ರಾಜ್ಯದಲ್ಲಿ ಮಾಸ್ಕ್‌ಗಳನ್ನು ವಿಲೇವಾರಿ ಮಾಡುವುದೇ ದೊಡ್ಡ ಸಮಸ್ಯೆ
ಬೆಂಗಳೂರು, ಜುಲೈ 12: ರಾಜ್ಯದಲ್ಲಿ ಮಾಸ್ಕ್‌ಗಳನ್ನು ವಿಲೇವಾರಿ ಮಾಡುವುದೇ ಬಹುದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.
ಕೋವಿಡ್ 19 ವೈರಸ್‌ಗೆ ಸಂಬಂಧಿಸಿದಂತೆ ಎಲ್ಲೆಡೆ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದ್ದರೂ ಅದರ ಉಲ್ಲಂಘನೆಯೂ ಅಷ್ಟೇ ವೇಗವಾಗಿ ನಡೆಯುತ್ತಿರುವುದು ಮಾತ್ರ ವಿಪರ್ಯಾಸವಾಗಿ ಪರಿಣಮಿಸಿದೆ.
ಕೊರೊನಾ ಸೋಂಕಿನಿಂದಾಗಿ ಮಾಸ್ಕ್ ಧರಿಸುವವರ ಸಂಖ್ಯೆ ಹೆಚ್ಚಳವಾಗಿದ್ದು, ಅದರ ವಿಲೇವಾರಿಯೂ ಕಷ್ಟಕರವಾಗಿ ಪರಿಣಮಿಸಿದೆ. ಮಾಸ್ಕ್‌ಗಳನ್ನು ಸಾರ್ವಜನಿಕರು ಎಲ್ಲೆಂದರಲ್ಲಿ ಬಿಸಾಡುತ್ತಿದ್ದು, ವಿಲೇವಾರಿ ಕಷ್ಟವಾಗುತ್ತಿದೆ. ಬಳಸಿರುವ ಮಾಸ್ಕ್‌ನ್ನು ಡಸ್ಟ್‌ಬಿನ್ ಒಳಗೆ ಪೇಪರ್ ಕಟ್ಟಿ ಬಿಸಾಡಬೇಕು, ಎಲ್ಲರೂ ಇದನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಉತ್ತಮ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳುತ್ತಾರೆ.

ಮಾಸ್ಕ್ ವಿಲೇವಾರಿಗೆ ಬಿಬಿಎಂಪಿ ಘನತ್ಯಾಜ್ಯ ನಿರ್ವಹಣಾ ವಿಂಗ್ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕೈಜೋಡಿಸಿದೆ.
ಗಾರ್ಮೆಂಟ್ ಫ್ಯಾಕ್ಟರಿ ಸಿಬ್ಬಂದಿಗೆ ಮಾಸ್ಕ್ ಧರಿಸುವಿಕೆ ಮತ್ತು ವಿಲೇವಾರಿ ಕುರಿತು ಜನರಲ್ಲಿ ಜಾಗೃತಿ ಮೂಡಿಸುವಂತೆ ಮಾಲಿನ್ಯ ನಿಯಂತ್ರಣ ಮಂಡಳಿ ಕೇಳಿಕೊಂಡಿದೆ.
ಮಾಲಿನ್ಯ ನಿಯಂತ್ರಣ ಮಂಡಳಿ ಕಾರ್ಯದರ್ಶಿ ಶ್ರೀನಿವಾಸುಲು ಹೇಳುವ ಪ್ರಕಾರ " ಮಾಸ್ಕ್ ಕತ್ತರಿಸಿ 72 ಗಂಟೆಗಳ ಕಾಲ ಹಾಗೆಯೇ ಇಡಿ ಬಳಿಕ ಅದನ್ನು ಡಸ್ಟ್‌ಬಿನ್‌ಗೆ ಹಾಕಿ, ಬಟ್ಟೆ ಮಾಸ್ಕ್ ಆಗಿದ್ದರೆ, ಕರವಸ್ತ್ರದ ರೀತಿಯಲ್ಲಿ ಡಸ್ಟ್‌ಬಿನ್‌ಗೆ ಹಾಕಬಹುದಾಗಿದೆ''.
ಒಂದೊಮ್ಮೆ ಕೊರೊನಾ ಸೋಂಕಿತರು ಧರಿಸಿದ ಮಾಸ್ಕ್ ಆಗಿದ್ದರೆ, ದಯವಿಟ್ಟು ಉಳಿದ ಕಸದ ಜತೆಗೆ ಮಾಸ್ಕ್ ಹಾಕಬೇಡಿ, ಅದನ್ನು ಸೈಂಟಿಫಿಕ್ ಆಗಿ ವಿಲೇವಾರಿ ಮಾಡಬೇಕಾಗುತ್ತದೆ.












Click it and Unblock the Notifications