ಠಾಣೆಯಲ್ಲಿ ಇಸ್ಪೀಟ್ ಆಡುತ್ತಿದ್ದ ಪೇದೆಗಳು ಅಮಾನತು
ಬೆಂಗಳೂರು, ಮೇ 27 : ಪೊಲೀಸ್ ಠಾಣೆಯಲ್ಲೇ ಇಸ್ಪೀಟ್ ಆಡುತ್ತಿದ್ದ ಇಬ್ಬರು ಪೇದೆಗಳನ್ನು ಅಮಾತನು ಮಾಡಲಾಗಿದೆ. ಪೇದೆಗಳು ಇಸ್ಪೀಟ್ ಆಡುವ ವಿಡಿಯೋ ಮಾಧ್ಯಮಗಳಲ್ಲಿ ಮಂಗಳವಾರ ಪ್ರಸಾರವಾಗಿತ್ತು.
ಬೆಂಗಳೂರು ಪೂರ್ವವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಹರಿಶೇಖರನ್ ಅವರು ಓಲ್ಡ್ ಏರ್‍ಪೋರ್ಟ್ ಪೊಲೀಸ್ ಠಾಣೆಯ ಮುಖ್ಯ ಪೇದೆ ಸದಾಶಿವ ಮತ್ತು ಧನಂಜಯ ಅವರನ್ನು ಅಮಾನತು ಮಾಡಿ ಬುಧವಾರ ಆದೇಶ ಹೊರಡಿಸಿದ್ದಾರೆ.[ದೊಡ್ಡಬಳ್ಳಾಪುರ : ಠಾಣೆ ಆವರಣದಲ್ಲೇ ಪೇದೆ ಬಂಧನ!]

ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಪೇದೆಗಳನ್ನು ಅಮಾತನು ಮಾಡಿ ಆದೇಶ ಹೊರಡಿಸಲಾಗಿದೆ. ಸದಾಶಿವ ಅವರು ಇನ್ನೊಬ್ಬ ಪೇದೆಯ ಜೊತೆ ಸೇರಿಕೊಂಡು ಇಸ್ಪೀಟ್ ಆಡುತ್ತಿದ್ದರು. ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿತ್ತು ಮತ್ತು ಮಂಗಳವಾರ ವಿವಿಧ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. [ಬೆಂಗಳೂರು : ಹೊಯ್ಸಳ ಜೀಪಿಗೂ ಬಂತು ಸಿಸಿಟಿವಿ]
ವಿಡಿಯೋ ಗೇಮ್ ಕೇಂದ್ರದ ಮೇಲೆ ದಾಳಿ : ಸಿಸಿಬಿ ಪೊಲೀಸರು ಬೆಂಗಳೂರಿನಲ್ಲಿ ಬುಧವಾರ ಅನಧಿಕೃತ ವಿಡಿಯೋ ಗೇಮ್ ಕೇಂದ್ರಗಳ ಮೇಲೆ ದಾಳಿ ನಡೆಸಿದ್ದಾರೆ. ಬುಧವಾರ ಬೆಳಗ್ಗೆ ಮೂರು ಕೇಂದ್ರಗಳ ಮೇಲೆ ದಾಳಿ ಮಾಡಲಾಗಿದ್ದು, 71 ಜನರನ್ನು ಬಂಧಿಸಿ, 90 ಸಾವಿರ ಹಣವನ್ನು ವಶಪಡಿಸಿಕೊಂಡಿದ್ದಾರೆ.












Click it and Unblock the Notifications