ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು: ಸೈಕ್ಲಿಂಗ್ ಉತ್ತೇಜಿಸಲು ಸೈಕಲ್ ಎಣಿಸುವ ಸಾಧನ ಅಳವಡಿಕೆ

|
Google Oneindia Kannada News

ಬೆಂಗಳೂರು, ಮೇ 05: ಬೆಂಗಳೂರು ನಗರದಲ್ಲಿ ಸೈಕ್ಲಿಂಗ್ ಉತ್ತೇಜಿಸುವ ಉದ್ದೇಶದಿಂದ ದೊಡ್ಡನೆಕ್ಕುಂದಿ ಔಟರ್ ರಿಂಗ್ ರೋಡ್‌ನ ಸಿಗ್ನಲ್ ಬಳಿ ಸೈಕಲ್‌ಗಳನ್ನು ಎಣಿಸುವಂತಹ ಡಿಜಿಟಲ್ ಸಾಧನವನ್ನು ಅಳವಡಿಸಲಾಗಿದೆ. ಇಂತಹ ಒಂದು ಡಿಜಿಟಲ್ ಸಾಧನವನ್ನು ಅಳವಡಿಸಿರುವುದು ಬೆಂಗಳೂರು ನಗರದಲ್ಲಿ ದೇಶದಲ್ಲಿ ಮೊದಲ ಲೈವ್ ಈ ಡಿಜಿಟಲ್ ಸಾಧನವು ರಸ್ತೆಯಲ್ಲಿ ಚಲಿಸುವ ಸೈಕ್ಲಂಗ್‌ಗಳನ್ನು ಏಣಿಸಿ ಸೈಕಲ್‌ಗಳ ಸಂಖ್ಯೆಯನ್ನು ತೋರಿಸುತ್ತದೆ. ಇದರಿಂದ ಏಷ್ಟು ಸೈಕಲ್ ರಸ್ತೆಯಲ್ಲಿ ಚಲಿಸುತ್ತದೆ ಎಂಬ ಮಾಹಿತಿ ನೀಡುತ್ತದೆ.

ಬೆಂಗಳೂರು ಎಂಬ ಮಹಾನಗರಿಯಲ್ಲಿ ಟ್ರಾಫಿಕ್, ನಮ್ಮ ಮೆಟ್ರೋ ಪ್ರಯಾಣ ಹಾಗೂ ಬಿಎಂಟಿಸಿ ಬಸ್ ಸಾರಿಗೆ ಇವುಗಳ ಮಧ್ಯ ಸಾರ್ವಜನಿಕ ಜೀವನವು ಹೊಂದಿಕೊಂಡಿದೆ. ಆದರೆ, ನಗರದ ರಸ್ತೆಗಳಲ್ಲಿ ಇನ್ನು ವಿಶೇಷ ಎಂದರೆ ಸೈಕ್ಲಿಂಗ್. ಇದು ಬೆಂಗಳೂರು ನಗರದಲ್ಲಿ ವಿಶೇಷ ಯಾಕೆ ಎಂದರೆ ಸೈಕಲ್ ಓಡಿಸಲು ಸಾಮರ್ಥ್ಯವಿರಬೇಕು ಹಾಗೂ ರೂಡಿ ಮಾಡಿಕೊಂಡಿರಬೇಕು. ಜೊತೆಗೆ ಈ ಮಹಾನಗರಿಯಲ್ಲಿ ಆರೋಗ್ಯಯುತ ಜೀವವನ್ನು ಸಾಗಿಸಲು ಸೈಕ್ಲಿಂಗ್ ಅನಿವಾರ್ಯವಾಗಿದೆ.

