ಮೋದಿಗೆ ಬಿಜೆಪಿ ಶಾಸಕ ತಂದಿದ್ದ ಗಣೇಶ ವಿಗ್ರಹ ಕೊಟ್ಟರೇ ಡಿಸಿಎಂ ಡಿ.ಕೆ ಶಿವಕುಮಾರ್ ? ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ?!
ಪ್ರಧಾನಿ ನರೇಂದ್ರ ಮೋದಿ ಅವರು ಈಚೆಗೆ ಬೆಂಗಳೂರಿನ ಯೆಲ್ಲೋ ಮೆಟ್ರೋ ರೈಲು ಉದ್ಘಾಟನೆಗೆ ಬಂದಾಗ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರು ಮಾಡಿರುವ ಎರಡು ಕೆಲಸಗಳು ಭಾರೀ ಚರ್ಚೆಗೆ ಕಾರಣವಾಗಿದೆ. ಒಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಸಿಕ್ಕ ಕಡಿಮೆ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಬೆಂಗಳೂರು ಅಭಿವೃದ್ಧಿ ವಿಚಾರವಾಗಿ ಮಾತನಾಡಿದ್ದರು. ಅಲ್ಲದೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬೆಳ್ಳಿ ಗಣೇಶ ಮೂರ್ತಿಯನ್ನೂ ಕೊಟ್ಟಿದ್ದರು. ಆದರೆ, ಅದು ಬಿಜೆಪಿ ಶಾಸಕರೊಬ್ಬರ ಗಣೇಶ ಮೂರ್ತಿ ಎಂದು ಹೇಳಲಾಗಿದ್ದು. ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಸೋಷಿಯಲ್ ಮೀಡಿಯಾದಲ್ಲಿ ಈ ವಿಚಾರವು ಭಾರೀ ಟ್ರೋಲ್ ಆಗುತ್ತಿದೆ. ಅರುಣಾ ಎನ್ನುವವರು, ಸಾಮಾನ್ಯ ಜನರು ಅವಕಾಶಗಳಿಗಾಗಿ ಕಾಯುತ್ತಾರೆ. ಆದರೆ ಬುದ್ಧಿವಂತರು ಅವಕಾಶಗಳನ್ನು ಸೃಷ್ಟಿಸುತ್ತಾರೆ. ಇದು ಚೆನ್ನಾಗಿದೆ ಎಂದಿದ್ದಾರೆ. ಮತ್ತೊಬ್ಬರು ದಿ. ಪುನೀತ್ ರಾಜ್‌ಕುಮಾರ್ ಅವರ ಫೇಮಸ್ ಡೈಲಾಗ್ ಪಟಾಕಿ ಯಾರದ್ದಾದರೇನು ಹಚ್ಚೋರು ನಾವಾಗಿರಬೇಕು ಎನ್ನುವಂತೆ ಇದೆ ಇದು ಎಂದು ಹಲವರು ತಮಾಷೆ ಮಾಡಿದ್ದಾರೆ. ಡಿ.ಕೆ ಶಿವಕುಮಾರ್ ಅವರ ಕ್ರಿಯೇಟಿವಿಟಿಗೆ ಮೆಚ್ಚ ಬೇಕು ಸಿಕ್ಕ ಸೈಕಲ್ ಗ್ಯಾಪ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಕುಳಿತು ಬೆಂಗಳೂರಿನ ಬಗ್ಗೆ ಫೈಲ್ ತಗೊಂಡು ಹೋಗಿ ಚರ್ಚೆ ಮಾಡಿದರು. ಗಿಫ್ಟ್ ಅನ್ನೂ ಕೊಟ್ಟಿದ್ದಾರೆ ಅಂತಾ ಹೇಳಿದ್ದಾರೆ.

