E Khata: ಇ-ಖಾತಾ ವಿತರಣೆ ಕುರಿತು ಬಿಗ್ ಅಪ್‌ಡೇಟ್ ಕೊಟ್ಟ ಆಯುಕ್ತರಾದ ದಲ್ಜಿತ್ ಕುಮಾರ್
ಬೆಂಗಳೂರು, ನವೆಂಬರ್ 27: ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಾರ್ವಜನಿಕರಿಂದ ಸ್ವೀಕೃತವಾಗುವ ಇ-ಖಾತಾ ಅರ್ಜಿಗಳನ್ನು ತ್ವರಿತ ಗತಿಯಲ್ಲಿ ವಿಲೇವಾರಿ ಮಾಡಿ ಖಾತೆಗಳನ್ನು ವಿತರಣೆ ಮಾಡುವಂತೆ, ಸ್ವೀಕೃತಗೊಳ್ಳುವ ಅರ್ಜಿಗಳನ್ನು ವಿನಾಕಾರಣ ತಿರಸ್ಕಾರ ಮಾಡದಂತೆ ಹಾಗೂ ಕಂದಾಯ ಬಾಕಿ ಉಳಿಸಿಕೊಂಡವರ ಪಟ್ಟಿ ಮಾಡಿ, ಡಿಮ್ಯಾಂಡ್ ನೋಟೀಸ್ ಜಾರಿಗೊಳಿಸಲು ಹಾಗೂ ತೆರಿಗೆ ಪಾವತಿ ಮಾಡದಿದ್ದರೆ ಅಗತ್ಯವಿದ್ದಲ್ಲಿ ಕಟ್ಟಡಗಳಿಗೆ ಬೀಗ ಹಾಕುವಂತೆ ಕೇಂದ್ರ ನಗರ ಪಾಲಿಕೆಯ ಅಭಿವೃದ್ಧಿ ಅಪರ ಆಯುಕ್ತರಾದ ದಲ್ಜಿತ್ ಕುಮಾರ್ ರವರು ಹೇಳಿದರು.
ಕಂದಾಯ ವಿಭಾಗದ ಎಲ್ಲಾ ಅಧಿಕಾರಿಗಳಿಗೆ/ಸಿಬ್ಬಂದಿಗಳಿಗೆ ಇಂದು ಎಂ.ಜಿ ರಸ್ತೆಯ ಪಿ.ಯು.ಬಿ. ಕಟ್ಟಡದ ಕೆನೊಪಿ ಹಾಲ್ ನಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಕೇಂದ್ರ ನಗರ ಪಾಲಿಕೆಯ ಅಭಿವೃದ್ಧಿ ಅಪರ ಆಯುಕ್ತರಾದ ದಲ್ಜಿತ್ ಕುಮಾರ್ ಅವರು ಅಧಿಕಾರಿಗಳಿಗೆ ಮಹತ್ವ ಸೂಚನೆ ನೀಡಿದರು.

ರಸ್ತೆ ಮತ್ತು ಮೂಲಸೌಕರ್ಯ ಅಭಿವೃದ್ಧಿ
ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಜಿಬಿಎ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ರವರ ನೇತೃತ್ವದಲ್ಲಿ ಸರ್ಜಾಪುರ ರಸ್ತೆ ಹಾಗೂ ಹೊರ ವರ್ತುಲ ರಸ್ತೆ ಸುತ್ತಮುತ್ತಲಿನ ಮೂಲಸೌಕರ್ಯ ಅಭಿವೃದ್ಧಿ, ರಸ್ತೆ ಸಂಪರ್ಕ ಸುಧಾರಣೆ, ಪಾದಚಾರಿ-ಸೈಕ್ಲಿಂಗ್ ಮೂಲಸೌಕರ್ಯ ಬಲಪಡಿಕೆ, CDP ರಸ್ತೆ ಅನುಷ್ಠಾನ, ಪಾದಚಾರಿ ಮಾರ್ಗ ಒತ್ತುವರಿ ನಿಯಂತ್ರಣ, ಒಣ ಕಸ ನಿರ್ವಹಣಾ ಘಟಕಗಳ ಕುರಿತು ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರೊಂದಿಗೆ ಸಮಾಲೋಚನಾ ಸಭೆ ನಡೆಸಲಾಯಿತು.
ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಮುಖ್ಯ ಆಯುಕ್ತರ ನೇತೃತ್ವದಲ್ಲಿ ಸಭೆಯಲ್ಲಿ ಸರ್ಜಾಪುರ ರಸ್ತೆ ಹಾಗೂ ಹೊರ ವರ್ತುಲ ರಸ್ತೆ ಸುತ್ತಮುತ್ತಲಿನ ಮೂಲಸೌಕರ್ಯ ಅಭಿವೃದ್ಧಿ, ರಸ್ತೆ ಸಂಪರ್ಕ ಸುಧಾರಣೆ ಕುರಿತು ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರೊಂದಿಗೆ ಸಮಾಲೋಚನೆ ನಡೆಸಲಾಯಿತು.