ಹೀಗೆ ಬೆಂಗಳೂರು ಸೈಕ್ಲಿಂಗ್‌ನ್ನು ಉತ್ತೇಜಿಸುವ ಸಲುವಾಗಿ ಬೆಂಗಳೂರು ನಗರದ ದೊಡ್ಡನಕುಂಡಿಯ ಔಟರ್ ರಿಂಗ್ ರೋಡ್‌ನ ಸಿಗ್ನಲ್ ಬಳಿ ಸಿಗ್ನಲ್ ಸೂಚಿಸುವ ಮಾದರಿಯಲ್ಲಿ ಸೈಕ್ಲಿಂಗ್ ಕೌಟಿಂಗ್ ಮಾಡುವ ಡಿಜಿಟಲ್ ಸಾಧನವನ್ನು ಅಳವಡಿಸಲಾಗಿದ್ದು, ಇಂತಹ ಒಂದು ಡಿಜಿಟಲ್ ಸಾಧನವನ್ನು ಅಳವಡಿಸಲಾಗಿದೆ. ದೇಶದಲ್ಲಿ ಮೊದಲ ಲೈವ್ ಡಿಜಿಟಲ್ ಸಾಧನವು ರಸ್ತೆಯಲ್ಲಿ ಚಲಿಸುವ ಸೈಕ್ಲಂಗ್‌ಗಳನ್ನು ಏಣಿಸಿ ಸೈಕಲ್‌ಗಳ ಸಂಖ್ಯೆಯನ್ನು ತೋರಿಸುತ್ತದೆ. ಇದರಿಂದ ಏಷ್ಟು ಸೈಕಲ್ ರಸ್ತೆಯಲ್ಲಿ ಚಲಿಸುತ್ತದೆ ಎಂಬ ಮಾಹಿತಿ ನೀಡುತ್ತದೆ. ಈ ಹೊಸ ಆಲೋಚನೆಯು ಸೈಕ್ಲಿಂಗ್‌ನ್ನು ಉತ್ತೇಜಿಸುವ ಸಲುವಾಗಿ ಹಾಗೂ ನಗರದ ಸಾರ್ವಜನಿಕರು ಹಾಗೂ ಯುವ ಜನತೆಗೆ ಸೈಕಲ್ ಬಳಸಲು ಮುಂದೆ ಬರಲು ಇಂತಹ ಹೊಸ ಪ್ರಯೋಗ ಮಾಡಲಾಗಿದೆ.

Bengaluru: Country’s First Live Cycling Counter in the City

ಎರಡು ದಿಕ್ಕುಗಳಲ್ಲಿ ಚಲಿಸುವ ಸೈಕಲ್‌ಗಳನ್ನು ಏಣಿಕೆ ಮಾಡುವ ಔಟರ್ ರಿಂಗ್ ರೋಡ್‌ನಲ್ಲಿ ಅಳವಡಿಸಿರುವ ಈ ಸಾಧನವು ಪ್ರಯಾಣಿಸುವ ಪ್ರಯಾಣಿಕರಿಗೆ ಹಾಗೂ ಸಾರ್ವಜನಿಕರಿಗೆ ಸರಳವಾಗಿ ಕಣ್ಣಿಗೆ ಕಾಣುವ ಹಾಗೆ ಈ ಸಾಧನವನ್ನು ಅಳವಡಿಸಲಾಗಿದೆ. ನಗರ ಭೂ ಸಾರಿಗೆ ನಿರ್ದೇಶನಾಲಯವು (DULT) ಸಸ್ಟೆನಬಲ್ ಮೊಬಿಲಿಟಿ ಅಕಾರ್ಡ್ಸ್ (SuMA) ಉಪಕ್ರಮದ ಅಡಿಯಲ್ಲಿ ಮತ್ತು ಸೆನ್ಸಿಂಗ್ ಲೋಕಲ್ ಸಹಾಯದಿಂದ ಸ್ಥಾಪಿಸಲಾದ ದೇಶದ ಮೊದಲ ಕೃತಕ ಬುದ್ಧಿಮತ್ತೆ ಮತ್ತು ಸಂವೇದಕ ಆಧಾರಿತ ಬೈಸಿಕಲ್ (ಸೈಕ್ಲಿಂಗ್) ಕೌಂಟರ್ ಇದಾಗಿದೆ.

DULTನ ಕಮಿಷನರ್ ಆಗಿರುವ ವಿ. ಮಂಜುಳಾ ಅವರು ಈ ಕುರಿತು ಮಾತನಾಡಿ, "ಈ ಬೈಸಿಕಲ್ ಕೌಂಟರ್ ಯಾವುದೇ ನಿರ್ದಿಷ್ಟ ಸಮಯದಲ್ಲಿ ಕೌಂಟರ್ ಮೂಲಕ ಹಾದುಹೋದ ಸೈಕ್ಲಿಸ್ಟ್‌ಗಳ ಸಂಖ್ಯೆಯನ್ನು ದಾಖಲಿಸುತ್ತದೆ. ಸೈಕಲ್ ಲೇನ್ ಒದಗಿಸಿದರೆ ಜನರು ಸೈಕ್ಲಿಂಗ್ ಮಾಡಲು ಸಿದ್ಧರಿದ್ದಾರೆ ಎಂಬುದನ್ನು ಪ್ರದರ್ಶಿಸುವುದು ಇದರ ಉದ್ದೇಶವಾಗಿದೆ. ಯೋಜನಾ ಉದ್ದೇಶಗಳಿಗಾಗಿ ಸೈಕಲ್ ಲೇನ್‌ಗಳನ್ನು ಬಳಸುವ ಸೈಕ್ಲಿಸ್ಟ್‌ಗಳ ಸಂಖ್ಯೆಯ ಡೇಟಾವನ್ನು ಸಹ ನಾವು ಪಡೆಯುತ್ತೇವೆ," ಎಂದು ತಿಳಿಸಿದರು.