ಆದರೆ ಇನ್ನೂ ಕೆಲವರು ಈ ರೀತಿ ಬೇರೆ ಅವರ ಗಿಫ್ಟ್ ಕೊಡೋದನ್ನ ಕ್ರಿಯೇಟಿವಿಟಿ ಅಂತಾರೆಯೇ. ಅವಕಾಶ ಬಳಕೆ ಅಂತಾ ಆಗಲ್ವಾ ಎಂದೂ ಹೇಳಿದ್ದಾರೆ. ಒಟ್ಟಾರೆ ಈ ವಿಷಯದ ಬಗ್ಗೆ ಪರ - ವಿರೋಧ ಚರ್ಚೆಗಳು ಜೋರಾಗಿವೆ. ಅಷ್ಟಕ್ಕೂ ನಮ್ಮ ಮೆಟ್ರೋ ಯೆಲ್ಲೋ ಲೈನ್ ಉದ್ಘಾಟನೆಯ ವೇಳೆ ಏನಾಗಿದೆ ಎಂದು ಹೇಳಲಾಗುತ್ತಿದೆ ಎನ್ನುವ ವಿವರ ಇಲ್ಲಿದೆ.
ಬಿಜೆಪಿ ಶಾಸಕರ ಗಣಪತಿ ವಿಗ್ರಹ ಕೊಟ್ಟ ಡಿ.ಕೆ ಶಿವಕುಮಾರ್ ?
ಹೌದು ಬೆಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡಿದ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಕೊಟ್ಟ ಗಿಫ್ಟ್ ಬಿಜೆಪಿ ಶಾಸಕ ಎಂ. ಕೃಷ್ಣಪ್ಪ ಅವರದ್ದು ಎಂದು ಹೇಳಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಉಪ ಮುಖ್ಯಮಂತ್ರಿ ಅವರು ಬಿಜೆಪಿ ಶಾಸಕ ಎಂ. ಕೃಷ್ಣಪ್ಪ ಅವರು ತಂದಿದ್ದ ಬೆಳ್ಳಿಯ ಗಣಪತಿ ವಿಗ್ರಹವನ್ನು ಕೊಟ್ಟಿದ್ದಾರೆ ಎಂದು ಹೇಳಲಾಗಿದೆ.
Average people wait for opportunities, the great ones create opportunities. Well done @DKShivakumar pic.twitter.com/GjS8q0bo0N
— Aruna Urs (@Arunaurs) August 12, 2025
ಈ ವಿಗ್ರಹವನ್ನು ಎಂ. ಕೃಷ್ಣಪ್ಪ ಅವರು ತಂದಿದ್ದರು. ಆದರೆ, ಎಸ್‌ಪಿಜಿ ಸಿಬ್ಬಂದಿ ಆ ಗಿಫ್ಟ್ ಅನ್ನು ತಪಾಸಣೆ ಮಾಡಿ ಟೇಬಲ್ ಮೇಲೆ ಇರಿಸಿದ್ದರು. ಆಗ ಆ ಸ್ಥಳಕ್ಕೆ ಬಂದಿದ್ದ ಡಿ.ಕೆ ಶಿವಕುಮಾರ್ ಅವರು ಆ ಬೆಳ್ಳಿ ವಿಗ್ರಹವನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೊಟ್ಟಿದ್ದಾರೆ ಎನ್ನಲಾಗಿದೆ. ಕೊನೆಗೆ ಗಿಫ್ಟ್ ಎಲ್ಲಿ ಎಂದು ಹುಡುಕಿದ ಕೃಷ್ಣಪ್ಪ ಅವರು ನಿರಾಸೆ ಅನುಭವಿಸಿದ್ದಾರೆ ಎಂದು ಹೇಳಲಾಗಿದೆ.
ಡಿ.ಕೆ ಶಿವಕುಮಾರ್ ಸ್ಪಷ್ಟನೆ: ಈ ವಿಷಯದ ಬಗ್ಗೆ ಸ್ಪಷ್ಟನೆ ನೀಡಿರುವ ಡಿ.ಕೆ ಶಿವಕುಮಾರ್ ಅವರು ಇದು ಸುಳ್ಳು ಸುದ್ದಿ. ಬೇರೆಯವರ ಉಡುಗೊರೆಯನ್ನು ಮತ್ತೊಬ್ಬರಿಗೆ ನೀಡುವ ದುಸ್ಥಿತಿ ಬಂದಿಲ್ಲ ಎಂದಿದ್ದಾರೆ.












Click it and Unblock the Notifications