Swiggy: 137 ರೂಪಾಯಿಯ ಐಸ್ ಕ್ರೀಮ್ ಡೆಲಿವರಿ ಮಾಡದ ಸ್ವಿಗ್ಗಿಗೆ 5,000 ದಂಡ!
ಬೆಂಗಳೂರು, ಏಪ್ರಿಲ್. 29: ಸಿಲಿಕಾನ್ ಸಿಟಿಯಲ್ಲಿ ಫುಡ್ ಡೆಲಿವರಿ ಆಪ್‌ಗಳನ್ನು ಬಳಸುವವರು ದಿನೇ ದಿನೇ ಹೆಚ್ಚಾಗುತ್ತಿದ್ದಾರೆ. ಬ್ಯುಸಿ ಲೈಫ್ ಲೀಡ್ ಮಾಡುವವರಿಂದ ಹಿಡಿದು ಆಗ್ಗಾಗೆ ಏನಾದ್ರು ತಿನ್ನಬೇಕು ಅನಿಸಿದ್ರೂ ಕೂಡ ಈ ಆಪ್ ಬಳಕೆಯಾಗುತ್ತದೆ. ಆದರೆ, ಇಷ್ಟಪಟ್ಟಿದ್ದು, ಬರದೆ ಇದ್ದರೆ ಎಲ್ಲರು ಸುಮ್ಮನಿರುವುದಿಲ್ಲ.
ಹೀಗೆ ಫುಡ್ ಡೆಲಿವರಿ ಪ್ಲಾಟ್‌ಫಾರ್ಮ್ ಸ್ವಿಗ್ಗಿ ಆ್ಯಪ್ ಮೂಲಕ ಆರ್ಡರ್ ಮಾಡಿದ ಐಸ್ ಕ್ರೀಂ ಅನ್ನು ವಿತರಿಸದ ಕಂಪನಿಯ ವಿರುದ್ಧ ಗಗ್ರಾಹಕರೊಬ್ಬರು ಮೊಕದ್ದಮೆ ಹೂಡಿ ಪರಿಹಾರ ಪಡೆದಿದ್ದಾರೆ. ಹೌದು ಸ್ವಿಗ್ಗಿ ವಿರುದ್ಧ ಪ್ರಕರಣ ದಾಖಲಿಸಿದ್ದ ಗ್ರಾಹಕರಿಗೆ ಪರಿಹಾರವಾಗಿ ರೂ 3,000 ಮತ್ತು ವ್ಯಾಜ್ಯ ವೆಚ್ಚವಾಗಿ ರೂ 2,000 ಪಾವತಿಸಲು ಬೆಂಗಳೂರಿನ ಗ್ರಾಹಕ ನ್ಯಾಯಾಲಯವು ಆದೇಶಿಸಲಾಗಿದೆ.

137 ರೂಪಾಯಿ ಮೌಲ್ಯದ ಐಸ್ ಕ್ರೀಮ್, 5,000 ರೂಪಾಯಿ ಪರಿಹಾರ
137 ರೂಪಾಯಿ ಮೌಲ್ಯದ ಐಸ್ ಕ್ರೀಮ್ ವಿತರಿಸಲು ವಿಫಲವಾದ ಮತ್ತು ಒಟ್ಟು ಶುಲ್ಕ 187 ರೂಪಾಯಿಗಳನ್ನು ಹಿಂತಿರುಗಿಸದಿದ್ದಕ್ಕಾಗಿ ಆಹಾರ ಡೆಲಿವರಿ ಏಜೆಮಟ್ ಸ್ವಿಗ್ಗಿಗೆ 5,000 ರೂಪಾಯಿ ಪರಿಹಾರವನ್ನು ನೀಡುವಂತೆ ಬೆಂಗಳೂರಿನ ಗ್ರಾಹಕ ನ್ಯಾಯಾಲಯವು ಆದೇಶಿಸಿದೆ. ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗವು ಸ್ವಿಗ್ಗಿಗೆ ಒಟ್ಟು 5,187 ರೂ.ಗಳನ್ನು ಬಡ್ಡಿಯೊಂದಿಗೆ ವಾರ್ಷಿಕ 8% ರಂತೆ ಪಾವತಿಸಲು ಕೇಳಿದೆ.
3,000 ಪರಿಹಾರ ಮತ್ತು ಉತ್ಪನ್ನದ ಒಟ್ಟು ಬೆಲೆ 187 ರೂ. ಜೊತೆಗೆ ವ್ಯಾಜ್ಯ ಶುಲ್ಕವಾಗಿ 2,000 ರೂಪಾಯಿಗಳನ್ನು ಪಾವತಿಸಬೇಕು ಎಂದು ಸ್ವಿಗ್ಗಿಗೆ ನಿರ್ದೇಶಕ ನೀಡಿದೆ. ದೂರುದಾರರು ಜನವರಿ 26, 2023 ರಂದು ಸ್ವಿಗ್ಗಿ ಆ್ಯಪ್‌ನಲ್ಲಿ ಪಟ್ಟಿ ಮಾಡಲಾದ ಔಟ್‌ಲೆಟ್‌ನಿಂದ 137 ರೂಪಾಯಿ ಮೌಲ್ಯದ 'ನಟ್ಟಿ ಡೆತ್ ಬೈ ಚಾಕೊಲೇಟ್' ಆರ್ಡರ್ ಮಾಡಿಸಿದ್ದಾರೆ. ಆರ್ಡರ್‌ಗೆ ರೂ 30 ರ ವಿತರಣಾ ಶುಲ್ಕ ಮತ್ತು ರೂ 20 ಪ್ಯಾಕಿಂಗ್ ಶುಲ್ಕವನ್ನು ವಿಧಿಸಲಾಗಿದೆ.

