ಜಯನಗರ ಪಟಾಲಮ್ಮ ಜಾತ್ರೆ ವೈಭವ, ನೋಡಲು ಎರಡು ಕಣ್ಣು ಸಾಲದವ್ವ

Recommended Video

      Patalamma Temple, Jayanagar: ಜಯನಗರದಲ್ಲಿ ಅದ್ದೂರಿಯಾಗಿ ನಡೆದ ಪಟಾಲಮ್ಮ ದೇವಿ ಜಾತ್ರೆ | Oneindia Kannada

      ಬೆಂಗಳೂರು, ಮೇ 15: ಪಟಾಲಮ್ಮ ದೇವಿಯ ವೈಭವ, ಕಣ್ತುಂಬಿಕೊಳ್ಳಲು ಎರಡು ಕಣ್ಣು ಸಾಲದು ಹೇಗೆ ವರ್ಣಿಸವ್ವ ನಿನ್ನ.

      ಜಯನಗರ ಆಸುಪಾಸಿನಲ್ಲಿ ಎಲ್ಲಿ ನೋಡಿದರಲ್ಲಿ ಡೊಳ್ಳಿನ ಸದ್ದು, ಕಂಸಾಳೆ ನೃತ್ಯ, ಕೋಲಾಟ ಒಟ್ಟಿನಲ್ಲಿ ಯಾವುದೋ ಹಳ್ಳಿಯ ಜಾತ್ರೆಗೆ ತೆರಳಿದಂಥಾ ಅನುಭವ. ಅದರ ಮಧ್ಯೆ ಸಾವಿರಾರು ಪುಷ್ಪ ಮಾಲೆಗಳಿಂದ ಆವೃತಗೊಂಡು ಗಂಭೀರವಾಗಿ ಬರುತ್ತಿರುವ ಪಟಾಲಮ್ಮ ದೇವಿಯ ರಥ ಇನ್ನೊಂದೆಡೆ.

      ಹೌದು ಜಯನಗರ ಪಟಾಲಮ್ಮ ಮಹೋತ್ಸವ ಮತ್ತೆ ಬಂದಿದೆ, ಕನಕಪಾಳ್ಯದಿಂದ ಆರಂಭವಾದ ರಥೋತ್ಸವ ಜಯನಗರ ಪಟಾಲಮ್ಮ ದೇವಸ್ಥಾನದವರೆಗೂ ಮುಂದುವರೆದಿದೆ. ಸಾವಿರಾರು ಭಕ್ತಾದಿಗಳು ತಂಬಿಟ್ಟಿನ ಆರತಿಯನ್ನು ಹೊತ್ತುಕೊಂಡು ರಸ್ತೆ ತುಂಬೆಲ್ಲಾ ಪಟಾಲಮ್ಮ ದೇವಿಗೆ ಜೈಕಾರ ಹಾಕುತ್ತಾ ತೆರಳಿದರು.

      CM Kumaraswamy inaugurated Patalamma mahotsava in kanakapalya

      ಇನ್ನೊಂದೆಡೆ ಬೀಸು ಕಂಸಾಳೆ, ವೀರಗಾಸೆ, ಯಕ್ಷಗಾನ, ಕೀಲುಕುದುರೆ, ಲಂಬಾಣಿ ನೃತ್ಯ, ಸೋಲಿಗರ ನೃತ್ಯ ಎಲ್ಲರ ಗಮನ ಸೆಳೆಯಿತು.

      ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

      ದೇವರ ಜಾತ್ರೆಗಳು ಗ್ರಾಮಗಳ ಒಂದು ಪ್ರಮುಖ ಪರಂಪರೆ, ಸಾಮಾನ್ಯವಾಗಿ ಒಂದು ಸಾರ್ವಜನಿಕ ಉದ್ದೇಶಕ್ಕಾಗಿ ಒಂದುಗೂಡುವಿಕೆಯನ್ನು ಮಹೋತ್ಸವ ಎನ್ನುತ್ತೇವೆ.

      ಹೀಗೆ ಐದು ಊರುಗಳು ಸೇರಿ ಮಾಡುವ ಪಟಾಲಮ್ಮ ದೇವಿ ಮಹೋತ್ಸವಕ್ಕೆ ಬೆಂಗಳೂರಿನ ಕನಕಪಾಳ್ಯದಲ್ಲಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿಯವರಿಂದ ಚಾಲನೆ ದೊರೆತಿದೆ.

      ಜಯನಗರದ ಐದು ಬಡಾವಣೆಗಳ ಗ್ರಾಮದೇವತೆ ಉತ್ಸವದ ಚಿತ್ರಸಂಪುಟ

      ಜಾತ್ರೆಗಳ ಮೂಲಕ ಜಾತ್ಯಾತೀತ ಕಲ್ಪನೆಗಳು, ಎಲ್ಲಾ ಜಾತಿಯವರನ್ನು ಒಟ್ಟುಗೂಡಿಸಿ ಅವರೆಲ್ಲರ ಸಹಕಾರದಿಂದ ನೆರವೇರಿಸುವ ಪೂಜೆ ಪುನಸ್ಕಾರದಲ್ಲಿ ಒಂದು ಬಗೆಯ ಸಹಬಾಳ್ವೆಯ ಆದರ್ಶವಿದೆ.

      ನಾಗಸಂದ್ರ, ಕನಕಪಾಳ್ಯ, ಭೈರಸಂದ್ರ, ಸಿದ್ದಾಪುರ, ಯಡಿಯೂರು ಗ್ರಾಮಸ್ಥರೆಲ್ಲರೂ ಸೇರಿ ಮಹೋತ್ಸವವನ್ನು ಆಚರಿಸುತ್ತಾರೆ.

      ಕನಕಪಾಳ್ಯದಿಂದ ಆರಂಭವಾಗಿ ಜಯನಗರದಲ್ಲಿ ಕೊನೆಗೊಳ್ಳುವ ರಥೋತ್ಸವ ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುತ್ತದೆ. ದೇವಸ್ಥಾನದ ಮುಂಭಾಗ ಕೆಂಡ ಹಾಯುವ ಪದ್ಧತಿಯೂ ಕೂಡ ಚಾಲ್ತಿಯಲ್ಲಿದೆ. ಒಂದು ತಂಬಿಟ್ಟಿನ ಆರತಿ ಖರೀದಿಸಲು ಸುಮಾರು 4 ರಿಂದ 5 ಸಾವಿರ ರೂ ನೀಡಬೇಕಾಗುತ್ತದೆ. ದೊಡ್ಡವರು, ಮಕ್ಕಳು ಎನ್ನುವ ಬೇಧಭಾವವಿಲ್ಲದೆ ಬಣ್ಣಬಣ್ಣದ ಉಡುಗೆ ತೊಟ್ಟು ಹಬ್ಬದಂತೆ ಸಂಭ್ರಮಿಸಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+