ಕೊರೊನಾ ಭಯ: ಇಂದಿನಿಂದ ಲಾಲ್‌ಬಾಗ್‌ಗೆ ಪ್ರವೇಶ ನಿರ್ಬಂಧ
ಬೆಂಗಳೂರು, ಮಾರ್ಚ್ 21: ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಇಂದಿನಿಂದ ಲಾಲ್‌ಬಾಗ್ ಪ್ರವೇಶವನ್ನು ನಿಷೇಧಿಸಲಾಗುತ್ತಿದೆ.
ಶನಿವಾರದಿಂದ ವಾಯುವಿಹಾರಿಗಳು ಮತ್ತು ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.
ಆರೋಗ್ಯ ಇಲಾಖೆ ಅಧಿಕಾರಿಗಳ ಸೂಚನೆ ಮೇರೆಗೆ ಲಾಲ್‌ಬಾಗ್ ವೀಕ್ಷಕರಿಗೆ , ವಾಯುವಿಹಾರಿಗಳಿಗೆ ಪ್ರವೇಶವನ್ನು ನಿಷೇಧಿಸಲು ಆದೇಶಿಸಲಾಗಿದೆ.

ಶುಕ್ರವಾರ ಮಧ್ಯರಾತ್ರಿಯ ವೇಳೆಗೆ ಲಾಲ್‌ಬಾಗ್‌ನ ಎಲ್ಲಾ ಪ್ರವೇಶ ದ್ವಾರವನ್ನು ಮುಚ್ಚಲಾಗಿದೆ. ಈ ಸಂಬಂಧ ಸೂಚನಾ ಫಲಕಗಳನ್ನು ಕೂಡ ಅಳವಡಿಸಲಾಗಿದೆ.
ಲಾಲ್‌ಬಾಗ್‌ಗೆ ನಿತ್ಯ ಸುಮಾರು 7-10 ಸಾವಿರ ಮಂದಿ ಆಗಮಿಸುವ ಹಿನ್ನೆಲೆಯಲ್ಲಿ ಲಾಲ್‌ಬಾಗ್ ಪ್ರವೇಶವನ್ನು ರದ್ದುಪಡಿಸುವಂತೆ ಶುಕ್ರವಾರ ರಾತ್ರಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಸೂಚನೆ ನೀಡಿದ್ದರಿಂದ ತಕ್ಷಣ ಕಾರ್ಯ ಪ್ರವೃತ್ತರಾಗಿದ್ದಾರೆ.
ಇದುವರೆಗೆ ತಿರುಪತಿ, ಶೃಂಗೇರಿ, ಮಂತ್ರಾಲಯ ಸೇರಿದಂತೆ ಅನೇಕ ಧಾರ್ಮಿಕ ಕ್ಷೇತ್ರಗಳನ್ನು ಕೆಲ ದಿನಗಳ ಕಾಲ ಬಂದ್ ಮಾಡಲಾಗಿದೆ. ಇದೀಗ ಲಾಲ್‌ಬಾಗ್ ರೀತಿಯ ಉದ್ಯಾನಗಳನ್ನು ಕೂಡ ಬಂದ್ ಮಾಡಲು ಆರೋಗ್ಯ ಇಲಾಖೆ ಮುಂದಾಗಿದೆ.












Click it and Unblock the Notifications