ಬೆಂಗಳೂರಲ್ಲಿ 34,326 ಕಂಟೈನ್ಮೆಂಟ್ ಝೋನ್; ಪಶ್ಚಿಮದಲ್ಲೇ ಅಧಿಕ
ಬೆಂಗಳೂರು, ಆಗಸ್ಟ್ 17 : ಬೆಂಗಳೂರು ನಗರದಲ್ಲಿ 2131 ಹೊಸ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಭಾನುವಾರ ದಾಖಲಾಗಿದೆ. ಒಟ್ಟು ಸೋಂಕಿತರ ಸಂಖ್ಯೆ 89,811ಕ್ಕೆ ಏರಿಕೆಯಾಗಿದೆ. ನಗರದಲ್ಲಿ ಕಂಟೈನ್ಮೆಂಟ್ ಝೋನ್‌ಗಳ ಸಂಖ್ಯೆ 34,326.
Recommended Video
ಭಾನುವಾರ ನಗರದಲ್ಲಿ 199 ಹೊಸ ಕಂಟೈನ್ಮೆಂಟ್ ಝೋನ್‌ಗಳ ಸಂಖ್ಯೆ ಹೆಚ್ಚಾಗಿದೆ. ಸಕ್ರಿಯ ಕಂಟೈನ್ಮೆಂಟ್ ಝೋನ್‌ಗಳ ಸಂಖ್ಯೆ 14,676. ಇವುಗಳಲ್ಲಿ ಪಶ್ಚಿಮ ವಲಯದಲ್ಲಿಯೇ 3074 ಸಕ್ರಿಯ ಝೋನ್‌ಗಳಿವೆ.
ಬಿಬಿಎಂಪಿ ವಾರ್ ರೂಂ ಮಾಹಿತಿ ಪ್ರಕಾರ ದಕ್ಷಿಣ ವಿಭಾಗದಲ್ಲಿ 2860 ಸಕ್ರಿಯ, 6173 ಸಾಮಾನ್ಯ ಕಂಟೈನ್ಮೆಂಟ್ ಝೋನ್‌ಗಳಿವೆ. ಪೂರ್ವ ವಲಯದಲ್ಲಿ 2,721 ಸಕ್ರಿಯ ಮತ್ತು 4,261 ಸಾಮಾನ್ಯ ಝೋನ್‌ಗಳಿವೆ.

ಬೆಂಗಳೂರು ನಗರದಲ್ಲಿ ಶೇ 57ರಷ್ಟು ಕಂಟೈನ್ಮೆಂಟ್ ಝೋನ್‌ಗಳಲ್ಲಿ ಸಹಜ ಸ್ಥಿತಿ ಇದೆ. ಶೇ 43ರಷ್ಟು ಸಕ್ರಿಯ ಝೋನ್‌ಗಳಾಗಿವೆ. ಬೆಂಗಳೂರು ನಗರದಲ್ಲಿ ಆಗಸ್ಟ್ 15ರಂದು 3,495 ಹೊಸ ಪ್ರಕರಣ ದಾಖಲಾಗಿದ್ದು, ಒಂದೇ ದಿನದಲ್ಲಿ ಇಷ್ಟು ಪ್ರಕರಣ ದಾಖಲಾಗಿದ್ದು, ಇದೇ ಮೊದಲು.
ಕಳೆದ 10 ದಿನಗಳಲ್ಲಿ ಪಶ್ಚಿಮ ಮತ್ತು ಪೂರ್ವದಲ್ಲಿ ಶೇ 18, ದಕ್ಷಿಣದಲ್ಲಿ ಶೇ 16, ಬೊಮ್ಮನಹಳ್ಳಿಯಲ್ಲಿ ಶೇ 13ರಷ್ಟು ಸೋಂಕಿತರು ಪತ್ತೆಯಾಗಿದ್ದಾರೆ. ಜುಲೈ ತಿಂಗಳಿಗೆ ಹೋಲಿಕೆ ಮಾಡಿದರೆ ಆಗಸ್ಟ್‌ನಲ್ಲಿ ಸೋಂಕಿನ ಪ್ರಮಾಣ ನಗರದಲ್ಲಿ ಕಡಿಮೆಯಾಗುತ್ತಿದೆ.












Click it and Unblock the Notifications