ನೈಋತ್ಯ ರೈಲ್ವೆ:ಕಂಟೋನ್ಮೆಂಟ್-ವೈಟ್‌ಫೀಲ್ಡ್ ಹಳಿ ನಿರ್ಮಾಣಕ್ಕೆ ಟೆಂಡರ್

ಬೆಂಗಳೂರು, ಏಪ್ರಿಲ್ 23: ಉಪನಗರ ರೈಲು ಯೋಜನೆಯ ಭಾಗವಾಗಿರುವ ಕಂಟೋನ್ಮೆಂಟ್-ವೈಟ್ ಫೀಲ್ಡ್ ನಡುವೆ ಹೊಸ ಜೋಡಿ ಹಳಿ ನಿರ್ಮಾಣಕ್ಕೆ ಸಿದ್ಧತೆ ಈಗಾಗಲೇ ಆರಂಭವಾಗಿದೆ.

64 ಕೋಟಿ ರೂ. ವೆಚ್ಚದ ಮೊದಲ ಹಂತದ ಕಾಮಗಾರಿಗೆ ನೈಋತ್ಯ ರೈಲ್ವೆ ಟೆಂಡರ್ ಆಹ್ವಾನಿಸಿದೆ. ಮೊದಲ ಹಂತದಲ್ಲಿ 25ಕಿ.ಮೀ ಉದ್ದ 2 ಹೊಸ ಹಳಿ ಅಳವಡಿಕೆಗೆ ಭೂಮಿ ಸಮತಟ್ಟು ಮಾಡುವುದು, ಸಣ್ಣ ಸೇತುವೆ, ತಡೆಗೋಡೆ ನಿರ್ಮಾಣ ಸೇರಿ ಸಣ್ಣ ಪುಟ್ಟ ಕಾಮಗಾರಿ ನಡೆಯಲಿದೆ.

ಒಟ್ಟಾರೆ 492.8 ಕೋಟಿ ರೂ. ವೆಚ್ಚದಲ್ಲಿ ಈಗಿರುವ 2 ಹಳಿಯ ಆಚೀಚೆ ಮತ್ತೆರೆಡು ಹಳಿ ನಿರ್ಮಾಣವಾಗಲಿದೆ. 3 ವರ್ಷದಲ್ಲಿ ಪೂರ್ಣ, 1997-98ರಲ್ಲಿ ಬೆಂಗಳೂರು ನಗರದಿಂದ ಕಂಟೋನ್ಮೆಂಟ್ ಮೂಲಕ ವೈಟ್‌ಫೀಲ್ಡ್ ವರೆಗೆ ಹೊಸ ಜೋಡಿಹಳಿ ಲಭ್ಯವಾಗಲು ಎರಡು ದಶಕಗಳೇ ಕಾಯಬೇಕಾಯಿತು.

Cantonment- Whitefield tender resume for suburban rail project

2021ರೊಳಗೆ ಹೊಸ ಜೋಡಿ ಹಳಿ ಕಾಮಗಾರಿ ಪೂರ್ಣಗೊಳಿಸಲು ನೈಋತ್ಯ ರೈಲ್ವೆ ಗಡುವು ಹಾಕಿಕೊಂಡಿದೆ. ಇದರಿಂದ ನಿತ್ಯ 62 ಸಾವಿರ ಪ್ರಯಾಣಿಕರಿಗೆ ಉಪಯೋಗವಾಗಲಿದೆ.

ನಿಲ್ದಾಣವೂ ಅಭಿವೃದ್ಧಿ: ಹೊಸ ಜೋಡಿಹಳಿಗೆ ಪೂರಕವಾಗಿ ಈ ಮಾರ್ಗದಲ್ಲಿ ಕಂಟೋನ್ಮೆಂಟ್, ಬೆಂಗಳೂರು ಈಸ್ಟ್, ಬೈಯಪ್ಪನಹಳ್ಳಿ, ಕೆ.ಆರ್. ಪುರ, ಹೂಡಿ ಮತ್ತು ವೈಟ್‌ ಫೀಲ್ಡ್ ರೈಲು ನಿಲ್ದಾಣ ಅಭಿವೃದ್ಧಿಯೂ ಆಗಲಿದೆ. ಕಂಟೋನ್ಮೆಂಟ್-ವೈಟ್ ಫೀಲ್ಡ್ ನಡುವೆ ಆಟೋಮ್ಯಾಟಿಕ್ ಸಿಗ್ನಲಿಂಗ್ ವ್ಯವಸ್ಥೆ ಹೆಚ್ಚಿನ ರೈಲು ಓಡಾಟಕ್ಕೆ ಸಹಾಯವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+