ಹೆಗಲ ಮೇಲೆ ಕೈ ಹಾಕಿದ ಸಿದ್ದುಗೆ ಕಮಲ್ ಕೊಟ್ಟ ಉತ್ತರವೇನು?

Recommended Video

      ಸಿದ್ದುನ ಕಮಲ್ ಹಾಸನ್ ಮೀಟ್ ಮಾಡಿದ್ದಕ್ಕೆ ಏನಾಯ್ತು ಗೊತ್ತಾ? | Oneindia Kannada

      ಬೆಂಗಳೂರು, ಮೇ 24: ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಕೂಟ ರಚಿಸಿಕೊಂಡು ಅಧಿಕಾರ ಸ್ಥಾಪಿಸಿದ ಸಂಭ್ರಮದಲ್ಲಿ ಪಾಲ್ಗೊಳ್ಳಲು ಯೂನಿವರ್ಸಲ್ ಸ್ಟಾರ್,ಮಕ್ಕಲ್ ನೀದಿ ಮೈಯಂನ ಅಧಿನಾಯಕ ಕಮಲ್ ಹಾಸನ್ ಅವರು ಕೂಡಾ ಬಂದಿದ್ದರು.

      ಎಚ್ ಡಿ ಕುಮಾರಸ್ವಾಮಿ ಅವರು 25ನೇ ಮುಖ್ಯಮಂತ್ರಿಯಾಗಿ, ಜಿ ಪರಮೇಶ್ವರ್ ಅವರು ಉಪ ಮುಖ್ಯಮಂತ್ರಿಯಾಗಿ ಬುಧವಾರದಂದು ವಿಧಾನಸೌಧದ ಮುಂಭಾಗದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

      ಚಿತ್ರಗಳು : ಶಕ್ತಿಸೌಧದ ಮುಂದೆ ಕುಮಾರಣ್ಣ ಪದಗ್ರಹಣ

      ಈ ಸಮಾರಂಭಕ್ಕೆ ದೇಶದ ವಿವಿಧೆಡೆಯಿಂದ ಗಣ್ಯಾತಿಗಣ್ಯರು ಆಗಮಿಸಿದ್ದರು. ಕಮಲ್ ಹಾಸನ್ ಅವರು ಕೂಡಾ ಆಗಮಿಸಿ, ರಾಜ್ಯದ ಕಾಂಗ್ರೆಸ್ ನಾಯಕರ ಜತೆ ಆತ್ಮೀಯವಾಗಿ ಮಾತುಕತೆ ನಡೆಸಿದರು. ಇದೇ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆ ಉಭಯ ಕುಶಲೋಪರಿ ನಡೆಸಿದ್ದರ ಬಗ್ಗೆ ಹಾಸ್ಯದ ಧಾಟಿಯಲ್ಲಿ ಒಂದು ಟ್ವೀಟ್ ಗಮನಸೆಳೆಯುತ್ತದೆ.

      Comedy Tweet and reaction : When Kamal Hassan meets Siddaramaiah

      ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕ ಮತ್ತು ತಮಿಳುನಾಡು ಸ್ನೇಹ ಕಾಪಾಡಿಕೊಳ್ಳಬೇಕು ಎನ್ನುವ ಕಮಲ್ ಹಾಸನ್ ಅವರು ಇತ್ತೀಚಿಗೆ ಸುಪ್ರೀಂಕೋರ್ಟ್ ನಿಂದ ತೀರ್ಪನ್ನು ಒಪ್ಪದೆ, ನೈಸರ್ಗಿಕ ಸಂಪತ್ತು ಎಲ್ಲರೂ ಸಮಾನವಾಗಿ ಹಂಚಿಕೊಳ್ಳಬೇಕು, ಈ ವಿಷಯದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ಎಂದಿದ್ದಾರೆ.


      ಸದ್ಯ ಈ ಟ್ವೀಟ್ ನಲ್ಲಿ ಸಿದ್ದರಾಮಯ್ಯ ಅವರು ಕಮಲ್ ಹೆಗಲಮೇಲೆ ಕೈಹಾಕಿ ಮಾತನಾಡಿಸುತ್ತಿರುವ ಚಿತ್ರವಿದೆ. ಪಂಚೆ ಉಟ್ಟುಕೊಂಡು ಬಂದಿದ್ದೇಕೆ? ಎಂದು ತಮ್ಮ ಶೈಲಿಯಲ್ಲಿ ಕಮಲ್ ರನ್ನು ಪ್ರಶ್ನಿಸುತ್ತಾರೆ.

      ಇದಕ್ಕೆ ಅಚ್ಚತಮಿಳಿನಲ್ಲಿ ಉತ್ತರಿಸುವ ಕಮಲ್, ಶ್ರೀಸಿದ್ದರಾಮಯ್ಯ ಅವರೇ, ನಮ್ಮ ಮನೆಯಲ್ಲಿ ಬಟ್ಟೆ ತೊಳೆಯುವುದಕ್ಕೆ ನೀರಿಲ್ಲದ್ದಂತಾಗಿದೆ. ಇಂಥ ಪರಿಸ್ಥಿತಿಯಲ್ಲಿ ನಾವಿದ್ದೇವೆ.ಹಾಗಾಗಿ, ನೀವು ಶ್ರೀಕುಮಾರ್ (ಕುಮಾರಸ್ವಾಮಿ) ಅವರಿಗೆ ಹೇಳಿ, ಕಾವೇರಿಯನ್ನು ನಮಗೆ ಸ್ವಂತವಾಗಿ ಬಿಡಬೇಕು ಎಂದು ಕೇಳಿಕೊಳ್ಳುತ್ತಿದ್ದೇನೆ ಎನ್ನುತ್ತಾರೆ ಎಂದು ಕಾಲ್ಪನಿಕವಾಗಿ ಟ್ವೀಟ್ ಮಾಡಲಾಗಿದೆ. ಓದಿ ಆನಂದಿಸಿ

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+