ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬದುಕಿನ ಕ್ಲಿಷ್ಟ ಪ್ರಶ್ನೆಗಳಿಗೆ ಉತ್ತರ ಅರ್ಥೈಸಿಕೊಳ್ಳುವ ಆಧ್ಯಾತ್ಮಿಕ ಕೇಂದ್ರ ಆರ್ಟ್‌ ಆಫ್ ಲಿವಿಂಗ್: ಸಿಎಂ

|
Google Oneindia Kannada News

ಬೆಂಗಳೂರು,ಅಕ್ಟೋಬರ್ 27 : ಆರ್ಟ್ ಆಫ್ ಲಿವಿಂಗ್, ಬದುಕಿನ ಕ್ಲಿಷ್ಟವಾದ ಪ್ರಶ್ನೆಗಳಿಗೆ ಉತ್ತರಗಳನ್ನು ಅರ್ಥೈಸಿಕೊಳ್ಳುವ ಒಂದು ಆಧ್ಯಾತ್ಮಿಕ ಕೇಂದ್ರ. ಜೀವನದ ಅರ್ಥವನ್ನು ಸರಳ ರೀತಿಯಲ್ಲಿ ಕಂಡುಕೊಳ್ಳುವ ವಿಧಾನ ಪದ್ಧತಿಗಳನ್ನು ತಿಳಿಯಲು ಈ ಕೇಂದ್ರಕ್ಕೆ ಬರಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಆರ್ಟ್ ಆಫ್ ಲಿವಿಂಗ್ ಸೆಂಟರ್‌ನಲ್ಲಿ ಏರ್ಪಡಿಸಿದ್ದ ದೀಪಾವಳಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಶ್ರೀ ರವಿಶಂಕರ್ ಗುರೂಜಿ ಅವರನ್ನು ಭೇಟಿಯಾಗುವುದು ನನ್ನ ಪಾಲಿಗೆ ಅಮೃತ ಘಳಿಗೆ. ಜಗತ್ತಿನಲ್ಲಿ ಮಾನವ ಜನ್ಮ ಅತ್ಯಂತ ಶ್ರೇಷ್ಠವಾದುದು. ಮಾನವನಿಗೆ ಒಗ್ಗಿಕೊಳ್ಳುವಿಕೆಯ ಮಹತ್ವದ ಗುಣವನ್ನು ಹೊಂದಿದ್ದಾನೆ. ಯಾವುದೇ ಭೌಗೋಳಿಕ ಪರಿಸ್ಥಿತಿಯಲ್ಲಿಯೂ ಮನುಷ್ಯ ಜೀವಿಸಬಲ್ಲ. ಗುಣಮಟ್ಟದ ಜೀವನ ನಡೆಸಲು ಆರ್ಟ್ ಆಫ್ ಲಿವಿಂಗ್ ಕೇಂದ್ರಕ್ಕೆ ಬರಬೇಕು. ಕೆಲವೇ ಮನುಷ್ಯರು ನಿಸ್ವಾರ್ಥ ಸೇವೆ ಮಾಡಿ ಯುಗಪುರುಷರಾಗುತ್ತಾರೆ. ಅವರಲ್ಲಿ ಒಬ್ಬ ಶ್ರೇಷ್ಟ ಗುರು ಶ್ರೀ ರವಿಶಂಕರ್ ಗುರೂಜಿ.

CM Bommai participates in Art of Living Deepavali programme

ನಮ್ಮಲ್ಲಿ ಚರಿತ್ರೆ ಇದೆ, ಚಾರಿತ್ರ್ಯ ಬೇಕಿದೆ :

ನಮ್ಮ ಸನಾತನ ಧರ್ಮಕ್ಕೆ 5 ಸಾವಿರಗಳ ಇತಿಹಾಸವಿದೆ. ನಮ್ಮಲ್ಲಿ ಚರಿತ್ರೆ ಇದೆ, ಚಾರಿತ್ರ್ಯ ಬೇಕಿದೆ. ಸುಲಭ ರೀತಿಯಲ್ಲಿ ಜೀವನದ ಸಾಕ್ಷಾತ್ಕಾರ ಪಡೆಯಲು ಹಾಗೂ ಜೀವನವನ್ನು ಅರ್ಥಪೂರ್ಣವಾಗಿ ನಡೆಸಿಕೊಂಡು ಹೋಗಲು ಈ ಕೇಂದ್ರಕ್ಕೆ ಬರಲೇಬೇಕು. ವಿಶ್ವದ ಸುಮಾರು 140 ದೇಶದ ಜನರ ಸಮಾಗಮವನ್ನು ಈ ಆಧ್ಯಾತ್ಮಿಕ ಕೇಂದ್ರದಲ್ಲಿ ಕಾಣಬಹುದಾಗಿದೆ ಎಂದರು. ನಾಗರಿಕತೆ ಮತ್ತು ಸಂಸ್ಕೃತಿ ನಡುವೆ ಬಹಳ ವ್ಯತ್ಯಾಸವಿದೆ. ನಮ್ಮಲ್ಲಿರುವುದು ನಾಗರಿಕತೆ, ನಾವೇನಾಗಿದ್ದೇನೆ ಎನ್ನುವುದು ಸಂಸ್ಕೃತಿ. ನಾವೇನಾಗಿದ್ದೇವೆ ಎಂದು ಅರಿಯಲು ಆರ್ಟ್ ಆಫ್ ಲಿವಿಂಗ್ ಗೆ ಬರಬೇಕು ಎಂದರು.

