ಬೆಂಗಳೂರಲ್ಲಿ ವಿಷಗಾಳಿ: ಒಂದು ಕೋಟಿ ಜನರಿಗಿದೆ ಆಪತ್ತು
ಬೆಂಗಳೂರು, ಜು.15: ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಪರಿಸರ ಮಾಲಿನ್ಯ ಹೆಚ್ಚಾಗುತ್ತಿದೆ, ವಾಹನಗಳ ಸಂಖ್ಯೆ ಅಧಿಕವಾದಷ್ಟು ಗಾಳಿ ಇನ್ನಷ್ಟು ಪ್ರದೂಷಣಗೊಳ್ಳುತ್ತಿದೆ. ವಿಷಮ ಗಾಳಿಯಿಂದ ಅಕಾಲಿಕ ಸಾವಿಗೆ ತುತ್ತಾಗುತ್ತಿರುವ ವಿಶ್ವದ ನಗರಗಳ ಪಟ್ಟಿಯಲ್ಲಿ ರಾಷ್ಟ್ರ ರಾಜಧಾನಿಗೆ ಮೂರನೇ ಸ್ಥಾನ ದೊರೆತಿದೆ.
ಬೆಂಗಳೂರಿನಲ್ಲಿ 4800 ಮಂದಿ ಮರಣ ಹೊಂದಿರುವ ಆತಂಕಕಾಗಿ ವಿಷಯ ಬೆಳಕಿಗೆ ಬಂದಿದೆ. ದೆಹಲಿಯಲ್ಲಿ 14,800 ಮಂದಿ ಮರಣ ಹೊಂದಿದ್ದು ನಂತರದ ಸ್ಥಾನವನ್ನು ಮುಂಬೈ, ಕೊಲ್ಕತ್ತ, ಚೆನ್ನೈ ಹಾಗೂ ಬೆಂಗಳೂರು ಪಡೆದಿದೆ. ಕ್ರಮವಾಗಿ ಈ ನಗರಗಳಲ್ಲಿ 10,500, 7300,4800 ಜನ ಅಕಾಲಿಕವಾಗಿ ನಿಧನರಾಗಿದ್ದಾರೆ.
ವಿಷಪೂರಿತ ಗಾಳಿಯ ಸಮಸ್ಯೆ ವಿಶ್ವಾದ್ಯಂತ ಇರುವುದು ಗಮನಕ್ಕೆ ಬಂದಿದೆ. ಮೊದಲ ಎರಡೂ ಸ್ಥಾನಗಳನ್ನು ಚೀನಾದ ಮಹಾನಗರಗಳಾದ ಬೀಜಿಂಗ್ ಹಾಗೂ ಶಾಂಗೈ ಹೊಂದಿವೆ. ಕ್ರಮವಾಗಿ ಈ ನಗರಗಳಲ್ಲಿ 18,200, 17600 ಮಂದಿ ಮರಣ ಹೊಂದಿದ್ದಾರೆ ಇದೆಲ್ಲವೂ 2016ರ ಅಂಕಿ ಅಂಶಗಳ ಆಧರಿತವಾಗಿದೆ.

ಚೀನಾ, ಭಾರತ, ಬಾಂಗ್ಲಾದೇಶ ಹಾಗೂ ಪಾಕಿಸ್ತಾನದಲ್ಲಿ ವಿಷಪೂರಿತ ಗಾಳಿ ಸಮಸ್ಯೆ ವಿಪರೀತವಿದೆ. ವಾಯು ಮಾಲಿನ್ಯ ಸೂಚ್ಯಂಕದಲ್ಲಿ ಪಿಎಂ-2.5 ಮಿತಿಯನ್ನು ಈ ನಗರಗಳು ದಾಟಿದೆ. ಇದರಿಂದ ಹೃದಯ, ಶ್ವಾಸಕೋಶ ಸಂಬಂಧಿ ರೋಗ, ಕ್ಯಾನ್ಸರ್ ಹಾಗೂ ಅಕಾಲಿಕ ಸಾವು ಸಾಮಾನ್ಯವಾಗಿದೆ.












Click it and Unblock the Notifications