ಹೊರ ವರ್ತುಲ ರಸ್ತೆಯ ಬಸ್ ನಿಲ್ದಾಣಗಳ ಸ್ಥಳ ಪರಿಶೀಲನೆ ನಡೆಸಿ ಅಗತ್ಯ ಸುಧಾರಣೆ ಕೈಗೊಳ್ಳಲು ಸೂಚನೆ ನೀಡಿದರು. ಸರ್ಜಾಪುರ-ಇಬ್ಬಲೂರು ಮಾರ್ಗದಲ್ಲಿ ಪಾದಚಾರಿಗಳಿಗೆ ಸುರಕ್ಷಿತ ರಸ್ತೆ ದಾಟುವ ವ್ಯವಸ್ಥೆ ಒದಗಿಸಲು ಕ್ರಮ ವಹಿಸಿ, ಪಾದಚಾರಿ ಸೇತುವೆ (FOB) ನಿರ್ಮಾಣಕ್ಕೆ ಆದ್ಯತೆ ನೀಡಿದರು. ಇನ್ನೂ ಇಬ್ಬಲೂರು-ಕಾರ್ಮೆಲ್ರಾಂ-ಸರ್ಜಾಪುರ ಮಾರ್ಗದಲ್ಲಿ ಪಾದಚಾರಿ ಮಾರ್ಗ ಮತ್ತು ಸೈಕ್ಲಿಂಗ್ ಟ್ರ್ಯಾಕ್ ವಿಸ್ತರಣೆಗೆ ಆದ್ಯತೆ ನೀಡಲಾಗುವುದು.
60 ಕಿಮೀ ವ್ಯಾಪ್ತಿಯ CDP ಹಾಗೂ ಸಂಪರ್ಕ ರಸ್ತೆಗಳ ಅಭಿವೃದ್ಧಿಗೆ ಟಾಸ್ಕ್ ಫೋರ್ಸ್ ರಚನೆಗೆ ಸೂಚನೆ ನೀಡಲಾಯಿತು.
ಇಬ್ಬಲೂರು ಜಂಕ್ಷನ್‌ನಲ್ಲಿ ವೈಜ್ಞಾನಿಕ ಟ್ರಾಫಿಕ್ ವಿನ್ಯಾಸ ಅನ್ವಯಿಸಲು ಸೂಚನೆ ನೀಡಲಾಯಿತು. ಟ್ರಿಪಲ್-ಡೆಕ್ಕರ್ ಮೂಲಕ ಮೂಲಸೌಕರ್ಯ ವಿಸ್ತರಣೆ ಕುರಿತು ಪ್ರಾಥಮಿಕ ಚರ್ಚೆ ನಡೆಸಲಾಗಿದೆ. ORR ಸುತ್ತಮುತ್ತಲಿನ ಸಮಸ್ಯೆಗಳ ಸಾಮೂಹಿಕ ಪರಿಹಾರಕ್ಕಾಗಿ ಪೂರ್ವ ಮತ್ತು ದಕ್ಷಿಣ ನಗರ ಪಾಲಿಕೆಗಳ ಸಂಯುಕ್ತ ಸಮಿತಿ ರಚನೆಗೆ ನಿರ್ದೇಶನ.
ಒಣ ಕಸ ವಿಂಗಡಣೆ ಮತ್ತು ನಿರ್ವಹಣೆ
* 23 ಡ್ರೈ ವೇಸ್ಟ್ ಕಲೆಕ್ಷನ್ ಸೆಂಟರ್‌ಗಳನ್ನು (DWCC) 6 ತಿಂಗಳೊಳಗಾಗಿ ಸಂಪೂರ್ಣ ಕಾರ್ಯಗತಗೊಳಿಸಲು ಆದೇಶ.
* ವರ್ತೂರು DWCC ಘಟಕವನ್ನು ತಕ್ಷಣ ಕಾರ್ಯಾರಂಭ ಮಾಡಲು ಅಧಿಕಾರಿಗಳಿಗೆ ಸೂಚನೆ.
* ಮಹಾದೇವಪುರ ವ್ಯಾಪ್ತಿಯಲ್ಲಿ ಕಸ ಸಂಗ್ರಹಣೆ, ಡೆಬ್ರಿಸ್ ತೆರವು ಕಾರ್ಯ ಬಲಪಡಿಸಲು ಕಟ್ಟುನಿಟ್ಟಿನ ನಿರ್ದೇಶನ.
* ಹೂಡಿ ವೃತ್ತ-ಬಸವಣ್ಣನಗರ ಪ್ರದೇಶದಲ್ಲಿ ಕಸ ಬೀಳುತ್ತಿರುವ ಕುರಿತು ತಕ್ಷಣ ಕ್ರಮ ಕೈಗೊಳ್ಳಲು ಸೂಚನೆ.
ಅನಧಿಕೃತ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ನಿಷೇಧ
* ನಕ್ಷೆ ಮಂಜೂರಾತಿ ಇಲ್ಲದ ಅನಧಿಕೃತ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ನೀಡಬಾರದು ಎಂದು ಬೆಸ್ಕಾಂ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ.
* ಬಳಗೆರೆ ರಸ್ತೆಯಲ್ಲಿ ಬೆಸ್ಕಾಂ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸುವ ಕೆಲಸವನ್ನು ವೇಗಗೊಳಿಸಲು ನಿರ್ದೇಶನ.
ರಾಜಕಾಲುವೆ ಒತ್ತುವರಿ ಪರಿಶೀಲನೆ
* ಮಹಾದೇವಪುರ ವ್ಯಾಪ್ತಿಯ ರಾಜಕಾಲುವೆ ಒತ್ತುವರಿ ಪ್ರಕರಣಗಳನ್ನು ಪರಿಶೀಲಿಸಿ ತಕ್ಷಣ ಕ್ರಮ ಕೈಗೊಳ್ಳಲು ಸೂಚನೆ.
* ಗುಂಜೂರು ಪ್ರದೇಶದಲ್ಲಿ ರಾಜಕಾಲುವೆ ಮೇಲಿನ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಲು ಪರಿಶೀಲನೆ ನಡೆಸುವಂತೆ ಆದೇಶ.












Click it and Unblock the Notifications