ವಿಜ್ಞಾನ, ಆಧ್ಯಾತ್ಮ ಒಂದೇ ನಾಣ್ಯದ ಎರಡು ಮುಖಗಳು:

ವಿಜ್ಞಾನ ಮತ್ತು ಆಧ್ಯಾತ್ಮ,ಒಂದೇ ನಾಣ್ಯದ ಎರಡು ಮುಖಗಳು. ಆಧ್ಯಾತ್ಮಿಕತೆ ವಿಜ್ಞಾನಕ್ಕೆ ಪ್ರೇರಣೆ ನೀಡಿದರೆ, ವಿಜ್ಞಾನ ಆಧ್ಯಾತ್ಮಿಕತೆಯನ್ನು ನಿರೂಪಿಸುತ್ತದೆ. ವಿಜ್ಞಾನ ಮತ್ತು ಆತ್ಮಜ್ಞಾನವನ್ನು ಅರಿತುಕೊಳ್ಳುವುದು ಒಂದು ಕಲೆ. ಈ ಕಲೆಯನ್ನು ಜನರಿಗೆ ಸುಲಭವಾಗಿ ಅರಿವು ಮೂಡಿಸಲು ಈ ಕೇಂದ್ರಕ್ಕೆ ಆರ್ಟ್ ಆಫ ಲಿವಿಂಗ್ ಎಂದು ಹೆಸರಿಟ್ಟಿರಬಹುದು. ಜೀವನದ ಸರ್ವಕಾಲಿಕ ಸತ್ಯಗಳ ಜ್ಞಾನವನ್ನು ಪಡೆಯಬಹುದು. ಈ ಸರ್ವಕಾಲಿಕ, ವಿಶ್ವವ್ಯಾಪಿ ಸತ್ಯಗಳಿಗೆ ಯಾವುದೇ ಭಾಷೆ, ದೇಶದ ಬೇಧವಿಲ್ಲ. ವಿಶ್ವವ್ಯಾಪಿಯಾಗಿ ಭಕ್ತರು ಈ ಸತ್ಯವನ್ನು ಅರಿಯಬಹುದಾಗಿದೆ. ಭಕ್ತಿ ಎಂದರೆ ಕರಾರುರಹಿತ ಪ್ರೀತಿ. ಗುರುವಿನಲ್ಲಿ ಭಕ್ತಿಯಿಂದ ಲೀನವಾಗುವುದರಿಂದ ಜೀವನದ ಅರ್ಥಗಳನ್ನು ತಿಳಿಯಬಹುದು. ಹಣಕಾಸಿನ ಆರ್ಥಿಕತೆಯಲ್ಲಿ ಪಾಪಪುಣ್ಯವನ್ನು ಹಾಗೂ ಆಧ್ಯಾತ್ಮದಲ್ಲಿ ಲಾಭನಷ್ಟವನ್ನು ನೋಡುತ್ತೇನೆ. ಇಡೀ ಜಗತ್ತಿನಾದ್ಯಂತ ಬದುಕಿನ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಜೀವನೋತ್ಸಾಹವಿರುವ ಕೇಂದ್ರದಿಂದ ಇಡೀ ವಿಶ್ವಕ್ಕೆ ಒಳಿತಾಗುತ್ತಿದೆ. ಶ್ರೀಗುರುಗಳು, ಜೀವನದ ಕತ್ತಲನ್ನು ಸರಿಸಿ ಬೆಳಕನ್ನು ತರುವ ಕೆಲಸವನ್ನು ದಿನನಿತ್ಯ ಮಾಡುತ್ತಿದ್ದಾರೆ ಎಂದರು.

English summary
Art of Living is a spiritual center for understanding the answers to life's most difficult questions. Chief Minister Basavaraja Bommai said that one should come to this center to learn the methods of finding the meaning of life in a simple way.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X