ಆಪರೇಷನ್ ಆಡಿಯೋ ಬಾಂಬ್ ಸಿಡಿಸಿದ ಕುಮಾರಸ್ವಾಮಿ

Recommended Video

      ಯಡಿಯೂರಪ್ಪ ಮೇಲೆ ಆಡಿಯೋ ಬಾಂಬ್ ಎಸೆದ ಕುಮಾರಣ್ಣ!

      ಬೆಂಗಳೂರು, ಫೆಬ್ರವರಿ 8: ಗುರುಮಠಕಲ್ ಶಾಸಕ ನಾಗನಗೌಡ ಪುತ್ರ ಶರಣಗೌಡ ಅವರನ್ನು ಬಿಜೆಪಿಗೆ ಸೆಳೆಯಲು ಮುಂದಾಗಿದ್ದ ಬಿಎಸ್‌ಯಡಿಯೂರಪ್ಪ ಅವರ ಸಂಭಾಷಣೆ ಇರುವ ಆಡಿಯೋವನ್ನು ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಬಿಡುಗಡೆ ಮಾಡಿದ್ದಾರೆ.

      ಅಂದಾಜು 40 ನಿಮಿಷಗಳ ಅವಧಿಯ ಆಡಿಯೋ ಕ್ಲಿಪ್​ ಅನ್ನು ಬಿಡುಗಡೆ ಮಾಡಿದರು. ಗುರುಮಟ್ಕಲ್​ ಶಾಸಕ ನಾಗನಗೌಡ ಕಂದಕೂರು ಅವರ ಪುತ್ರ ಶರಣಗೌಡ ಕಂದಕೂರು ​ಈ ಆಡಿಯೋ ಕ್ಲಿಪ್​ ಅನ್ನು ರೆಕಾರ್ಡ್​ ಮಾಡಿಕೊಂಡು ತಮಗೆ ಕೊಟ್ಟಿದ್ದಾಗಿ ಕುಮಾರಸ್ವಾಮಿ ಹೇಳಿದರು.

      ನೀನು ನನ್ನ ಮಗ ವಿಜಯೇಂದ್ರ ಇದ್ದಂತೆಯೇ ಎಂದು ಹೇಳುತ್ತಾ ಬಿಎಸ್ ಯಡಿಯೂರಪ್ಪ ಹಣದ ಆಮಿಷವನ್ನು ಒಡ್ಡಲು ಪ್ರಯತ್ನ ಮಾಡಿದ್ದಾರೆ, ಆದರೆ ಶರಣಗೌಡ ಅವರು ನನಗೆ ಕಾಲ್ ಮಾಡಿದ್ದರಿಂದ ಎಲ್ಲವನ್ನೂ ನಾನೇ ರೆಕಾರ್ಡ್ ಮಾಡಿದ್ದೇನೆ ಎಂದು ಎಚ್‌ಡಿಕೆ ವಿವರಿಸಿದ್ದಾರೆ.

      ಕರ್ನಾಟಕದ ರೈತರ ಸಾಲಮನ್ನಾ ಕುರಿತು ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ತಪ್ಪು ಮಾಹಿತಿ ನೀಡಿದ್ದಾರೆ, ಸಭೆಯ ದಿಕ್ಕು ತಪ್ಪಿಸುವ ಕೆಲಸ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ.

      ರೈತರ ಸಾಲಮನ್ನಾ ಬಗ್ಗೆ ಪ್ರಧಾನಿ ತಪ್ಪು ಮಾಹಿತಿ ನೀಡಿದ್ದಾರೆ, ರಾಷ್ಟ್ರೀಯ ಪತ್ರಿಕೆಗಳಲ್ಲಿ ಈ ಕುರಿತು ಜಾಹೀರಾತು ಕೂಡ ನೀಡಿದ್ದೇನೆ, ಎಲ್ಲಿಯವರೆಗೆ ಸಾಲ ಮನ್ನಾ ಮಾಡಲಾಗಿದೆ, ಯೋಜನೆ ಯಾವ ಹಂತಕ್ಕೆ ಬಂದು ತಲುಪಿದೆ ಎಲ್ಲದರ ಬಗ್ಗೆಯೂ ಮಾಹಿತಿ ನೀಡಿದ್ದೇನೆ ಆದರೂ ತಪ್ಪು ಸಂದೇಶ ರವಾನಿಸಿದ್ದಾರೆ.

      CM hdk released BJPs Operation Audio

      ಕಳೆದ ಎರಡು ಮೂರು ದಿನಗಳಲ್ಲಿ 2 ಸಾವಿರ ಕೋಟಿರಾಷ್ಟ್ರೀಯ ಬ್ಯಾಂಕ್‌ಗಳ ಸಾಲ ಮನ್ನಾ, 1500 ಕೋಟಿ ಸ್ವಸಹಾಯ ಸಾಲಮನ್ನಾ ಮಾಡಲಾಗಿದೆ ಇದೆಲ್ಲದರ ಬಗ್ಗೆ ಮಾಹಿತಿ ನೀಡಿದ್ದೇವೆ ಆದರೂ ಕೂಡ ಸಾಲಮನ್ನಾ ಮಾಡಿಲ್ಲ ಎನ್ನುವ ಮಾತು ಕೇಳಿ ಬರುತ್ತಿದೆ. ಪ್ರಜಾಪ್ರಭುತ್ವವನ್ನು ಕಾಪಾಡುವ ಇವರೇ ಪ್ರಜಾಪ್ರಭುತ್ವವನ್ನು ನಾಶಮಾಡುತ್ತಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+