ಕರ್ನಾಟಕದ ಹೆಸರಿನಲ್ಲಿ "ಬೆಂಗಳೂರಿಗೆ" ಭಯ ಸೃಷ್ಟಿಸುವ ಸಂಚು: ಪೊಲೀಸರಿಂದ ಖಡಕ್ ಸೂಚನೆ!
ಬೆಂಗಳೂರು ಹಾಗೂ ಕರ್ನಾಟಕದಲ್ಲಿ ನಾರ್ಥಿಗಳ ಹಾವಳಿ ದಿನೇ ದಿನೆ ಹೆಚ್ಚಳವಾಗುತ್ತಿದೆ. ಈ ರೀತಿ ಇರುವಾಗಲೇ ಕರ್ನಾಟಕದ ಹೆಸರಿನಲ್ಲೇ ಬೆಂಗಳೂರು ಹಾಗೂ ಕರ್ನಾಟಕಕ್ಕೆ ಕೆಟ್ಟ ಹೆಸರು ತರುವ ಪ್ರಯತ್ನವನ್ನು ಮಾಡಲಾಗುತ್ತಿದ್ದು. ಇದಕ್ಕೆ ಪೊಲೀಸರು ಖಡಕ್ ಎಚ್ಚರಿಕೆ ನೀಡಿದ್ದಾರೆ. ಬೆಂಗಳೂರಿನಂತಹ ಪ್ರಮುಖ ಹಾಗೂ ದೊಡ್ಡ ನಗರಗಳಲ್ಲಿ ಕೆಲವೊಂದು ಘಟನೆಗಳು ನಡೆಯುತ್ತಿರುತ್ತವೆ. ಅದನ್ನು ಕಾಲ ಕಾಲಕ್ಕೆ ತಕ್ಕಂತೆ ನಾವು ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದಂತೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ಬೆಂಗಳೂರು ಪೊಲೀಸರು ಹೇಳಿದ್ದಾರೆ. ಕರ್ನಾಟಕದ ಹೆಸರಿನಲ್ಲಿ ಕನ್ನಡಿಗರಲ್ಲಿ ಆತಂಕ ಮೂಡಿಸುತ್ತಿರುವುದಕ್ಕೆ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ಬರುತ್ತಿರುವ ಕೆಲವು ನಾರ್ಥಿಗಳು ಪದೇ ಪದೇ ಬಾಲ ಬಿಚ್ಚುತ್ತಿದ್ದಾರೆ. ನೆನ್ನೆಯಷ್ಟೇ ಬಿಹಾರದ ಯುವತಿಯೊಬ್ಬಳು ಕನ್ನಡಿಗ ಆಟೋ ಚಾಲಕನಿಗೆ ಮನಸ್ಸಿಗೆ ಬಂದಂತೆ ಚಪ್ಪಲಿಯಲ್ಲಿ ಹೊಡೆದಿದ್ದು ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಅಕೌಂಟ್‌ವೊಂದರ ಬಗ್ಗೆ ಕನ್ನಡಿಗರು ಆಕ್ರೋಶ ಹೊರ ಹಾಕುತ್ತಿದ್ದಾರೆ.

@karnatakaportf ಎನ್ನುವ ಸೋಷಿಯಲ್ ಮೀಡಿಯಾ ಖಾತೆಯಿಂದ ಕನ್ನಡಿಗರು ಆತಂಕಪಡುವಂತಹ ಅಥವಾ ಪ್ರಚೋದನಾತ್ಮಕ ಪೋಸ್ಟ್‌ಗಳನ್ನು ಮಾಡಲಾಗುತ್ತಿದೆ ಎಂದು ಕನ್ನಡಿಗರು ಇತ್ತೀಚಿನ ದಿನಗಳಲ್ಲಿ ದೂರುತ್ತಿದ್ದಾರೆ. ಕರ್ನಾಟಕದ ಹೆಸರನ್ನೇ ಇರಿಸಿಕೊಂಡು ಕನ್ನಡದ ಬಗ್ಗೆ ತಪ್ಪಾಗಿ ಪೋಸ್ಟ್ ಮಾಡುವುದು ಅಥವಾ ಪ್ರಚೋದನೆ ನೀಡುತ್ತಿರುವುದಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸರು ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸುತ್ತಿದ್ದಾರೆ. ಈ ರೀತಿ ಇರುವಾಗಲೇ ಬೆಂಗಳೂರು ಪೊಲೀಸರೇ ಈ ಪೇಜ್‌ಗೆ ಸಂಬಂಧಿಸಿದಂತೆ ಖಡಕ್ ಎಚ್ಚರಿಕೆಯನ್ನು