100 ಹೊಸ ಬಿಎಂಟಿಸಿ ಎಲೆಕ್ಟ್ರಿಕ್ ಬಸ್‌ಗಳಿಗೆ ಸಿಎಂ ಸಿದ್ದರಾಮಯ್ಯ ಚಾಲನೆ, ಮಾರ್ಗ, ವಿಶೇಷತೆ ತಿಳಿಯಿರಿ

ಬೆಂಗಳೂರು, ಡಿಸೆಂಬರ್‌ 26: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ವಿಧಾನಸೌಧದ ಮುಂಭಾಗದಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) 100 ಟಾಟಾ ನಾನ್‌ ಎಸಿ ಎಲೆಕ್ಟ್ರಿಕ್ ಬಸ್‌ಗಳಿಗೆ ಚಾಲನೆ ನೀಡಿದರು.

100 ಎಲೆಕ್ಟ್ರಿಕ್ ಬಸ್‌ಗಳು 921 ಬಸ್‌ಗಳ ಮೊದಲ ಬ್ಯಾಚ್ ಆಗಿದ್ದು, ಕೇಂದ್ರ ಸರ್ಕಾರದ ವೇಗದ ಅಳವಡಿಕೆ ಮತ್ತು ಎಲೆಕ್ಟ್ರಿಕ್ ವೆಹಿಕಲ್ಸ್ (FAME-II) ಯೋಜನೆಯ ಭಾಗವಾಗಿ ಬಿಎಂಟಿಸಿಗೆ ಸೇರ್ಪಡೆಗೊಳ್ಳಲಿದೆ. ಈಗ 100 ನಾನ್ ಎಸಿ ಎಲೆಕ್ಟ್ರಿಕ್ ಬಸ್‌ಗಳನ್ನು ನಗರದಾದ್ಯಂತ ನಿಯೋಜಿಸಲಾಗುವುದು.

CM Siddaramaiah flags off 100 New BMTC Electric Buses, Know Route, Special

ಈ ಎಲೆಕ್ಟ್ರಿಕ್ ಬಸ್‌ಗಳು ಆರಂಭದಲ್ಲಿ ಶಾಂತಿನಗರ, ಕೆಆರ್ ಪುರಂ, ಹೆಣ್ಣೂರು, ದೀಪಾಂಜಲಿನಗರ, ಕನ್ನಳ್ಳಿ, ಪೀಣ್ಯ, ಜಿಗಣಿ ಮತ್ತು ಜಯನಗರ ಎಂಬ ಎಂಟು ಡಿಪೋಗಳಿಂದ ಕಾರ್ಯನಿರ್ವಹಿಸಲಿವೆ. ಕಡಿಮೆ ಎತ್ತರದ ಕಡು ನೀಲಿ ಬಣ್ಣದ ಬಸ್‌ಗಳು ನಗರದಲ್ಲಿ ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ಬಿಎಂಟಿಸಿಯ ಗುರಿಗೆ ಸಹಾಯ ಮಾಡುತ್ತವೆ.

ಟಾಟಾ ಮೋಟಾರ್ಸ್ ಬಸ್ಸುಗಳು:

ರಾಜ್ಯ ಸರ್ಕಾರವು ಟಾಟಾ ಮೋಟಾರ್ಸ್‌ನೊಂದಿಗೆ ಕಳೆದ ವರ್ಷ ಒಪ್ಪಂದಕ್ಕೆ ಸಹಿ ಹಾಕಿದ್ದು, ಈ ಕಂಪೆನಿ ಬಸ್‌ಗಳನ್ನು 12 ವರ್ಷಗಳವರೆಗೆ ನಿರ್ವಹಿಸುತ್ತದೆ. ಬಿಎಂಟಿಸಿ ಈ ಬಸ್‌ಗಳಿಗೆ ಕಂಡಕ್ಟರ್‌ಗಳನ್ನು ನಿಯೋಜಿಸುತ್ತದೆ. ಗುತ್ತಿಗೆ ಒಪ್ಪಂದದ ಪ್ರಕಾರ ಈ ಬಸ್‌ಗಳನ್ನು ನಿರ್ವಹಿಸುವ ಖಾಸಗಿ ಸಂಸ್ಥೆಗೆ ಪ್ರತಿ ಕಿ.ಮೀ.ಗೆ 41 ರೂ.ಗಳನ್ನು ಪಾವತಿಸಲು ಬಿಎಂಟಿಸಿ ಒಪ್ಪಿಕೊಂಡಿದೆ. ಒಪ್ಪಂದವು ಕಂಪನಿಯು ಪ್ರತಿ ಬಸ್ ಅನ್ನು ದಿನಕ್ಕೆ ಕನಿಷ್ಠ 200 ಕಿಮೀ ಮತ್ತು ವರ್ಷಕ್ಕೆ 70,000 ಕಿಮೀ ಓಡಿಸಲು ಕಡ್ಡಾಯಗೊಳಿಸುತ್ತದೆ.

