ಎಲೆಕ್ಟ್ರಿಕ್ ಬಸ್ ಯೋಜನೆಯ ಚೆಂಡು ಈಗ ಸಿಎಂ ಅಂಗಳದಲ್ಲಿ
ಬೆಂಗಳೂರು, ನವೆಂಬರ್ 8: ಕಳೆದ ಒಂದು ವರ್ಷದಿಂದ ನೆನಗುದಿಗೆ ಬಿದ್ದಿದ್ದ ಎಲೆಕ್ಟ್ರಿಕ್ ಬಸ್ ಖರೀದಿ ಯೋಜನೆಗೆ ಇದೀಗ ಬರುಜೀವ ಬಂದಂತಿದೆ. ಸಿಎಂ ಒಪ್ಪಿಗೆ ಸೂಚಿಸಿದರೆ ಶೀಘ್ರವೇ ಬಸ್‌ಗಳನ್ನು ಖರೀದಿಸಲಾಗುತ್ತದೆ.
ಕೇಂದ್ರದ ಫಾಸ್ಟರ್ ಅಡಾಪ್ಷನ್ ಅಂಡ್ ಮಾನ್ಯುಫ್ಯಾಕ್ಚರಿಂಗ್ ಆಫ್ ಎಲೆಕ್ಟ್ರಿಕ್ ವೆಹಿಕಲ್ಸ್ ಅನುದಾನದಲ್ಲಿ ಗುತ್ತಿಗೆ ಆಧಾರದಡಿ 150 ಬಸ್‌ಗಳನ್ನು ಬಿಎಂಟಿಸಿ ಪಡೆಯಲಿದೆ. ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಯೋಜನೆಬಗ್ಗೆ ಬಿಎಂಟಿಸಿ ಹಾಗೂ ಸಾರಿಗೆ ಸಚಿವ ಡಿಸಿ ತಮ್ಮಣ್ಣ ಭಿನ್ನಾಭಿಪ್ರಾಯ ಹೊಂದಿದ್ದೇ ವಿಳಂಬಕ್ಕೆ ಕಾರಣವಾಗಿದೆ ಎನ್ನಲಾಗಿದೆ.
ಗುತ್ತಿಗೆ ಆಧಾರದಲ್ಲಿ ಅತಿ ಕಡಿಮೆ ದರದಲ್ಲಿ ನಿಗಮಕ್ಕೆ ಎಲೆಕ್ಟ್ರಿಕ್ ಬಸ್ ದೊರೆಯಲಿದೆ ಎಂದು ಬಿಎಂಟಿಸಿ ಹೇಳಿದ್ದರೆ, ಖಾಸಗಿ ಕಂಪನಿಗೇಕೆ ಲಾಭ ಮಾಡಿಕೊಡಬೇಕು ಎನ್ನುವುದು ಸಚಿವರ ಅಭಿಪ್ರಾಯವಾಗಿತ್ತು. ಅಷ್ಟೇ ಅಲ್ಲದೆ ಬಿಎಂಟಿಸಿ ಹಿರಿಯ ಅಧಿಕಾರಿಗಳ ವಿರುದ್ಧ ಬ್ರಷ್ಟಾಚಾರ ಆರೋಪವೂ ಕೇಳಿಬಂದಿತ್ತು.

ಮೊದಲ ಹಂತದಲ್ಲಿ 80 ಬಸ್‌ಗಳನ್ನ ಗುತ್ತಿಗೆ ಆಧಾರದಲ್ಲಿ ನಿಗಮ ಖರೀದಿಸುತ್ತದೆ. ಇದರಲ್ಲಿ 12 ಮೀಟರ್ ಉದ್ದದ 39 ಸೀಟು ಸಾಮರ್ಥ್ಯದ 60 ಎಸಿ ಬಸ್‌ಗಳು ಹಾಗೂ 9 ಮೀ. ಉದ್ದದ 31 ಸೀಟಿನ 20 ಎಸಿರಹಿತ ಬಸ್‌ಗಳು ಇರಲಿವೆ.












Click it and Unblock the Notifications