ಕೊಟ್ಟಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ರಾಮಕೃಷ್ಣ ಎನ್ನುವವರು ಮಾಡಿರುವ ಪೋಸ್ಟ್ ಸಹ ವೈರಲ್ ಆಗುತ್ತಿದೆ. ಬೆಂಗಳೂರು ನಗರದ ಹೆಸರು ಹಾಳು ಮಾಡೋ ಪುಟ ಇದು @karnatakaportf ಬೆಂಗಳೂರು ಪೊಲೀಸ್ ಇಡೀ ದೇಶದಲ್ಲೇ ನಂಬರ್ ಒನ್ ಸೇವೆಯನ್ನ ತಮ್ಮ ಸಾರ್ವಜನಿಕರಿಗೆ ನೀಡುತ್ತಿದ್ದರೂ,ಒಂದೂವರೆ ಕೋಟಿ ಜನಸಂಖ್ಯೆ ಇರುವ ನಗರದಲ್ಲಿ ಚಿಕ್ಕ ಅಪರಾಧಗಳು ಸಾಮಾನ್ಯವಾದರೂ ಸಾಮಾಜಿಕ ಮಾಧ್ಯಮದಲ್ಲಿ ಸುಳ್ಳು ಸುದ್ದಿ ಹರಡುವ ಈತನ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದ್ದಾರೆ.
ಬೆಂಗಳೂರು ಮಡಿವಾಳ ಪೊಲೀಸರು, ಸುಮಾರು ಒಂದುವರೆ ಕೋಟಿ ಜನಸಂಖ್ಯೆ ಇರುವ ಮಹಾನಗರದಲ್ಲಿ ಚಿಕ್ಕ ಪುಟ್ಟ ಅಪರಾಧಗಳು ನಡೆಯುತ್ತಿರುತ್ತದೆ. ಅದನ್ನೇ ವೈಭವೀಕರಿಸಿ ಬೆಂಗಳೂರು ನಗರದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟು ಹೋಗಿದೆ ಎಂಬ ಅರ್ಥದಲ್ಲಿ ಋಣಾತ್ಮಕವಾಗಿ ನೀವು ಕಥೆ ಬರೆದಿರುವುದು ಸ್ವೀಕಾರಾರ್ಹವಲ್ಲ. ಘಟನಾಸ್ಥಳಕ್ಕೆ ಹೋಗಿ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಎಕ್ಸ್‌ನಲ್ಲಿ ಅಧಿಕೃತ ಖಾತೆಯಿಂದ ಪೋಸ್ಟ್ ಮಾಡಿದ್ದಾರೆ.
ಸುಮಾರು ಒಂದುವರೆ ಕೋಟಿ ಜನಸಂಖ್ಯೆ ಇರುವ ಮಹಾನಗರದಲ್ಲಿ ಚಿಕ್ಕ ಪುಟ್ಟ ಅಪರಾಧಗಳು ನಡೆಯುತ್ತಿರುತ್ತದೆ. ಅದನ್ನೇ ವೈಭವೀಕರಿಸಿ ಬೆಂಗಳೂರು ನಗರದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟು ಹೋಗಿದೆ ಎಂಬ ಅರ್ಥದಲ್ಲಿ ಋಣಾತ್ಮಕವಾಗಿ ನೀವು ಕಥೆ ಬರೆದಿರುವುದು ಸ್ವೀಕಾರಾರ್ಹವಲ್ಲ. ಘಟನಾಸ್ಥಳಕ್ಕೆ ಹೋಗಿ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ.
— MADIVALA PS, ಮಡಿವಾಳ ಪೊಲೀಸ್ ಠಾಣೆ (@madivalaps) June 1, 2025
ಕನ್ನಡಿಗರು ಹೇಳಿದ್ದೇನು ?
ಕಿರಣ್ ಎನ್ನುವವರು, ಈ ರೀತಿ ಅಯೋಗ್ಯರಿಗೆ ಬುದ್ಧಿ ಕಲಿಸಿ ಅಂತ ಹೇಳಿದ್ದಾರೆ. ಬೆಂಗಳೂರಿನಲ್ಲಿದ್ದು ಬೆಂಗಳೂರು ನಗರ ಹಾಳು ಮಾಡಿದ್ದು ಅಲ್ಲದೇ ಬೆಂಗಳೂರಿನ ಹೆಸರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೆಡಿಸುವ ಹುನ್ನಾರ ಇದು.
