ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸೇನಾ ಹೆಲಿಕಾಪ್ಟರ್‌ನಲ್ಲಿ ಅಂಬಿ ಪಾರ್ಥಿವ ಶರೀರ ಮಂಡ್ಯಕ್ಕೆ ರವಾನೆ

|
Google Oneindia Kannada News

Recommended Video

Ambareesh, Kannada Actor Demise: ಸೇನಾ ಹೆಲಿಕಾಪ್ಟರ್‌ನಲ್ಲಿ ಅಂಬಿ ಪಾರ್ಥಿವ ಶರೀರ ಮಂಡ್ಯಕ್ಕೆ: ಚಿಂತನೆ

ಬೆಂಗಳೂರು, ನವೆಂಬರ್ 25: ರೆಬೆಲ್ ಸ್ಟಾರ್ ಅಂಬರೀಶ್ ಪಾರ್ಥಿವ ಶರೀರವನ್ನು ಸೇನಾ ಹೆಲಿಕಾಪ್ಟರ್ ಮೂಲಕ ಮಂಡ್ಯಕ್ಕೆ ರವಾನೆಯಾಗುತ್ತಿದೆ. ಎಚ್‌ಎಎಲ್‌ ವಿಮಾನ ನಿಲ್ದಾಣದಿಂದ ಈಗಾಗಲೇ ಮಂಡ್ಯದತ್ತ ಹೆಲಿಕಾಪ್ಟರ್ ಹಾರಿದೆ.

ಅಂಬರೀಶ್ ಅವರ ಅಂತ್ಯಕ್ರಿಯೆ ಮಂಡ್ಯದಲ್ಲೇ ನಡೆಯಬೇಕು ಎಂದು ಹೇಳುತ್ತಿದ್ದಾರೆ ಆದರೆ ಕಂಠೀರವ ಸ್ಟುಡಿಯೋದಲ್ಲಿ ಡಾ ರಾಜ್‌ಕುಮಾರ್ ಸಮಾಧಿ ಎದುರಿನಲ್ಲಿ ಅಂಬರೀಶ್ ಸಮಾಧಿ ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ. ಆದರೆ ಅಂಬರೀಶ್ ಅಭಿಮಾನಿಗಳ ಸಲುವಾಗಿ ಮಂಡ್ಯಕ್ಕೆ ಏರ್‌ಲಿಫ್ಟ್ ಮೂಲಕ ಪಾರ್ಥಿವ ಶರೀರವನ್ನು ತೆಗೆದುಕೊಂಡು ಹೋಗಿ ಅಲ್ಲಿ ಅಂತಿಮ ದರ್ಶನಕ್ಕಿಟ್ಟು ಬಳಿಕ ಮತ್ತೆ ಬೆಂಗಳೂರಿಗೆ ಕರೆತರುವ ಪ್ರಯತ್ನ ಮಾಡಲಾಗುತ್ತದೆ ಎಂದು ತಿಳಿಸಿದರು.

ಅನಾರೋಗ್ಯಕ್ಕೆ ಸೆಡ್ಡು: ಆಂಬ್ಯುಲೆನ್ಸ್‌ನಲ್ಲಿ ಹೋಗಿ ಸಿನಿಮಾ ನೋಡಿದ್ದ ಅಂಬರೀಶ್ಅನಾರೋಗ್ಯಕ್ಕೆ ಸೆಡ್ಡು: ಆಂಬ್ಯುಲೆನ್ಸ್‌ನಲ್ಲಿ ಹೋಗಿ ಸಿನಿಮಾ ನೋಡಿದ್ದ ಅಂಬರೀಶ್

ಸೇನಾ ಹೆಲಿಕಾಪ್ಟರ್‌ನ್ನು ಕೇಳಿದ್ದೇವೆ, ರಕ್ಷಣಾ ಇಲಾಖೆಯಿಂದ ಒಪ್ಪಿಗೆ ದೊರೆತರೆ ಸೇನಾ ಹೆಲಿಕಾಪ್ಟರ್‌ನಲ್ಲಿ ಪಾರ್ಥಿವ ಶರೀರ ತೆಗೆದುಕೊಂಡು ಹೋಗಲಾಗುತ್ತದೆ, ರಸ್ತೆಯಲ್ಲಿ ಹೋದರೆ ಸುರಕ್ಷತೆಯ ಕೊರತೆ ಎದುರಾಗುತ್ತದೆ, ಅಂಬರೀಶ್ ಅವರು ಚಿತ್ರರಂಗ, ರಾಜಕೀಯ ರಂಗದಲ್ಲೂ ಸೇವೆ ಸಲ್ಲಿಸಿದ್ದಾರೆ. ಅವರಿಗೆ ಗೌರವ ಕೊಡಬೇಕು. ಇದಕ್ಕೆ ಎಲ್ಲರ ಸಹಕಾರ ಬೇಕಿದೆ.

CM assures govt trying to airlift Ambareesh body to Mandya

ಕಂಠೀರವ ಸ್ಟುಡಿಯೋದಲ್ಲಿ ಅಂಬರೀಶ್ ಸಮಾಧಿ: ರಾಜ್ ಕುಟುಂಬ ಒಪ್ಪಿಗೆಕಂಠೀರವ ಸ್ಟುಡಿಯೋದಲ್ಲಿ ಅಂಬರೀಶ್ ಸಮಾಧಿ: ರಾಜ್ ಕುಟುಂಬ ಒಪ್ಪಿಗೆ

ಮಧ್ಯಾಹ್ನದ ನಂತರ ಒಂದು ತೀರ್ಮಾನಕ್ಕೆ ಬರಲಾಗುತ್ತದೆ, ಅವರ ಅಭಿಮಾನಿಗಳು ಭಾವನಾತ್ಮಕವಾಗಿ ಜನರ ಆಸ್ತಿ ಪಾಸ್ತಿಗಳನ್ನು ನಷ್ಟ ಮಾಡದೆ ಅನಾನುಕೂಲ ಉಂಟು ಮಾಡದೆ ಶಾಂತಿಯುತವಾಗಿ ಅಂತಿಮ ದರ್ಶನ ಪಡೆಯಬೇಕು ಎಂದು ಮನವಿ ಮಾಡಿದರು.

English summary
Chief minister H.D.Kumaraswamy has assured that the government is trying to lift Ambareesh body to Mandya through defence helicopter by Sunday afternoon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X