ಪಾರ್ಟಿಯಲ್ಲಿ ಗಲಾಟೆ, ಇಬ್ಬರ ಬರ್ಬರ ಹತ್ಯೆ

ಬೆಂಗಳೂರು, ನವೆಂಬರ್ 19: ಪಾರ್ಟಿಯಲ್ಲಿ ಸಣ್ಣ ವಿಷಯಕ್ಕೆ ಉಂಟಾದ ಕಲಹ ಹತ್ಯೆಯಲ್ಲಿ ಅಂತ್ಯಗೊಂಡಿದೆ.

ಪಾರ್ಟಿ ಮಾಡುತ್ತಿದ್ದ ವೇಳೆ ಹಣಕಾಸಿನ ವಿಚಾರಕ್ಕೆ ನಾಲ್ವರು ಸ್ನೇಹಿತರ ನಡುವೆ ಜಗಳ ನಡೆದು ಇಬ್ಬರನ್ನು ಹತ್ಯೆ ಮಾಡಿರುವ ಘಟನೆ ತಲಘಟ್ಟಪುರ ವ್ಯಾಪ್ತಿಯಲ್ಲಿ ನಡೆದಿದೆ. ಉತ್ತರಹಳ್ಳಿಯ ಅಬ್ಬಯ್ಯಸ್ವಾಮಿ ಲೇಔಟ್‌ ನಿವಾಸಿಗಳಾದ ಸಂತೋಷ್ ಕುಮಾರ್ ಅಲಿಯಾಸ್ ಪಿಳ್ಳೈ ಹಾಗೂ ಸುಬ್ರಮಣಿ ಮೃತರು.

ಘಟನೆ ಸಂಬಂಧ ಆರೋಪಿ ಮಹಾವೀರ್ ಎಂಬಾತನನ್ನು ಬಂಧಿಸಲಾಗಿದ್ದು, ಆರೋಪಿಗಾಗಿ ಶೋಧ ನಡೆಸಲಾಗುತ್ತದೆ.

Commotion At Party Murder Of Two Painters

ಸಂತೋಷ ಮತ್ತು ಸುಬ್ರಮಣಿ ತೀವ್ರ ಮದ್ಯ ವ್ಯಸನಿಗಳಾಗಿದ್ದು, ಪತ್ನಿಯಿಂದ ಪ್ರತ್ಯೇಕವಾಗಿದ್ದಾರೆ. ಎಲ್ಲರೂ ಪೇಂಟಿಂಗ್ ಕೆಲಸ ಮಾಡುತ್ತಿದ್ದರು. ತಲಘಟ್ಟಪುರ ಠಾಣಾ ವ್ಯಾಪ್ತಿಯ ಭುವನೇಶ್ವರಿ ನಗರದ ಶನಿಮಹಾತ್ಮಾ ದೇವಸ್ಥಾನದ ಹಿಂಭಾಗದಲ್ಲಿ ಖಾಲಿ ನಿವೇಶನ ಇದೆ. ಮೃತರು , ಬಂಧಿತ ಮಹಾವೀರ್ ಹಾಗೂ ತಲೆ ಮರೆಸಿಕೊಂಡಿರುವ ರವಿ ಮದ್ಯ ಖರೀದಿಸಿ ಅಲ್ಲಿ ಬಂದು ಕುಡಿಯುತ್ತಿದ್ದರು.

ಸುಬ್ರಮಣಿ ಮತ್ತು ಸಂತೋಷ್ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. ಕುಡಿದ ಅಮಲಿನಲ್ಲಿ ಹಾಲೋ ಬ್ರಿಕ್ಸ್ ಇಟ್ಟಿಗೆಯಲ್ಲಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಕೆಳಗೆ ಬಿದ್ದ ಸುಬ್ರಮಣಿ ಮೇಲೆ ಸಂತೋಷ್ ಕಲ್ಲು ಎತ್ತಿಹಾಕಿ ಹತ್ಯೆ ಮಾಡಿದ್ದಾನೆ. ಇದರಿಂದ ಆಕ್ರೋಶಗೊಂಡ ಇನ್ನಿಬ್ಬರು ಸ್ನೇಹಿತರು ಸುಬ್ರಮಣಿ ಮೇಲೆ ಹಲ್ಲೆ ನಡೆಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+