125 ರೂ. ನೀಡಿ, ಹೊಟ್ಟೆ ತುಂಬಾ ಊಟ ಮಾಡಿ
ಬೆಂಗಳೂರು, ಮಾ. 5 : ಮೆಕ್ ಡೊನಾಲ್ಡ್ಸ್ ಗ್ರಾಹಕರಿಗೆ ನೀಡುತ್ತಿದ್ದ ವಿಶೇಷ ಕೊಡುಗೆಗಳ ಸರಣಿಯನ್ನು ಮುಂದುವರಿಸಿದೆ. ನ್ಯಾಷನಲ್ ಬ್ರೇಕ್ ಫಾಸ್ಟ್ ಡೇ (ಮಾರ್ಚ್ 9) ರಂದು ತನ್ನ ಗ್ರಾಹಕರಿಗೆ ಮೆಕ್ ಮಫಿನ್ಸ್ ಗಳನ್ನು ಉಚಿತವಾಗಿ ನೀಡಲಿದೆ.
ಮಾರ್ಚ್ 9 ರಂದು ಬೆಳಗ್ಗೆ 7 ರಿಂದ 11 ಗಂಟೆ ನಡುವೆ ಮೆಕ್ ಡೊನಾಲ್ಡ್ಸ್ ಗೆ ಭೇಟಿ ನೀಡುವವರು ಮೆಕ್ ಮಫಿನ್ಸ್ ಸವಿಯಬಹುದು. 3 ನೇ ವರ್ಷದ ಬ್ರೇಕ್ ಫಾಸ್ಟ್ ಡೇ ಆಚರಣೆ ಹಿನ್ನೆಲೆಯಲ್ಲಿ ಈ ಕೊಡುಗೆಗಳನ್ನು ನೀಡಿದೆ.

ನಿಮಗೆ ಇಲ್ಲಿ ಅತಿಹೆಚ್ಚಿನ ಆಯ್ಕೆಗಳ ಅವಕಾಶ ದೊರೆಯುತ್ತದೆ. ವೆಜ್ ಮೆಕ್ ಮಫಿನ್ಸ್, ವೆಜ್ ಸುಪ್ರೀಂ, ಹಾಟ್ ಕೇಕ್ಸ್, ಹಾಷ್ ಬ್ರೌನ್ ಮತ್ತು ಪಿಜ್ಜಾ ಮೆಕ್ ಪಫ್ ಸವಿಯಬಹುದು. ಗ್ರಾಹಕರಿಗೆ ನಾನ್ ವೆಜ್ ಪದಾರ್ಥಗಳಲ್ಲೂ ಆಯ್ಕೆಗಳಿವೆ. ಎಗ್ ಮೆಕ್ ಮಫಿನ್, ಚೀಸ್ ಮಫಿನ್ ಮುಂತಾದವುಗಳನ್ನು ನಿಮಗಿಷ್ಟವಾದ ಬೆಲೆಯಲ್ಲಿ ಪಡೆದುಕೊಳ್ಳಬಹುದು.
ಹೋಲ್ ಸೇಲ್ ಮಾದರಿಯಲ್ಲಿ ಊಟ ಮಾಡಲು ಬಯಸಿವವರಿಗೆ ಇದೊಂದು ಸದಾವಕಾಶವಾಗಿದೆ. ಹಾಗಾದರೆ ಇನ್ನೇಕೆ ತಡ ಮಾರ್ಚ್ 9 ರಂದು ನಿಮ್ಮ ಸ್ನೇಹಿತರೊಂದಿಗೆ ಮೆಕ್ ಡೊನಾಲ್ಡ್ಸ್ ರೆಸ್ಟೋರೆಂಟ್ ಗೆ ಭೇಟಿ ನೀಡಲು ಮರೆಯಬೇಡಿ.
ವಿಶೇಷ ಕೊಡುಗೆ ಯಾವತ್ತು?- ಮಾರ್ಚ್ 9, ರಾಷ್ಟ್ರೀಯ ಬ್ರೇಕ್ ಫಾಸ್ಟ್ ಡೇ
ಎಲ್ಲಿ: ಎಲ್ಲ ಮೆಕ್ ಡೊನಾಲ್ಡ್ಸ್ ರೆಸ್ಟೋರೆಂಟ್ ಗಳಲ್ಲಿ
ಬೆಲೆ: ಬ್ರೇಕ್ ಫಾಸ್ಟ್- 26 ರೂ. ನಿಂದ 86 ರೂ., ಊಟ: 101 ರೂ. ನಿಂದ 125 ರೂ.












Click it and Unblock the Notifications