ಬಸ್ ವೈಶಿಷ್ಟ್ಯಗಳು:

1. ಶೂನ್ಯ ಇಂಗಾಲ ಹೊರಸೂಸುವಿಕೆ ಮತ್ತು ಪರಿಸರ ಸ್ನೇಹಿ ಬಸ್ಸುಗಳು.
2. ಬಸ್‌ಗಳು 12 ಮೀಟರ್ ಉದ್ದ, 400 ಎಂಎಂ ನೆಲದ ಎತ್ತರದ ನಾನ್-ಎಸಿ ಎಲೆಕ್ಟ್ರಿಕ್ ಬಸ್‌ಗಳಾಗಿವೆ.
3. ಬಸ್‌ಗಳು ಪ್ರತಿ ಚಾರ್ಜ್‌ಗೆ 200 ಕಿಮೀ ಖಚಿತವಾಗಿ ಕಾರ್ಯನಿರ್ವಹಿಸುತ್ತವೆ.

ಈ ಬಸ್ಸುಗಳು 35 ಪ್ರಯಾಣಿಕರು ಕುಳಿತುಕೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತವೆ. ಬಸ್‌ನಲ್ಲಿ ಚಾಲಕನಿಗೆ ಸಹಾಯ ಮಾಡಲು ಮೂರು ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಎಲೆಕ್ಟ್ರಿಕ್ ಬಸ್‌ಗಳು ನಾಲ್ಕು ಎಲ್‌ಇಡಿ ಡೆಸ್ಟಿನೇಶನ್ ಬೋರ್ಡ್‌ಗಳನ್ನು ಹೊಂದಿದ್ದು, ಪ್ರಯಾಣಿಕರಿಗೆ ಸಹಾಯ ಮಾಡಲು ಧ್ವನಿ ಪ್ರಕಟಣೆ ವ್ಯವಸ್ಥೆಯನ್ನು ಹೊಂದಿದೆ.

ಮಹಿಳೆಯರ ಸುರಕ್ಷತೆಗಾಗಿ ಹೊಚ್ಚ ಹೊಸ ಬಸ್‌ಗಳಲ್ಲಿ ಪ್ಯಾನಿಕ್ ಬಟನ್‌ಗಳನ್ನು ಅಳವಡಿಸಲಾಗಿದೆ. ವಾಹನವು ಫೈರ್ ಡಿಟೆಕ್ಷನ್ ಮತ್ತು ಅಲಾರ್ಮ್ ಸಿಸ್ಟಮ್ (FDAS) ಅನ್ನು ಸಹ ಒಳಗೊಂಡಿದೆ. ಕೇಂದ್ರ ಸರ್ಕಾರದ ವೇಗದ ಅಳವಡಿಕೆ ಮತ್ತು ಎಲೆಕ್ಟ್ರಿಕ್ ವೆಹಿಕಲ್ಸ್ (FAME-II) ಯೋಜನೆಯಡಿಯಲ್ಲಿ 921 ಬಸ್‌ಗಳ ಹೊರತಾಗಿ ಬಿಎಂಟಿಸಿ ತನ್ನ ಹಸಿರು ಬಸ್‌ಗಳ ಜಾಲಕ್ಕೆ ಸೇರಿಸಲು ಇನ್ನೂ 380 ಎಲೆಕ್ಟ್ರಿಕ್ ಬಸ್‌ಗಳನ್ನು ಖರೀದಿಸಲು ಯೋಜಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+