ಈ ಕೌಂಟರ್ ಇತರ ರಸ್ತೆ ಬಳಕೆದಾರರಲ್ಲಿ ಸೈಕಲ್ ಲೇನ್ ಉದ್ದೇಶದ ಬಗ್ಗೆ ಜಾಗೃತಿ ಮೂಡಿಸಲಿದೆ ಸದ್ಯಕ್ಕೆ ಒಂದು ಕೌಂಟರ್ ಸ್ಥಾಪಿಸಲಾಗಿದೆ. ಇನ್ನೆರಡು ಕೌಂಟರ್‌ಗಳನ್ನು ಶೀಘ್ರದಲ್ಲೇ ನಗರದಲ್ಲಿ ಸ್ಥಾಪಿಸಲಾಗುವುದು. ಪ್ರಾಯೋಗಿಕ ಹಂತದ ನಂತರ ಉಪಕ್ರಮವನ್ನು ಹೆಚ್ಚಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಇದು ಕೃತಕ ಬುದ್ಧಿಮತ್ತೆಯನ್ನು ಆಧರಿಸಿದ ಮೊದಲ ಸ್ಥಳೀಯ ಮತ್ತು ನವೀನ ಪರಿಹಾರವಾಗಿದೆ. ಭಾನುವಾರ ಮಧ್ಯಾಹ್ನದಿಂದಲೇ ಕೌಂಟರ್‌ ಕಾರ್ಯಾರಂಭ ಮಾಡಿದೆ ಕಳೆದ ಸೋಮವಾರ ಮತ್ತು ಮಂಗಳವಾರದಂದು ದಿನಕ್ಕೆ ಸರಾಸರಿ 500 ಸೈಕ್ಲಿಸ್ಟ್‌ಗಳ ಸಂಖ್ಯೆ ದಾಖಲಾಗಿದೆ ಎಂದರು.

"ಸಾಫ್ಟ್‌ವೇರ್ ಡೆವಲಪರ್ ನಿಹಾರ್ ಥಕ್ಕರ್ ಅವರು ಟ್ವೀಟ್ ಈ ಲೈವ್ ಸೈಕ್ಲಿಂಗ್ ಕುರಿತು ಮಾಡಿದ್ದು, "ನಗರದ ಮೊದಲ #LiveBicycleCounterನ್ನು ನಿರ್ಮಿಸಲು ಮತ್ತು ಸ್ಥಾಪಿಸಲು ತುಂಬಾ ಉತ್ಸುಕವಾಗಿದೆ" ಎಂದಿದ್ದಾರೆ. ದೊಡ್ಡನೆಕುಂಡಿಯಲ್ಲಿ ಔಟ್ ರಿಂಗ್ ರೋಡ್ (ORR)ನ ಬಳಿ ಸೈಕಲ್ ಲೇನ್ ಪಕ್ಕದಲ್ಲಿದೆ. ಇದು ಬಳಕೆಯ ಡೇಟಾವನ್ನು ಸಂಗ್ರಹಿಸಲು ಸಹಾಯ ಮಾಡುತ್ತದೆ. ಸೈಕಲ್ ಲೇನ್‌ನ ಪ್ರಭಾವವನ್ನು ಹೆಚ್ಚು ಗೋಚರಿಸುವಂತೆ ಮಾಡುತ್ತದೆ ಮತ್ತು ಸೈಕ್ಲಿಂಗ್ ಮಾಡುವ ಸಾರ್ವಜನಿಕರಿಗೆ ಹಾಗೂ ಯುವ ಜನತೆಗೆ ಪ್ರೋತ್ಸಾಹಿಸಲು ಸಹಕಾರಿಯಾದೆ,'' ಎಂದು ಅವರು ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

Recommended Video

Gayle ದಾಖಲೆ ಮುರಿದ David Warner | Oneindia Kannada

English summary
Cycling Digital Device is Installed in Single Signal mode near Signal on Outer Ring Road, Bengaluru
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X