ನಾಲಿಗೆ ಇಳಿಬಿಟ್ಟ ಈ ಪೊಲೀಸಪ್ಪನ ಸ್ಟೋರಿ ಕೇಳಿ ಪೊಲೀಸರೇ ದಂಗು!

ಬೆಂಗಳೂರು, ಮೇ. 17: ಸಿಂಹದ ಮರಿ ತರ 'ನಾಲಿಗೆ' ಇಳಿಬಿಟ್ಟು ಪೋಸ್ ಕೊಟ್ಟಿರುವ ಈ ವ್ಯಕ್ತಿಯೊನ್ನಮ್ಮೆ ನೋಡಿಬಿಡಿ. ಈ ಪೊಲೀಸಪ್ಪನ ಸ್ಟೋರಿ ಕೇಳಿ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ. ದೂರು ಕೊಡಲು ಬಂದ ಮಹಿಳೆಯನ್ನೇ ಪಟಾಯಿಸಿದ್ದ. ಇದೀಗ ಅದೇ ಮಹಿಳೆ ಪೊಲೀಸಪ್ಪನ ವಿರುದ್ಧ ನೀಡಿರುವ ದೂರಿನಲ್ಲಿ ಸ್ತ್ರೀಲೋಕ ಕಥೆಗಳು ಬಹಿರಂಗವಾಗಿವೆ.

ಒಂದೆಡೆ ಚೆಲುವಿನ ಚಿತ್ತಾರ ತರದ ಚಿತ್ರ. ಮತ್ತೊಂದು ಕಡೆ ನಾಲಿಗೆ ಇಳಿ ಬಿಟ್ಟಿರುವ ವೇಷ. ಈ ವ್ಯಕ್ತಿಯ ಹೆಸರು ಬಾಬು. ಸದ್ಯ ಬೆಂಗಳೂರು ನಗರ ಪೊಲೀಸ್ ಕಮೀಷನರ್ ಕಚೇರಿಯಲ್ಲಿರುವ ಸಿಟಿ ಎಸ್ ಬಿ ಶಾಖೆಯಲ್ಲಿ ಮುಖ್ಯ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರ ವಿರುದ್ಧ ಪತ್ನಿ ಮಂಜುಳಾ ಎಂಬುವರು ಗಿರಿನಗರ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದಾರೆ. ನನಗೆ ನ್ಯಾಯ ಕೊಡಿ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತರಿಗೂ ದೂರು ಸಲ್ಲಿಸಿದ್ದಾರೆ.

ಮಾನಸಿಕ ಕಿರುಕುಳ ಆರೋಪ:

ಬಾಬು ವರ್ತೂರು ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದರು. ಒಡವೆ ಕಳ್ಳತನ ಸಂಬಂಧ ಮಂಜುಳಾ ವರ್ತೂರು ಪೊಲೀಸ್ ಠಾಣೆಗೆ ದೂರು ನೀಡಲು ಹೋಗಿದ್ದರು. ಮಂಜುಳಾಗೆ ಸಹಾಯ ಮಾಡುವ ನೆಪದಲ್ಲಿ ಪರಿಚಯ ಮಾಡಿಕೊಂಡು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರಂತೆ. ಆನಂತರ ಈತ ಇದಕ್ಕೂ ಮೊದಲೇ ಬಾಬು ಹಲವು ಮದುವೆಯಾಗಿದ್ದು, ಮೂವರನ್ನು ಮದುವೆಯಾಗಿರೋದಾಗಿ ಆತನ ಒಬ್ಬ ಪತ್ನಿ ಆರೋಪಿಸಿದ್ದಾರೆ. ಈ ಹಿಂದೆ ಮೂರು ಮದುವೆಯಾಗಿದ್ದ ಬಾಬು ನನ್ನನ್ನು ಮದುವೆಯಾದರು. ಇದೀಗ ಕುಡಿದು ಬಂದು ನನಗೆ ಕಿರುಕುಳ ನೀಡುತ್ತಿದ್ದಾರೆ. ನನ್ನ ಮಗಳಿಗೂ ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದಾಳೆ.

Bengaluru Constable Accused Of Marrying 3 Times, Wife Files Complaint

ನನ್ನ ಮಗಳ ಮೇಲೆ ಹಲ್ಲೆ:

ಮಧ್ಯ ರಾತ್ರಿ ಕುಡಿದು ನನ್ನ ಮಗಳ ಮೇಲೆ ಹಲ್ಲೆ ಮಾಡಿದ್ದಾರೆ. ನನ್ನ ಮೇಲೂ ದೈಹಿಕ ಹಲ್ಲೆ ನಡೆಸಿದ್ದು, ನಮಗೆ ಬಾಬು ಅವರಿಂದ ಜೀವ ಭಯವಿದ್ದು, ಈ ಪೊಲೀಸ್ ಗಂಡನ ಕಿರಕುಳದಿಂದ ಮುಕ್ತಿ ಕೊಡಿಸಿ ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ. ಅಚ್ಚರಿ ಏನೆಂದರೆ ಈ ಪೊಲೀಸಪ್ಪ ಈಗಾಗಲೇ ಮೂರು ಮದುವೆಯಾಗಿದ್ದಾರಂತೆ.

Bengaluru Constable Accused Of Marrying 3 Times, Wife Files Complaint

ಠಾಣೆಗೆ ಬಂದವರನ್ನು ಪಟಾಯಿಸಿ ಮದುವೆಯಾಗಿದ್ದಾರೆ ಎಂದು ಅವರ ಪತ್ನಿಯೇ ಆರೋಪಿಸಿದ್ದು, ಇದೀಗ ಈ ಕುರಿತ ಪೋಟೋ ಗಳನ್ನು ಸಹ ಪತ್ನಿಯೇ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದು, ಅವು ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿವೆ. ಪೊಲೀಸಪ್ಪನ ವಿರುದ್ಧ ಅವರ ಪತ್ನಿ ನೀಡಿದ ದೂರನ್ನು ವಿಚಾರಣೆ ನಡೆಸಿ ವರದಿ ನೀಡುವಂತೆ ಗಿರಿನಗರ ಪೊಲೀಸರಿಗೆ ಸೂಚಿಸಲಾಗಿದೆ. ಬಾಬು ಮೂರ್ನಾಲ್ಕು ಮದುವೆಗಳ ಸ್ತ್ರೀಲೋಕ ಕಥೆ ಕೇಳಿ ಪೊಲೀಸರೂ ದಂಗಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+