ಡೆಲಿವರಿ ಎಕ್ಸಿಕ್ಯೂಟಿವ್ ಆರ್ಡರ್ ಮಾಡಿದ 34 ನಿಮಿಷಗಳ ನಂತರ ಆರ್ಡರ್ ತೆಗೆದುಕೊಂಡರು, ಆದರೆ ಅವರು ಐಸ್‌ಕ್ರೀಮ್ ಡೆಲಿವರಿ ಮಾಡಲಿಲ್ಲ. ಡೆಲಿವರಿ ಮಾಡುವ ವ್ಯಕ್ತಿ ಸ್ಥಳವನ್ನು ತಲುಪಲು ವಿಫಲರಾಗಿದ್ದರೂ ಕೂಡ ಆ್ಯಪ್‌ನಲ್ಲಿ ಆಹಾರ 'ಡೆಲಿವರಿ ಮಾಡಲಾಗಿದೆ' ಎಂದು ತೋರಿಸುತ್ತಿತ್ತು. ದೂರುದಾರರು ಇಮೇಲ್ ಮೂಲಕ ಸಮಸ್ಯೆ ಹೇಳಿದರೂ ಕೂಡ ಆರ್ಡರ್ ಮಾಡಿ ಫುಡ್ ಕೈ ಸೇರಲಿಲ್ಲ. ಬಳಿಕ ರಿಫಂಡ್ ಮಾಡುವಂತೇ ಕೋರಿದ್ದರು. ಅದನ್ನು ಕೂಡ ಮಾಡಲಾಗಿಲ್ಲ.
ಜನವರಿ 31 ರಂದು, ಗ್ರಾಹಕರು ಸ್ವಿಗ್ಗಿಗೆ ಕಾನೂನು ನೋಟಿಸ್ ಕಳುಹಿಸಿದ್ದಾರೆ, ಆದರೆ ಉತ್ತರ ಬಂದಿಲ್ಲ. ನಂತರ ಅವರು ಅದನ್ನು ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗದ ಮುಂದೆ ಪ್ರಕರಣವನ್ನು ತೆಗೆದುಕೊಂಡು ಹೋಗಿದ್ದಾರೆ. ಡೆಲಿವರಿ ಎಕ್ಸಿಕ್ಯೂಟಿವ್ ಮಾಡಿದ ತಪ್ಪುಗಳಿಗೆ ಅದನ್ನು ಹೊಣೆಗಾರರನ್ನಾಗಿ ಮಾಡಲಾಗುವುದಿಲ್ಲ ಎಂದು ಸ್ವಿಗ್ಗಿ ವಾದಿಸಿದ್ದಾರೆ. ಡೆಲಿವರಿ ಎಕ್ಸಿಕ್ಯೂಟಿವ್ ಕೇವಲ ಮಧ್ಯವರ್ತಿಗಳು ಎಂದಿದ್ದಾರೆ.
ಡೆಲಿವರಿ ಎಕ್ಸಿಕ್ಯೂಟಿವ್ ಗ್ರಾಹಕರ ವಿಳಾಸವನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ ಮತ್ತು ಅವರ ಕರೆಗಳಿಗೆ ಉತ್ತರಿಸಿಲ್ಲ ಎಂದು ಸ್ವಿಗ್ಗಿ ವಾದಿಸಿದೆ. ಆದರೆ, ದೂರುದಾರರು ತಮ್ಮ ಸ್ಥಳದಿಂದ 200 ಮೀಟರ್ ದೂರದಲ್ಲಿದ್ದಾಗ ವಿತರಣಾ ಪಾಲುದಾರರೊಂದಿಗೆ ತಮ್ಮ ಕರೆ ರೆಕಾರ್ಡಿಂಗ್‌ನ ಸಿಡಿಯನ್ನು ಸಲ್ಲಿಸಿದ್ದು, ಸ್ವಿಗ್ಗಿಯ ವಾದವನ್ನು ನಿರಾಕರಿಸಿದರು.
ಬಳಿಕ ಗ್ರಾಹಕ ನ್ಯಾಯಾಲಯವು "ಮಧ್ಯವರ್ತಿ" ಪದವನ್ನು ನಿರಾಕರಿಸಿ, 'ಕೆಲವು ಪ್ರಕರಣಗಳಲ್ಲಿ ಮಧ್ಯವರ್ತಿಗಳ ಹೊಣೆಗಾರಿಕೆಯ ವಿನಾಯಿತಿ' ಎಂದು ಹೇಳುವ ಐಟಿ ಕಾಯಿದೆಯ ಸೆಕ್ಷನ್ 79 ಅನ್ನು ಉಲ್ಲೇಖಿಸಿದೆ. ಸ್ವಿಗ್ಗಿ ಕಾರ್ಯಗಳು ಸೇವೆಯ ಕೊರತೆ ಮತ್ತು ಅನ್ಯಾಯದ ವ್ಯಾಪಾರ ಅಭ್ಯಾಸ ಎಂದು ಟೀಕಿಸಿ ದಂಡ ವಿಧಿಸಿದೆ.












Click it and Unblock the Notifications