ಬೆಂಗಳೂರ್ ಹಾಳಾಗಿದ್ದು ವಲಸಿಗರಿಂದ. ನಮ್ಮ ಬೆಂಗಳೂರು, ಉದ್ಯಾನನಗರಿ ನಮಗೆ ಬಿಡಿ.. ವಲಸಿಗರೇ ನೀವು ಹೊರಡಿ ಅಂತ ಕನ್ನಡಿಗರು ರಿಯಾಕ್ಟ್ ಮಾಡುತ್ತಿದ್ದಾರೆ.
ರವಿ ಕೀರ್ತಿ ಗೌಡ ಎನ್ನುವವರು, ಬೆಂಗಳೂರು ಪೊಲೀಸರು ಈ ಪೇಜ್ ಮೇಲೆ ಕ್ರಮ ತೆಗೆದುಕೊಂಡಿದ್ದಾರೆ ಎಂದು ಭಾವಿಸುತ್ತೇವೆ ಅಂತ ಕಮೆಂಟ್ ಮಾಡಿದ್ದಾರೆ. ನೂತನ್ ಎನ್ನುವವರು, ನಾನು ದಿನಾ ಹೇಳುತ್ತಿದ್ದೆವು. ಕೊನೆಗೂ ನಿಮ್ಮ ಕಣ್ಣಿಗೆ ಇವನು ಬಿದ್ದಿದ್ದಾನೆ. ಇವನನ್ನು ನಿಮ್ಮ ಕಣ್ಗಾವಲಿನಲ್ಲಿಡಿ ಕರ್ನಾಟಕದ ಹೆಸರಿನಲ್ಲಿ ಟ್ವಿಟ್ ಮಾಡುತ್ತಾ ನಮ್ಮ ಪೊಲೀಸ್ ಮತ್ತು ಬೆಂಗಳೂರಿನ ಹೆಸರನ್ನು ಹಾಳು ಮಾಡುತ್ತಿದ್ದಾನೆ. ಜೋಪಾನ. ತಪ್ಪುಗಳು ಸಹಜ. ನಮ್ಮ ಪೊಲೀಸ್ ನಮ್ಮ ಹೆಮ್ಮೆ ಅಂತ ಹೇಳಿದ್ದಾರೆ.
ಕೃಷ್ಣ ಎನ್ನುವವರು ಜನರಲ್ಲಿ ಬೆಂಗಳೂರಿನ ಬಗ್ಗೆ ಭಯ ಉಂಟಾಗುವಂತೆ ಮಾಡುವ ಇಂತಹ ಭಯೋತ್ಪಾದಕರ ಮೇಲೆ ಕ್ರಮ ತಗೆದುಕೊಳಲೇ ಬೇಕು. ಅಪರಾಧ ನಡೆಯದ ರಾಜ್ಯ, ನಗರ ಎಲ್ಲಿಯಾದರೂ ಇದೆಯೇ? ಇದ್ದರೆ ಅಲ್ಲಿಗೆ ಇವರನ್ನೆಲ್ಲ ಓಡಿಸಿ ಬಿಡಬೇಕು. ಬೇರೆ ಕಡೆಯಿಂದ ಬಂದು ನಮ್ಮ ರಾಜ್ಯದ ಮೇಲೆ ವಿಷ ಕಾರುತ್ತಾರೆ ಎಂದಿದ್ದಾರೆ.
@karnatakaportf ಉದ್ದೇಶಪೂರ್ವಕವಾಗಿ ಕರ್ನಾಟಕ ಮತ್ತು ಬೆಂಗಳೂರು ಅನ್ನು ನಿಂದಿಸುತ್ತಿದ್ದಾನೆ. ಯಾವುದೇ ಅಪರಾಧ ಅಥವಾ ಅನ್ಯಾಯವಿದ್ದರೆ ಅಧಿಕಾರಿಗಳಿಗೆ ದೂರು ಕೊಡುವುದು ಸರಿಯಾಗಿದೆ, ರಾಜ್ಯದ ಹೆಸರು ಕೆಡಿಸಲು ಅಲ್ಲ. ಬೆಂಗಳೂರು ಅಪರಾಧ ದರದಲ್ಲಿ ಇಳಿಕೆಯನ್ನು ಕಂಡು, ದೇಶದ ಮಟ್ಟಿಗೆ ಶ್ರೇಷ್ಠವಾಗಿದೆ. ಇಂಥಾ ಖಾತೆಗಳಿಗೆ ಎಚ್ಚರಿಕೆ ನೀಡಬೇಕು. pic.twitter.com/j2eef1oPxw
— Niranjan CM (@Nir_anjan_01) June 2, 2025












Click it and Unblock the Notifications