂ. ಆದರೂ ಅಚ್ಚರಿ ಪಡಬೇಕಿಲ್ಲ.

ಮಾಸ್ಕ್ ಹಾಕದವರಿಂದ 3.5 ಕೋಟಿ ದಂಡ:

ಮಾಸ್ಕ್ ಹಾಕದವರಿಂದ 3.5 ಕೋಟಿ ದಂಡ:

ದಂಡ ಹಾಕುವ ಮೂಲಕವೇ ಜನರನ್ನು ನಿಯಂತ್ರಣ ಮಾಡುತ್ತೇವೆ ಎಂದು ನಿರ್ಧರಿಸಿರುವ ಬೆಂಗಳೂರು ಪೊಲೀಸರು ಮುಖಕ್ಕೆ ಮಾಸ್ಕ್ ಧರಿಸದ 2.62 ಲಕ್ಷ ಮಂದಿಗೆ ದಂಡ ವಿಧಿಸಿದ್ದಾರೆ. ಇದರಿಂದ 3.31 ಕೋಟಿ ರೂ. ದಂಡ ವಸೂಲಿ ಮಾಡಿದ್ದಾರೆ. ಸಾಮಾನ್ಯವಾಗಿ ಎಲ್ಲರೂ ಮಾಸ್ಕ್ ಧರಿಸಿದ್ದಾರೆ. ಆದರೆ, ಕೆಲವರು ಧರಿಸಿದರೂ ಅದನ್ನು ಮೂಗಿಗೆ ಹಾಕುವ ಬದಲು ಗಡ್ಡಕ್ಕೆ ಹಾಕಿ ಸಿಕ್ಕಿಬಿದ್ದಿದ್ದಾರೆ. ಇನ್ನು ಪ್ರತಿ ಪೊಲೀಸ್ ಠಾಣೆಗೂ ಇಂತಿಷ್ಟು ಕೇಸು ದಾಖಲಿಸುವ ಟಾರ್ಗೆಟ್ ನೀಡಲಾಗಿತ್ತು ಎಂಬ ಮಾತು ಕೇಳಿ ಬರುತ್ತಿದೆ. ಅಂತೂ ಎರಡೂವರೆ ಲಕ್ಷ ಮಂದಿಗೆ ಮಾಸ್ಕ್ ಧರಿಸದ ಕಾರಣಕ್ಕೆ ದಂಡ ವಿಧಿಸಿ ಕೋಟ್ಯಂತರ ರೂಪಾಯಿ ಸಂಗ್ರಹಿಸಿ ಸರ್ಕಾರದ ಖಜಾನೆ ತುಂಬಿಸಿದ್ದಾರೆ.

  ಇದು ಟೀಂ ಇಂಡಿಯಾ ತರ ಕಾಣ್ತಾ ಇಲ್ಲ ಎಂದ ಇಂಗ್ಲೆಂಡ್ ಕ್ರಿಕೆಟರ್ | Oneindia Kannada
  ಸಾಮಾಜಿಕ ಅಂತರಕ್ಕೂ ದಂಡ ಬಿತ್ತು

  ಸಾಮಾಜಿಕ ಅಂತರಕ್ಕೂ ದಂಡ ಬಿತ್ತು

  ಇನ್ನು ಸಾಮಾಜಿಕ ಅಂತರ ಕಾಪಾಡಲಿಲ್ಲ ಎಂಬ ಕಾರಣಕ್ಕೆ 24,305 ಮಂದಿಗೆ ದಂಡ ವಿಧಿಸಲಾಗಿದೆ. ಇದರಿಂದಲೂ ಬರೋಬ್ಬರಿ 58 ಲಕ್ಷ ರೂ. ದಂಡವನ್ನು ಬೆಂಗಳೂರು ನಗರ ಪೊಲೀಸರು ಸಂಗ್ರಹಿಸಿದ್ದಾರೆ. ಇನ್ನೂ ಒಟ್ಟಾರೆ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಉಲ್ಲಂಘನೆ ಪ್ರಕರಣ ಒಗ್ಗೂಡಿಸಿ ಹೇಳುವುದಾದರೆ 3.91 ಕೋಟಿ ರೂಪಾಯಿ ದಂಡವನ್ನು ವಸೂಲಿ ಮಾಡಲಾಗಿದೆ. ಇನ್ನು ಜಪ್ತಿಯಾಗಿರುವ ವಾಹನಗಳಿಂದ ಸಂಗ್ರಹವಾಗುವ ದಂಡದ ಮೊತ್ತವನ್ನು ಒಗ್ಗೂಡಿಸಿದರೆ ಬರೋಬ್ಬರಿ 25 ಕೋಟಿ ದಾಟುವ ಸಾಧ್ಯೆಯಿದೆ. ಇಷ್ಟು ಪ್ರಮಾಣದ ದಂಡದ ಮೊತ್ತ ಸಂಗ್ರಹ ಅಗಿರುವ ಅಂಕಿ ಅಂಶಗಳನ್ನು ನೋಡಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರೇ ಶಾಕ್ ಆಗಿದ್ದಾರೆ. ಮಾತ್ರವಲ್ಲ, ಕೊರೊನಾ ನಿಯಂತ್ರಣಕ್ಕೆ ಬರುವ ವರೆಗೂ ಕಠಿಣ ಲಾಕ್ ಡೌನ್ ನಿಯಮ ಜಾರಿ ಮಾಡುವಂತೆ ನಗರ ಪೊಲೀಸ್ ಆಯುಕ್ತರಿಗೆ ಸೂಚಿಸಿದ್ದಾರೆ.

  English summary
  35 Thousands of vehicles seized by Bangalore Police for violating lockdown rules.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X